ಆಹಾರ ಇಲ್ಲದೇ ರೋದಿಸುತ್ತಿವೆ ಗೋವುಗಳು
ಲಾಕ್‌ಡೌನ್ ಹೊಡೆತಕ್ಕೆ ಗೋವುಗಳ ಮೂಕ ವೇದನೆಗೋ ರಕ್ಷಕರು ಬಂದು ಹಸಿವು ನೀಗಿಸುವರೇ?
Team Udayavani, Apr 7, 2020, 4:55 PM IST
ಬೆಳಗಾವಿ: ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ವಿಧಿಸಿದ್ದರಿಂದ ನಗರದಲ್ಲಿರುವ ನೂರಾರು ಗೋವುಗಳು ಹಸಿವಿನಿಂದ ಬಳಲುತ್ತಿವೆ. ನಗರದ ಬಹುತೇಕ ಕಡೆಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ತಿರುಗಾಡುವ ಗೋವುಗಳು, ಬಿಡಾಡಿ
ದನಗಳು ಅಲ್ಲಿ-ಇಲ್ಲಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಈಗ ಲಾಕ್ ಡೌನ್ ಆಗಿದ್ದರಿಂದ ಎಲ್ಲವೂ ಬಂದ್ ಆಗಿದ್ದು, ಹೀಗಾಗಿ ಗೋವುಗಳಿಗೆ ತಿನ್ನಲು ಏನೂ ಇಲ್ಲದೇ ಆಕ್ರಂದನ ಹೆಚ್ಚಿದೆ.
ಗೋವುಗಳ ಮೂಕ ವೇದನೆ ಯಾರಿಗೂ ಕೇಳಿಸುತ್ತಿಲ್ಲ. ಈ ಮೊದಲು ಮಾರುಕಟ್ಟೆಯಲ್ಲಿ
ಅಳಿದುಳಿದ ತರಕಾರಿ, ಹಣ್ಣು, ಕಾಯಿ ಪಲ್ಯೆಗಳನ್ನು ಅಂಗಡಿಕಾರರು ಎಸೆದು ಹೋಗುತ್ತಿದ್ದರು. ರಾತ್ರಿ ಎಲ್ಲ ಕಡೆಗೆ ತಿರುಗಾಡುವ ಗೋವುಗಳು ಇದನ್ನೇ ತಿನ್ನುತ್ತಿದ್ದವು. ನಗರದ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ, ಸಮಾದೇವಿ ಗಲ್ಲಿ, ಕಾಕತಿವೇಸ್, ಕಡೋಲಕರ ಗಲ್ಲಿ, ಹುತಾತ್ಮ ಚೌಕ್,
ನರಗುಂದಕರ ಭಾವೆ ಚೌಕ್ ಸೇರಿದಂತೆ ಎಲ್ಲ ಕಡೆಯೂ ಗೋವುಗಳಿಗೆ ತಿನ್ನಲು ಏನಾದರೂ ಸಿಗುತ್ತಿತ್ತು. ಈಗ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ಏನೂ ಇಲ್ಲದೇ ಗೋವುಗಳು ಪರದಾಡುತ್ತಿವೆ.
ಮಾರುಕಟ್ಟೆಗಳಲ್ಲಿ ಜನರೂ ಬರುತ್ತಿಲ್ಲ, ಅಂಗಡಿಕಾರರೂ ಇಲ್ಲ. ಮಾರುಕಟ್ಟೆ ಪ್ರದೇಶಗಳ ಸುತ್ತಲೂ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಟ್‌ಗಳನ್ನು ಹಾಕಿ ಮಾಗ್ ಬಂದ್ ಮಾಡಿದ್ದಾರೆ. ಬೇರೆ ಕಡೆಗೆ ಹೋಗಲೂ ಗೋವುಗಳು ಪರದಾಡುತ್ತಿವೆ. ಹಸಿವಿನಿಂದ ಕೆಲವು ಗೋವುಗಳು ಕಣ್ಣೀರು ಸುರಿಸುತ್ತಿವೆ. ಹೀಗಾಗಿ ಈ ಗೋವುಗಳ ಸ್ಥಿತಿ ಶೋಚನೀಯವಾಗಿದೆ. ಹೊಟ್ಟೆಗೆ ಏನೂ ಇಲ್ಲದೇ ಕಣ್ಣೀರು ಹಾಕುತ್ತಿರುವ ಈ ಗೋವುಗಳ ಹಸಿವು ನೀಗಿಸಲು ಗೋ ರಕ್ಷಕರು ಗಮನ ಹರಿಸಬೇಕಾಗಿದೆ. ಗೋವುಗಳ ನೋವಿಗೆ ಸ್ಪಂದಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.