ಬೆಳಗಾವಿ: ಕೆಎಲ್‌ಇನಲ್ಲಿ ಕ್ಲಿಷ್ಟಕರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ
Team Udayavani, Oct 30, 2024, 11:05 AM IST
ಉದಯವಾಣಿ ಸಮಾಚಾರ
ಬೆಳಗಾವಿ: ತೀವ್ರತರವಾದ ಎದೆಬಿಗಿತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಹೃದಯದ ಬಲಭಾಗದಲ್ಲಿ ಬೆಳೆದಿದ್ದ ಗಡ್ಡೆ ಹಾಗೂ ಶ್ವಾಸಕೋಶದ ರಕ್ತನಾಳಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಅವನನ್ನು ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ
ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ 38 ವರ್ಷದ ರೋಗಿಯೊಬ್ಬರು ಆಸ್ಪತ್ರೆಗೆ ಬಂದ ತಕ್ಷಣ ಹƒದ್ರೋಗ ತಜ್ಞ ಡಾ| ಸಮೀರ್ ಅಂಬರ್ ಅವರು ವಿವಿಧ ತಪಾಸಣೆ ನಡೆಸಿದಾಗ, ರೈಟ್ ಆಟ್ರಿಯಮ್ ಮೈಕ್ಸೋಮಾ ಮತ್ತು ಪಲ್ಮನರಿ ಎಂಬೋಲಿಮ್ ಎರಡನ್ನೂ ಹೊಂದಿರುವದು ಕಂಡು ಬಂದಿತು.
ಇದರಿಂದ ರೋಗಿಯ ಜೀವಕ್ಕೆ ಅಪಾಯ ವಿತ್ತು. ಆದ್ದರಿಂದ ಹೃದಯದ ಬಲಭಾಗ ದಲ್ಲಿದ್ದ ಗಡ್ಡೆ (ರೈಟ್ ಆಟ್ರಿಯಮ್
ಮೈಕ್ಸೋಮಾ) ಮತ್ತು ಪಲ್ಮನರಿ ಎಂಬಾಲಿಸಮ್‌ಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಸಾಮಾನ್ಯವಾಗಿ ಶೇ. 80 ಹೃದಯದ ಗೆಡ್ಡೆಗಳು ಎಡ ಭಾಗದಲ್ಲಿರುತ್ತವೆ. ಆದರೆ ಈ ರೋಗಿಗೆ ಬಲಭಾಗ ದಲ್ಲಿತ್ತು. ಇಂತಹ ಪ್ರಕರಣಗಳು
ಲಕ್ಷ ರೋಗಿಗಳಲ್ಲಿ ಒಬ್ಬರಿಗೆ ಮಾತ್ರ ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸಿದರ ಪರಿಣಾಮ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ| ಪಾರ್ಶ್ವನಾಥ ಪಾಟೀಲ ಅವರು ತಿಳಿಸಿದ್ದಾರೆ.
ಹೃದಯ ಶಸ್ತ್ರಚಿಕಿತ್ಸಕರಾದ ಡಾ| ದರ್ಶನ ಡಿ.ಎಸ್ ಮತ್ತು ಡಾ| ಪಾರ್ಶ್ವನಾಥ ಪಾಟೀಲ ನೇತೃತ್ವದ ಶಸ್ತ್ರಚಿಕಿತ್ಸಾ ತಂಡಕ್ಕೆ ಅರವಳಿಕೆ ತಜ್ಞ ವೈದ್ಯರಾದ ಡಾ| ಶರಣಗೌಡ ಪಾಟೀಲ ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಕರ್ನಲ್ ಎಂ ದಯಾನಂದ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.