ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
Team Udayavani, Oct 31, 2024, 1:46 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಮಹಾನಗರ ಪಾಲಿಕೆ ದುಂದು ವೆಚ್ಚ ಮಾಡುತ್ತಿದೆ. ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ವೇಳೆ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿರುವ ಬಿಲ್ 37 ಸಾವಿರ ರೂ. ಪಾವತಿಸಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ.
ನಗರದಲ್ಲಿ ಹಮ್ಮಿಕೊಳ್ಳುವ ಉತ್ಸವ, ಕಾರ್ಯಕ್ರಮ, ಜಯಂತಿಗಳಿಗೆ ಹಣ ಪೋಲು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಇಷ್ಟೊಂದು ಪ್ರಮಾಣದಲ್ಲಿ ದುಂದುವೆಚ್ಚ ಆಗಿರುವುದು ಕಂಡು ಬಂದಿದ್ದು, ಪಾಲಿಕೆ ಉತ್ತರಿಸಬೇಕಿದೆ. 2023ರ ಕರ್ನಾಟಕ ರಾಜ್ಯೋತ್ಸವದಲ್ಲಿ ಹೂವಿನ ಹಾರಕ್ಕೆ 37 ಸಾವಿರ ರೂ. ವೆಚ್ಚ ಮಾಡಿರುವುದಾಗಿ ಸಂಬಂಧಿಸಿದ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಲಾಗಿದೆ. ರಾಜ್ಯೋತ್ಸವ ವೇಳೆ ಸಾಮಾನ್ಯವಾಗಿ ಮಹಾನಗರ ಪಾಲಿಕೆಯಿಂದ ರಾಣಿ ಚನ್ನಮ್ಮ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ. ಆದರೆ ಪ್ರತಿಮೆಗೆ ಹಾಕಿರುವ ಹಾರ ಇಷ್ಟೊಂದು ದೊಡ್ಡ ಮೊತ್ತದ್ದೇ? ಎಂಬ ಪ್ರಶ್ನೆ ಕಾಡುತ್ತಿದೆ.
ಇದೇ ವರ್ಷ ಏಪ್ರೀಲ್‌ನಲ್ಲಿ ನಡೆದ ಡಾ| ಬಾಬಾಸಾಹೇಬ ಅಂಬೇಡ್ಕರ್ ಜಯಂತಿಗೂ ಸಾಕಷ್ಟು ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಅಂಬೇಡ್ಕರ್ ಜಯಂತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ಆಯಾ ಸಂಘಟನೆಗಳು, ಯುವಕ ಮಂಡಳಗಳ ವತಿಯಿಂದ ಬೃಹತ್ ಮೆರವಣಿಗೆ ನಡೆಯುತ್ತದೆ. ಮಹಾನಗರ ಪಾಲಿಕೆಯಿಂದ ಅಂಬೇಡ್ಕರ್
ಉದ್ಯಾನವನದಲ್ಲಿ ನಡೆಯುವ ಕಾರ್ಯಕ್ರಮ ವೇದಿಕೆ ಹಾಗೂ ಇತರೆ ಪೆಂಡಾಲ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಖರ್ಚು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೆಂಡಾಲ್ ಅಳವಡಿಸಿದ್ದಕ್ಕೆ 97,412 ರೂ.,ಬೋಗಾರವೇಸ್, ಹುತಾತ್ಮ ಚೌಕ್, ಸಮಾದೇವಿ ಗಲ್ಲಿಯಲ್ಲಿ ಪೆಂಡಾಲ್ ಹಾಕಿದ್ದಕ್ಕೆ 95,886 ರೂ. ಬಿಲ್ ಪಾಸ್ ಆಗಿದೆ. ಆದರೆ ಈ ಪ್ರದೇಶಗಳಲ್ಲಿ ಪಾಲಿಕೆಯಿಂದ ಪೆಂಡಾಲ್ ಹಾಕಿಯೇ ಇರಲಿಲ್ಲ. ಪೆಂಡಾಲ್ ಇಲ್ಲದೇ ಬಿಲ್ ಪಾಸ್ ಮಾಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದು ಪಾಲಿಕೆ ಸದಸ್ಯರು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆಯಿಂದ ಬಾಬು ಜಗಜೀವನರಾಮ್ ಜಯಂತಿ ಆಚರಣೆಗೆ ಪೆಂಡಾಲ್ ಹಾಗೂ ಸೌಂಡ್ ಸಿಸ್ಟ್‌ಂಗೆ 94,232
ರೂ., ತಾತ್ಕಾಲಿಕ ನಿರ್ವಹಣೆಗೆ 50,740 ರೂ. ವೆಚ್ಚ ಮಾಡಲಾಗಿದೆ. ಆದರೆ ಜಗಜೀವನರಾಮ್ ಜಯಂತಿ ಆಚರಣೆ ಹೆಸರಿನಲ್ಲಿ ದುಂದುವೆಚ್ಚ ಆಗಿರುವುದು ಕಂಡು ಬಂದಿದೆ.
ಈ ವರ್ಷ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗಾಗಿ ಬೋಗಾರವೇಸ್ ಸರ್ಕಲ್‌ನಲ್ಲಿ 49,260 ರೂ., ಖಡೇಬಜಾರ್‌ನಲ್ಲಿ ಬ್ಯಾರಿಕೇಡ್ ಅಳವಡಿಸಲು 97,468 ರೂ., ಬೋಗಾರ್ ವೇಸ್‌ನಲ್ಲಿ ಗ್ಯಾಲರಿ ನಿರ್ಮಾಣಕ್ಕೆ 99,120 ರೂ. ವೆಚ್ಚ ತಗುಲಿದೆ. ಹೋಳಿ ಹಬ್ಬದಂದು ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಅಳವಡಿಸಲು 56,640 ರೂ. ವೆಚ್ಚ ಮಾಡಿ
ಸಂಬಂ ಧಿಸಿದ ಗುತ್ತಿಗೆದಾರ ಹೆಸರಿನಲ್ಲಿ ಚೆಕ್ ನೀಡಲಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುವ ಬದಲು ಹಣ ಉಳಿತಾಯ ಮಾಡಿದ್ದರೆ ನಗರದ ವಿವಿಧ ಅಭಿವೃದ್ಧಿ
ಕಾರ್ಯಗಳಿಗೆ ಬಳಸಬಹುದಾಗಿತ್ತು. ಈಗ ಮತ್ತೆ ಕರ್ನಾಟಕ ರಾಜ್ಯೋತ್ಸವ, ಡಾ|ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ
ಶಿವಾಜಿ ಮಹಾರಾಜ, ಜಗಜೀವನರಾಮ್ ಜಯಂತಿ ಸೇರಿ ವಿವಿಧ ಉತ್ಸವಗಳಿಗೆ ದುಂದುವೆಚ್ಚ ಮಾಡದೇ ಪಾಲಿಕೆ
ಎಚ್ಚರಿಕೆಯಿಂದ ಹಣ ವ್ಯಯಿಸಿದ್ದರೆ ಪಾಲಿಕೆಯ ಬೊಕ್ಕಸ ಸುರಕ್ಷಿತವಾಗುವುದರ ಜತೆಗೆ ನಗರದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಮಹಾಶಿವರಾತ್ರಿಗೂ 75 ಸಾವಿರ ರೂ. ವೆಚ್ಚ ಮಹಾಶಿವರಾತ್ರಿಯಂದು ನಗರದಲ್ಲಿ ವಿದ್ಯುದ್ದೀಪಗಳ ಅಲಂಕಾರಕ್ಕೆ 75,385
ರೂ. ಬಿಲ್ ಪಾಸ್ ಆಗಿದೆ. ಆದರೆ ಮಹಾಶಿವರಾತ್ರಿಯಂದು ನಗರದ ಕಪಿಲೇಶ್ವರ ಮಂದಿರದಲ್ಲಿ ದೀಪಾಲಂಕಾರ ವನ್ನು ಅಲ್ಲಿನ ಆಡಳಿತ ಮಂಡಳಿಯವರೇ ಮಾಡಿರುತ್ತಾರೆ. ಆದರೆ ಪಾಲಿಕೆ ಯಾವ ಪ್ರದೇಶದಲ್ಲಿ ಒಂದು ದಿನದ ಮಟ್ಟಿಗೆ 75 ಸಾವಿರ ರೂ. ವೆಚ್ಚ ಮಾಡಿದೆ ಎಂಬುದೂ ಅನುಮಾನಕ್ಕೆ ಕಾರಣವಾಗಿದೆ.
ಮಹಾನಗರ ಪಾಲಿಕೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂಥದರಲ್ಲಿ ಕಳೆದ ಒಂದೆರಡು ವರ್ಷಗಳಿಂದ ಅನೇಕ ಕಾರ್ಯಕ್ರಮಗಳಿಗೆ ದುಂದುವೆಚ್ಚ ಆಗುತ್ತಿರುವುದು ದಾಖಲೆ ಮೂಲಕ ಗೊತ್ತಾಗಿದೆ. ಆದರೆ ಪಾಲಿಕೆ ಈ ಬಗ್ಗೆ ಗಮನಹರಿಸಿ ಮುಂದಿನ ದಿನಗಳಲ್ಲಿ ಈ ತರಹ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದ್ದಾರೆ.
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಹೊಸ ಓಟಿಟಿ ಪ್ಲೇಯರ್ ಆರಂಭ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ
Bengaluru: ಬಸ್ ಕಂಡಕ್ಟರ್, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.