ಬೆಳಗಾವಿ ಪಾಲಿಕೆಯಲ್ಲಿ ಮೊದಲ ಬಾರಿಗೆ ಮೊಳಗಿದ ನಾಡಗೀತೆ
Team Udayavani, Jun 25, 2017, 3:45 AM IST
ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಶನಿವಾರ ಮೊದಲ ಬಾರಿಗೆ ಕನ್ನಡ ನಾಡಗೀತೆ ಮೊಳಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕನ್ನಡ-ಮರಾಠಿ ಭಾಷಾ ಜಗಳದಲ್ಲಿಯೇ ಮುಳುಗಿದ್ದ ಪಾಲಿಕೆಯಲ್ಲಿ “ಜಯ ಭಾರತ ಜನನಿಯ ತನುಜಾತೆ…’ನಾಡಗೀತೆ ಮೊಳಗಿತು.
ಕನ್ನಡ ವಿರೋಧಿ ಚಟುವಟಿಕೆಯಲ್ಲಿ ಹಾಗೂ ರಾಜ್ಯೋತ್ಸವದಂದು ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವ ಮಾಜಿ ಮೇಯರ್ ಸರಿತಾ ಪಾಟೀಲ, ಶಾಸಕ ಸಂಭಾಜಿ ಪಾಟೀಲ ಸೇರಿ ಎಂಇಎಸ್‌ನ ಎಲ್ಲ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಎಂಇಎಸ್ ಸದಸ್ಯರಿಗೆ ಜಿಲ್ಲಾಧಿಕಾರಿ ಎನ್. ಜಯರಾಮ್ ಚಾಟಿ ಬೀಸಿದ್ದರಿಂದ ಈ ಬದಲಾವಣೆ ಕಾಣುವಂತಾಗಿದೆ.
ಬೆಳಗಾವಿ ಪಾಲಿಕೆಯಲ್ಲಿ ಮರಾಠಿ ಭಾಷಿಕರ ಆಡಳಿತವಿದೆ. ಮೊದಲ ಬಾರಿಗೆ ನಾಡಗೀತೆ ಹಾಡುವ ಪ್ರಕ್ರಿಯೆ ನಡೆದಿದ್ದಕ್ಕೆ ಮರಾಠಿ ಭಾಷಿಕ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನಾಡಗೀತೆ ಬಗ್ಗೆ ಸರ್ಕಾರದಿಂದ ಆದೇಶ ಬಂದಿದೆಯೇ ಎಂದು ಪಾಲಿಕೆ ಅಭಿಯಂತರಾದ ಲಕ್ಷ್ಮೀ ನಿಪ್ಪಾಣಿಕರ ಬಳಿ ಕೇಳಿದ್ದರು. ಸರ್ಕಾರದಿಂದ ಡಿಸಿ ಕಚೇರಿಗೆ ನಾಡಗೀತೆ ಹೇಳುವ ಬಗ್ಗೆ ಆದೇಶ ಬಂದಿದೆ ಎಂದು ಅವರು ಹೇಳಿದಾಗ ಸದಸ್ಯರು ಮರಳಿದರು.
ಶನಿವಾರ ನಡೆದ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ಮುನ್ನ ಕೋರಂ ಭರ್ತಿ ಆಗದ್ದನ್ನು ಗಮನಿಸಿದ ಜಿಲ್ಲಾಧಿಕಾರಿ, ಸದಸ್ಯರಿಗೆ ಸೂಚನೆ ನೀಡಿ, ಐದು ನಿಮಿಷದೊಳಗೆ ಕೋರಂ ಭರ್ತಿ ಆಗದಿದ್ದರೆ ಬಾಗಿಲು ಬಂದ್ ಮಾಡುವುದಾಗಿ ಹೇಳಿದರು. ಎಲ್ಲ ಸದಸ್ಯರೂ ಒಳ ಬಂದೊಡನೆ ನಾಡಗೀತೆ ಹಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.