ಬೆಳಗಾವಿ:ಒಂದೇ ದಿನ 7 ಕೋಟಿ ಮೌಲ್ಯದ ಮದ್ಯ ಬಿಕರಿ
Team Udayavani, Jan 2, 2023, 5:28 PM IST
ಬೆಳಗಾವಿ: ಜಿಲ್ಲೆಯ ಜನ ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.
ಕಳೆದ ಎರಡು ವರ್ಷಗಳಿಂದ ಮದ್ಯ ಮಾರಾಟ ತುಸು ಕಳೆಗುಂದಿತ್ತು. ಆದರೆ ಈ ಬಾರಿ ಬಂಪರ್ ಆದಾಯ ಬಂದಿದ್ದು, 2023 ನ್ಯೂ ಇಯರ್‌ಗೆ ಬಳಷು ಮದ್ಯ ಪ್ರಿಯರು ಕಿಕ್ ಏರಿಸಿಕೊಂಡಿದ್ದಾರೆ. ಜಿಲ್ಲೆಯ ದಕ್ಷಿಣ ಹಾಗೂ ಉತ್ತರ ವಿಭಾಗದಲ್ಲಿ ಡಿ. 31ರಂದು ಒಂದೇ ದಿನ 5.56 ಕೋಟಿ ರೂ. ಮದ್ಯ ಹಾಗೂ 1.49 ಕೋಟಿ ರೂ. ಬಿಯರ್ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ ಒಟ್ಟು 14,800 ಮದ್ಯದ ಬಾಕ್ಸ್ ಹಾಗೂ 8,381 ಬಿಯರ್ ಬಾಕ್ಸ್ ಗಳು ಮಾರಾಟವಾಗಿವೆ. 2022ರಲ್ಲಿ ಕಳೆದ ಏಪ್ರೀಲ್‌ದಿಂದ ಡಿಸೆಂಬರ್ ವರೆಗೆ 133.33 ಕೋಟಿ ರೂ. ಮೌಲ್ಯದ 3,57,206 ಬಾಕ್ಸ್ ಮದ್ಯ ಹಾಗೂ 23.04 ಕೋಟಿ ರೂ. ಮೌಲ್ಯದ 1,34,510 ಬಾಕ್ಸ್ ಬಿಯರ್ ಮಾರಾಟವಾಗಿವೆ. ಕಳೆದ ವರ್ಷ ಡಿಸೆಂಬರ್ 31ರಂದು ವರ್ಷಾಚರಣೆ ಸಂಭ್ರಮದಲ್ಲಿ ಒಂದೇ ದಿನ 4.94 ಕೋಟಿ ರೂ. ಮೌಲ್ಯದ ಮದ್ಯ
ಮಾರಾಟವಾಗಿತ್ತು. ಈ ವರ್ಷ 5.56 ಕೋಟಿ ರೂ. ಮೌಲ್ಯದ ಮದ್ಯ ಹಾಗೂ 1.49 ಕೋಟಿ ರೂ. ಮೌಲ್ಯದ ಬಿಯರ್ ಸೇರಿ ಒಟ್ಟು 7 ಕೋಟಿ ರೂ.ಗೂ ಹೆಚ್ಚು
ಮಾರಾಟವಾಗುವ ಮೂಲಕ ಭರ್ಜರಿ ಆದಾಯ ಸಿಕ್ಕಿದೆ.
ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ. ಒಂದೇ ದಿನ ಸುಮಾರು 7 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟವಾಗಿದೆ.
ರವಿ ಮುರಗೋಡ, ಡಿಎಸ್‌ಪಿ,
ಬೆಳಗಾವಿ ಉಪವಿಭಾಗ
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.