ಉಚಿತ ಕ್ಲಿನಿಕ್ ತೆರೆಯಲು ಶಾಸಕ ಪಾಟೀಲ ಚಿಂತನೆ
Team Udayavani, Apr 10, 2020, 5:49 PM IST
ಬೆಳಗಾವಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ವೈದ್ಯರ ಜೊತೆ ಸಭೆ ನಡೆಸಿದರು
ಬೆಳಗಾವಿ: ಕೊರೊನಾ ವೈರಸ್‌ದಿಂದ ಜಗತ್ತು ತತ್ತರಿಸಿದೆ. ಈ ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಲೌಕ್‌ಡೌನ್ ಆದೇಶ ಜಾರಿ ಮಾಡಿರುವುದರಿಂದ ದೈನಂದಿನ ಬದುಕು ದುಸ್ತರವಾಗಿದೆ. ಮುಖ್ಯವಾಗಿ ಕಳೆದ 15 ದಿನಗಳಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದಾಗಿದ್ದು, ಸಾಮಾನ್ಯ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ-ಕೈ ನೋವು ಅನುಭವಿಸುತ್ತಿರುವವರು ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆಯಲು ತುಂಬಾ ಅನಾನುಕೂಲವಾಗುತ್ತಿದೆ.
ಜನರ ಈ ಗಂಭೀರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೊಸ ಪ್ರಯೋಗ ನಡೆಸಲು ಚಿಂತನೆ ಮಾಡಿದ್ದು, ಉಚಿತ ಕ್ಲಿನಿಕ್ ಎಂಬ ಹೊಸ ಕಲ್ಪನೆಗೆ ಚಾಲನೆ ನೀಡಲಾಗುತ್ತಿದೆ. ಸಣ್ಣ ಪುಟ್ಟ ಆರೋಗ್ಯ ಸಂಬಂಧಿ ಔಷಧಿ ಹಾಗೂ ಮಾತ್ರೆಗಳನ್ನು ನೀಡಿ ಜನರಿಗೆ ತುರ್ತು ಚಿಕಿತ್ಸಾ ಕೇಂದ್ರಗಳ ಮಾದರಿಯಲ್ಲಿ ಉಚಿತ ಕ್ಲಿನಿಕ್ ತೆರೆಯಲಾಗುತ್ತಿದೆ. ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ 26 ವಾರ್ಡ್ ಗಳ ಸರಕಾರಿ ಶಾಲೆಗಳು ಹಾಗೂ ಮಂಗಲ ಕಾರ್ಯಾಲಯಗಳನ್ನು ಈ ಕ್ಲಿನಿಕ್‌ಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಖಾಸಗಿ ವೈದ್ಯರೊಂದಿಗೆ ಈಗಾಗಲೇ ಸಭೆ ನಡೆಸಿರುವ ಶಾಸಕರು ಆದಷ್ಟು ಬೇಗ ಜನಸಾಮಾನ್ಯರಿಗೆ ಇದರ ಸೌಲಭ್ಯ ಒದಗಿಸುವ ರವಸೆ ನೀಡಿದ್ದಾರೆ.
ಇದಲ್ಲದೆ ವೈದ್ಯರ ಸುರಕ್ಷತೆ ದೃಷ್ಟಿಯಿಂದ ಬೇಕಾದ ಪಿಪಿಇ ಕಿಟ್ ಹಾಗೂ ರೋಗಿಗಳಿಗೆ ತಗಲುವ ಔಷಧಿಗಳನ್ನು ಶಾಸಕ ಅಭಯ ಪಾಟೀಲ ತಮ್ಮ ಸ್ವಂತ ಖರ್ಚಿನಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.