ಬೆಳಗಾವಿ: ಕೆರೆಗಳ ಪುನರುಜೀವನಕ್ಕೆ ನೆರವಾದ ಅಮೃತ “ಖಾತ್ರಿ
ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತು ಅರಿವು ಮೂಡಿಸುವುದು ಈ ಅಮೃತ ಸರೋವರ ಯೋಜನೆಯ ಆಶಯ.
Team Udayavani, Jul 15, 2023, 6:05 PM IST
ಬೆಳಗಾವಿ: ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿ ಅದನ್ನು ಪರಿಪೂರ್ಣವಾಗಿ ಬಳಕೆ ಮಾಡಬೇಕು.
ಸುತ್ತಲಿನ ಪ್ರದೇಶದ ಅಂತರ್ಜಲ ಹೆಚ್ಚಿಸುವದರ ಜೊತೆಗೆ ಜನ ಮತ್ತು ಜಾನುವಾರುಗಳ ದಾಹ ತೀರಿಸಬೇಕು. ಈ ರೀತಿಯ ಜಲಜಾಗೃತಿ ಎಷ್ಟು ಮಾಡಿದರೂ ಕಡಿಮೆಯೇ. ಆದರೆ ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಸುಂದರ ಕೆರೆ ನಿರ್ಮಿಸಿ ನೀರು
ಸಂಗ್ರಹ ಮಾಡುವದು ನಿಜಕ್ಕೂ ಹೆಮ್ಮೆ ಪಡುವ ಸಾಧನೆಯೇ ಎನ್ನಬಹುದು.
ಅಂತಹ ಒಂದು ಹೆಮ್ಮೆಯ ಕೆಲಸ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ
ಅಮೃತ ಸರೋವರ ಯೋಜನೆಯ ಹೆಸರಿನಲ್ಲಿ ಹೆಮ್ಮೆಪಡುವ ಈ ಮಾದರಿ ಕಾರ್ಯವಾಗಿದೆ. ಇಂತಹ ಒಂದು ಒಳ್ಳೆಯ ಮಾದರಿ ಕೆಲಸಕ್ಕೆ ಪರಿಸರವಾದಿಗಳು ಮತ್ತು ಗ್ರಾಮೀಣ ಪ್ರದೇಶದ ಜನರು ಭೇಷ್ ಎಂದಿದ್ದಾರೆ. ಅಂತರ್ಜಲ ಮೂಲಗಳನ್ನು ಅಭಿವೃದ್ಧಿ
ಪಡಿಸುವುದು, ಮುಂಬರುವ ದಿನಗಳಲ್ಲಿ ನೀರಿಗಾಗಿ ನಡೆಸುವ ಪೈಪೋಟಿಯನ್ನು ತಪ್ಪಿಸುವುದು, ಜಲ ಸಂರಕ್ಷಣೆಯಿಂದ ಕೃಷಿ
ಚಟುವಟಿಕೆ, ಅರಣ್ಯೀಕರಣ ಅಭಿವೃದ್ಧಿ ಹಾಗೂ ಪರಿಸರ ಸಮತೋಲನವನ್ನು ರಕ್ಷಿಸಿ ಗ್ರಾಮೀಣ ಜನರ ಆರೋಗ್ಯ
ಸುಧಾರಿಸುವುದು, ಉದ್ಯೋಗಾವಕಾಶವನ್ನು ಕಲ್ಪಿಸುವುದು, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದು, ಗ್ರಾಮೀಣ ಸಮುದಾಯದಲ್ಲಿ ಸಮರ್ಪಕ ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತು ಅರಿವು ಮೂಡಿಸುವುದು ಈ ಅಮೃತ ಸರೋವರ ಯೋಜನೆಯ ಆಶಯ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ, ಗ್ರಾಪಂನ ಸ್ವಂತ ಸಂಪನ್ಮೂಲದ ನೆರವಿನಿಂದ ಅಮೃತ ಸರೋವರ ಯೋಜನೆಯಡಿ ಕೆರೆಗಳ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ನರೇಗಾ
ಯೋಜನೆಯಡಿ ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆಯ ಆವರಣದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು
ತೆರವು ಮಾಡುವುದು, ಕೆರೆ ಕಟ್ಟೆಯ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ಬೆಳೆಸುವುದು, ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ ನಿಧಿಯಲ್ಲಿ ಕೆರೆಯ ಅಂಗಳವನ್ನು ಸುಂದರೀಕರಣಗೊಳಿಸುವುದು ಎಲ್ಲಕ್ಕಿಂತ ಮುಖ್ಯವಾಗಿ ಕೆರೆಯ ಬಳಿ ಧ್ವಜಾರೋಹಣ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು ಆ.15 ಮತ್ತು ಜ.26ರಂದು ಗ್ರಾಮದ ಹಿರಿಯರಿಂದ ಧ್ವಜಾರೋಹಣ ಮಾಡಲಾಗುತ್ತಿದೆ.
ಈ ಅಮೃತ ಸರೋವರದ ವಿಶೇಷ ಎಂದರೆ ನರೇಗಾ ಕಾರ್ಮಿಕರು ದಿನವಿಡೀ ಶ್ರಮವಹಿಸಿ ಕೆರೆಗಳ ನಿರ್ಮಾಣ ಮಾಡಿದ್ದಾರೆ. ಕಾರ್ಮಿಕರು ನಿರ್ಮಾಣ ಮಾಡಿರುವ ಕೆರೆಗಳಲ್ಲಿ ನೀರಿನ ರೂಪದಲ್ಲಿ ಅಮೃತ ಹರಿದುಬಂದು ಅಮೃತ ಸರೋವರವಾಗಿ ಬದಲಾಗಿವೆ. ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳ ನಿರಂತರ ಜಾಗೃತಿ, ಇದರಿಂದ ಆಗುವ ಪ್ರಯೋಜನದ ಬಗ್ಗೆ ಮಾಡಿದ ಮನವರಿಕೆ ಜಿಲ್ಲೆಯಲ್ಲಿ 140 ಕೆರೆಗಳ ನಿರ್ಮಾಣ ಮತ್ತು ಪುನರುಜ್ಜೀವನಕ್ಕೆ ಕಾರಣವಾಗಿದೆ. ಅಮೃತ ಸರೋವರ ಯೋಜನೆಯಡಿ ಜಿಲ್ಲೆಗೆ 283 ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಯ ಗುರಿ ನೀಡಲಾಗಿದ್ದು ಇದುವರೆಗೆ 140 ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ 48 ಹೊಸ ಕೆರೆಗಳು ಮತ್ತು ಕೃಷಿ ಇಲಾಖೆ ವ್ಯಾಪ್ತಿಯ 92 ಕೆರೆಗಳು ಸೇರಿದ್ದು ಇದರಲ್ಲಿ ನೀರು ಹರಿದು ಬರುತ್ತಿದ್ದಂತೆ ಕೆರೆಯ ಸುತ್ತಲಿನ ಪರಿಸರವೇ ಬದಲಾಗಿದೆ.
ಎಲ್ಲೆಲ್ಲಿ ಎಷ್ಟು ಕೆರೆಗಳ ನಿರ್ಮಾಣ?
ಚಿಕ್ಕೋಡಿ ತಾಲೂಕಿನಲ್ಲಿ 84 ಕೆರೆಗಳ ಪೈಕಿ 65, ಅಥಣಿಯಲ್ಲಿ 19 ಕೆರೆಗಳಲ್ಲಿ 11, ರಾಮದುರ್ಗದ 26 ಕೆರೆಗಳ ಪೈಕಿ 17 ಮತ್ತು ಬೆಳಗಾವಿ ತಾಲೂಕಿನಲ್ಲಿ 29 ಕೆರಗಳ ಪೈಕಿ 10 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 127 ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಕೆರೆಗಳ ನಿರ್ಮಾಣದ ನಂತರ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡಿಬಂದಿದೆ.
ಜಿಲ್ಲೆಯಲ್ಲಿ ಅಮೃತ ಸರೋವರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ನಿಗದಿತ ಗುರಿಯಲ್ಲಿ
ಈಗಾಗಲೇ ಶೇ.50ರಷ್ಟು ಕೆರೆಗಳನ್ನು ನಿರ್ಮಾಣ ಮತ್ತು ಪುನರುಜ್ಜೀವನಗೊಳಿಸಲಾಗಿದೆ.
ಹರ್ಷಲ್ ಭೋಯರ್,
ಜಿಪಂ ಸಿಇಒ, ಬೆಳಗಾವಿ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.