Belgaum Sugars 11 ತಿಂಗಳಲ್ಲಿ ನಿರ್ಮಿಸಿದ್ದು ವಿಶ್ವ ದಾಖಲೆ : ಸಚಿವ ಸತೀಶ್ ಜಾರಕಿಹೊಳಿ
ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸುವಂತೆ ಚರ್ಚಿಸಿದ್ದು ನಿಜ
Team Udayavani, Mar 10, 2024, 5:07 PM IST
ಬೆಳಗಾವಿ: ಬೆಳಗಾಂ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು 11 ತಿಂಗಳಲ್ಲಿ ನಿರ್ಮಿಸಿದ್ದು ವಿಶ್ವದಲ್ಲೇ ದಾಖಲೆ. ಈಗ ಬಿ.ಪಿ.ಸಿ.ಎಲ್ ಪೆಟ್ರೋಲ್ ಪಂಪ ಮಳಿಗೆಯನ್ನು ಕೇವಲ 3 ತಿಂಗಳಲ್ಲೇ ನಿರ್ಮಿಸಿರುವದು ದೇಶದಲ್ಲೇ ದಾಖಲೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹುದಲಿ ಸಮೀಪ ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನೂತನವಾಗಿ ನಿರ್ಮಿಸಿದ ಪೆಟ್ರೋಲ್ ಪಂಪ್ ಮಳಿಗೆ ಉದ್ಘಾಟಿಸಿ ಮಾತನಾಡಿದದ ಸತೀಶ ಜಾರಕಿಹೋಳಿ, ನಾವು ಸಕ್ಕರೆ ಕಾರ್ಖಾನೆ, ಪೆಟ್ರೋಲ್ ಪಂಪ್ ನಿರ್ಮಿಸಿ ಎಷ್ಟು ದುಡ್ಡು ಗಳಿಸುತ್ತೇವೆ ಎಂಬುದು ಪ್ರಮುಖವಲ್ಲ. ಆದರೆ ಎಷ್ಟು ಜನಕ್ಕೆ ಸ್ಥಳೀಯವಾಗಿ ಉದ್ಯೋಗ ನೀಡುತ್ತಿದ್ದೇವೆ ಎಂಬುದು ಪ್ರಮುಖವಾಗುತ್ತದೆ.ಸಕ್ಕರೆ ಕಾರ್ಖಾನೆ ನಿರ್ಮಿಸಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿದ್ದೇವೆ. ಈಗ ಹುದಲಿಯಲ್ಲಿ ನಿರ್ಮಿಸಿರುವ ಪೆಟ್ರೋಲ್ ಪಂಪ್ ಮಳಿಗೆಯಿಂದ ಕನಿಷ್ಟ 20ರಿಂದ 25 ಜನಕ್ಕೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಬೆಳಗಾಂ ಶುಗರ್ಸ್ ಕಾರ್ಖಾನೆಗೆ ಸ್ಥಳದ ಅಭಾವ ಇದ್ದು, ಕಾರ್ಖಾನೆಗೆ ಭೂಮಿ ನೀಡಿರುವ ರೈತರಗೆ ನಾವು ಪರ್ಯಾಯವಾಗಿ ಬೇರೆ ಸ್ಥಳಗಳಲ್ಲಿ ಭೂಮಿ ನೀಡಿ, ಅವರಿಗೆ ನೀರಾವರಿ ಸೌಲಭ್ಯ ನೀಡಿದ್ದೇವೆ ಎಂದು ತಿಳಿಸಿದರು.
ನಾನೇ ಲೋಕೋಪಯೋಗಿ ಸಚಿವನಾಗಿದ್ದರಿಂದ ಮುಂದಿನ ದಿನಗಳಲ್ಲಿ ಗೋಕಾಕ -ಬೆಳಗಾವಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಈಗಾಗಲೇ ರೂಪರೇಷ ಸಿದ್ದಪಡಿಸಿದ್ದು, ಹುದಲಿ ಬಳಿ ಇರುವ ರೈಲು ಹಳಿಗೆ ಮೇಲ್ಸೆತುವೆ ನಿರ್ಮಿಸಲು 35 ಕೋಟಿ ರೂ. ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದರು.
ಚರ್ಚಿಸಿದ್ದು ನಿಜ
ಚಿಕ್ಕೋಡಿಯಿಂದ ತಮ್ಮ ಪುತ್ರಿ ಪ್ರಿಯಾಂಕಾ ಸ್ಪರ್ಧಿಸುವಂತೆ ಸಿಎಂ ಹಾಗೂ ಡಿಸಿಎಂ ಚರ್ಚಿಸಿದ್ದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹುದಲಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಜಿಲ್ಲೆಯ ನಾಯಕರ ಜತೆ ಇನ್ನೊಂದು ಬಾರಿ ಚರ್ಚಿಸಿ ಹೇಳುತ್ತೇನೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಅಭ್ಯರ್ಥಿ ಆಗುವವರ ಅಭಿಪ್ರಾಯ ಕೇಳಬೇಕು. ನಾನು ಚುನಾವಣೆಗೆ ನಿಲ್ಲಲ್ಲಾ ಎಂದರೆ ಕಷ್ಟ. ಹೀಗಾಗಿ ಚುನಾವಣೆಗೆ ನಿಲ್ಲುವವರ ಅಭಿಪ್ರಾಯವೂ ಅಷ್ಟೇ ಮುಖ್ಯ ಎಂದರು.
ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಆಯ್ಕೆಗಾಗಿ ಒಂದು ಸುತ್ತಿನ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಇನ್ನೂ ಸಮಯ ಇದೆ. ಇನ್ನೊಂದು ಸುತ್ತಿನ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಚುನಾವಣೆ ಘೋಷಣೆ ನಂತರ ಹದಿನೈದು ದಿನ ಸಮಯ ಇದ್ದು, ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಎರಡನೇ, ಮೂರನೇ ಅಥವಾ ಕೊನೆ ಹಂತದವರೆಗೆ ಹೋಗುತ್ತದೆ.
ಇನ್ನು ತಾವೇ ಉಸ್ತುವಾರಿ ಇದ್ದ ವಿಜಯಪುರ ಕ್ಷೇತ್ರದಿಂದ ಒಂದೇ ಅಭ್ಯರ್ಥಿ ಹೆಸರು ಸೂಚಿಸಿದ್ದು, ಹೀಗಾಗಿ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.