ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ
ಅನೇಕ ವಿದೇಶಿ ತಜ್ಞರು ಭಾರತಕ್ಕೆ ಭವಿಷ್ಯವಿಲ್ಲ ಎಂದು ಜರಿದಿದ್ದರು
Team Udayavani, Jun 29, 2024, 6:05 PM IST
■ ಉದಯವಾಣಿ ಸಮಾಚಾರ
ಬೆಳಗಾವಿ: ಗುಣಮಟ್ಟದ ಮತ್ತು ಕೌಶಲ್ಯರಹಿತ ಶಿಕ್ಷಣದ ಫಲವಾಗಿ ಜಾಗತಿಕ ಮಟ್ಟದಲ್ಲಿ ಮೊದಲ 100 ಸ್ಥಾನಗಳಲ್ಲಿ ಭಾರತದ ಒಂದು ವಿಶ್ವ ವಿದ್ಯಾಲಯ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಉನ್ನತ ಶಿಕ್ಷಣ, ಪ್ರಚಲಿತ ಪಠ್ಯಕ್ರಮ ಮತ್ತು
ಮೌಲ್ಯಾಧಾರಿತ ಸಂಶೋಧನೆಗೆ ಆದತ್ಯೆ ನೀಡುವ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಶೋಧನೆ ಮತ್ತು ಪ್ರಕಟಣೆಯಲ್ಲಿನ ಪ್ರಚಲಿತ ಪ್ರವೃತ್ತಿಗಳು ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ 18 ಲಕ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅತ್ಯುನ್ನತ ಮತ್ತು ಗುಣಮಟ್ಟದ ಸಂಶೋಧನೆ ನಮ್ಮ ದೇಶದಲ್ಲೇ ನೀಡಿದಾಗ ಮಾತ್ರ ಪ್ರತಿಭಾ ಪಲಾಯನ ತಡೆಯಲು ಸಾಧ್ಯವಿದೆ ಎಂದರು.
ಉನ್ನತ ಶಿಕ್ಷಣ ಅರಿಸಿ ವಿದೇಶಕ್ಕೆ ತೆರಳಿದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ನಂತರ ಅಲ್ಲಿಯೆ ಕೆಲಸ ಪಡೆಯುತ್ತಾರೆ. ಭಾರತದ ಪ್ರಗತಿಗೆ ಸಹಕಾರಿಯಾಗಬೇಕಾಗಿದ್ದ ಪ್ರತಿಭೆಗಳು ವಿದೇಶಕ್ಕೆ ಹೋಗಿ ಅಲ್ಲಿನ ಪ್ರಗತಿಗೆ ಕೊಡುಗೆ ನೀಡುತ್ತಿರುವುದು ಸಾಮಾನ್ಯವಾಗಿ ಕಾಣುತ್ತೇವೆ ಎಂದರು.
ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯಗಳನ್ನು ಶೆ„ಕ್ಷಣಿಕವಾಗಿ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕು. ಅಂತರ್ ಶಿಸ್ತಿನ ಮತ್ತು ಬಹುಶಿಸ್ತಿನ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಗಳು
ಪಡೆಯಲು ಮುಂದಾಗಬೇಕು. ವೈದ್ಯ, ವಕೀಲ, ಶಿಕ್ಷಕ, ಪೌರಕಾರ್ಮಿಕ, ರೈತ ಮತ್ತು ವ್ಯಾಪಾರಿ ಹೀಗೆ ಎಲ್ಲ ವೃತ್ತಿಗಳು ಸಮಾಜದಲ್ಲಿ ಸಮಾನ ಮಹತ್ವ ಪಡೆದಿವೆ ಎಂದು ಹೇಳಿದರು.
1950-60ರಲ್ಲಿ ಭಾರತದ ಜನಸಂಖ್ಯೆ ತಿಳಿದು, ಅನೇಕ ವಿದೇಶಿ ತಜ್ಞರು ಭಾರತಕ್ಕೆ ಭವಿಷ್ಯವಿಲ್ಲ ಎಂದು ಜರಿದಿದ್ದರು. ಆದರೆ ಭಾರತವು ಕಳೆದ 7 ದಶಕಗಳಲ್ಲಿ ಕೃಷಿ ವಿಜ್ಞಾನ, ಬ್ಯಾಹಾಕಾಶ, ಅಣು ವಿಜ್ಞಾನ, ವೈದ್ಯಕೀಯ ಮತ್ತು ಔಷಧ ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ಪರಿಣಾಮ ಭಾರತವು ಸ್ವಾವಲಂಬಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನಲ್ಲಿ ಮಹತ್ತರ ಸಾಧನೆ ತೋರಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ, ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಅವಿರತವಾದ ಪರಿಶ್ರಮದಿಂದ ಯಶಸ್ಸು ಸಾಧ್ಯ. ಆದ್ದರಿಂದ ಸಂಶೋಧನಾರ್ಥಿಗಳು ಮೂರು ವರ್ಷ ಶ್ರದ್ಧೆ ಮತ್ತು ಆಸಕ್ತಿವಹಿಸಿ ಉತ್ತಮ ಮೌಲ್ಯಯುತ ಸಂಶೋಧನೆಗೆ ಮುಂದಾಗಬೇಕು. ಹುದ್ದೆ ಬಡ್ತಿ ಮತ್ತು ಪಿಎಚ್‌ಡಿ ಪದವಿಗಾಗಿ ಸಂಶೋಧನೆ ಮಾಡುವ ಬದಲಾಗಿ, ಮನುಕುಲ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸಂಶೋಧನೆಗಳ ಪರಿಹಾರ ನೀಡವಂತಾಗಬೇಕು ಎಂದರು.
ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಮುಖ್ಯಸ್ಥ ಪ್ರೊ| ಎಂ.ಜಿ.ಹೆಗಡೆ ಮತ್ತು ಅಜೀಂ ಪ್ರೇಮಜಿ ವಿವಿಸಲಹೆಗಾರರಾದ ಪ್ರೊ. ದೇವಕಿ ಲಕ್ಷ್ಮಿನಾರಾಯಣ ಅವರು ಸಂಶೋಧನೆ ಮತ್ತು ಪ್ರಕಟಣೆ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಶೋಧನೆ ಮತ್ತು ಸಂಶೋಧನಾ ಲೇಖನ ಮಂಡಿಸಲು ವಿದೇಶಕ್ಕೆ ತೆರಳುತ್ತಿರುವ ಇಂಗ್ಲಿಷ್ ವಿಭಾಗದ ಪ್ರೊ| ನಾಗರತ್ನಾ ಪರಾಂಡೆ ಮತ್ತು ಡಾ| ಪೂಜಾ ಹಲ್ಯಾಳ್ ಅವರನ್ನು ಗೌರವಿಸಲಾಯಿತು.
ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಪ್ರೊ. ಎಸ್.ಬಿ. ಆಕಾಶ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಬಸವರಾಜ ಪದ್ಮಶಾಲಿ, ವಿಶೇಷಾಧಿಕಾರಿ ಪ್ರೊ. ವಿಶ್ವನಾಥ ಆವಟಿ, ಪ್ರೊ. ಜೆ. ಮಂಜಣ್ಣ, ಪ್ರೊ.
ಬಾಲಚಂದ್ರ ಹೆಗಡೆ, ಪ್ರೊ.ಎಂ. ಸಿ. ಯರಿಸ್ವಾಮಿ ಉಪಸ್ಥಿತರಿದ್ದರು. ಕುಲಸಚಿವೆ ರಾಜಶ್ರೀ ಜೈನಾಪೂರ ಪರಿಚಯಿಸಿದರು. ರಾಘವೇಂದ್ರ ಶೇಟ್ ಸ್ವಾಗತಿಸಿದರು. ಅರ್ಚನಾ ಪೂಜಾರ ವಂದಿಸಿದರು ಮತ್ತು ಪ್ರಿಯಾ ಬೀಳಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.