ಬೆಳಗಾವಿ: ಹಬ್ಬದ ವೇಳೆ ಹದ್ದು ಮೀರಿದರೆ ಹುಷಾರ್-ಪೊಲೀಸ್ ಕಮಿಷನರ್ ಮಾರ್ಟಿನ್
Team Udayavani, Mar 23, 2024, 4:00 PM IST
ಉದಯವಾಣಿ ಸಮಾಚಾರ
ಬೆಳಗಾವಿ: ಹೋಳಿ ಹಾಗೂ ರಂಜಾನ್ ಹಬ್ಬ ಸಮೀಪಿಸಿದ್ದು, ಈ ಹಬ್ಬದ ನೆಪದಲ್ಲಿ ಯಾರಾದರೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಹದ್ದು ಮೀರಿ ಕಾನೂನು ಉಲ್ಲಂಘಿಸಿದರೆ ಪೊಲೀಸರು ಸುಮ್ಮನಿರುವುದಿಲ್ಲ ಎಂದು ಮಹಾನಗರ ಪೊಲೀಸ್ ಕಮಿಷನರ್ ಇಡಾ ಮಾರ್ಟಿನ್ ಎಚ್ಚರಿಕೆ ನೀಡಿದರು.
ನಗರದ ಹಳೆ ಪೊಲೀಸ್ ಕಮಿಷನರೇಟ್ ಸಭಾ ಭವನದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆಯಲ್ಲಿ ಅವರು
ಮಾತನಾಡಿದರು.
ಹೋಳಿ ಹಬ್ಬದಂದು ನಗರದ ವಿವಿಧ ಕಡೆಗಳಲ್ಲಿ ಬಣ್ಣದ ಓಕುಳಿ ಅದ್ಧೂರಿಯಾಗಿ ನಡೆಯುತ್ತದೆ. ಬೆಳಗಾವಿಯಲ್ಲಿ ಹೋಳಿ
ಹಾಗೂ ರಂಗ ಪಂಚಮಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರವಿವಾರ ಹೋಳಿ ಹುಣ್ಣಿಮೆ, ಸೋಮವಾರ ಬಣ್ಣದ ಓಕುಳಿ
ಹಾಗೂ ಐದನೇ ದಿನದಂದು ರಂಗ ಪಂಚಮಿ ಇರುತ್ತದೆ. ಈ ವೇಳೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಯಾವ ಪ್ರದೇಶದಲ್ಲಿಯೂ ಗಲಾಟೆ ಆಗಬಾರದು ಎಂದು ಹೇಳಿದರು.
ಯಾವುದೇ ಗಲಾಟೆ ಆಗದಂತೆ ಪೊಲೀಸರು ನಿಗಾ ಇಡುತ್ತಾರೆ. ಆಯಾ ಯುವಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿ ಅಹಿತಕರ
ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬಣ್ಣ ಆಡುವ ನೆಪದಲ್ಲಿ ಜಗಳ, ತಂಟೆ-ತಕರಾರು ಮಾಡಬಾರದು. ವೈಯಕ್ತಿಕ ದ್ವೇಷ ಇಟ್ಟುಕೊಂಡು ಜಗಳ ಮಾಡಬಾರದು. ಮಹಿಳೆಯರು, ಯುವತಿಯರು, ಅಪರಿಚಿತರು, ವೃದ್ಧರ ಮೇಲೆ ಬಣ್ಣ ಹಾಕಿ ಸುಮ್ಮನೆ ಜಗಳಕ್ಕೆ ಕಾರಣವಾಗಬಾರದು. ಬಣ್ಣ ಹಚ್ಚುವಾಗ ಎಚ್ಚರಿಕೆಯಿಂದ ಇರಬೇಕು. ಶಾಂತಿ ಭಂಗ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಮುಸ್ಲಿಂ ಬಾಂಧವರು 10 ದಿನಗಳಿಂದ ರಂಜಾನ್ ಹಬ್ಬದ ಉಪವಾಸ ಆರಂಭಿಸಿದ್ದಾರೆ. ಉಪವಾಸ ಆರಂಭಿಸಲು ಬೆಳಗ್ಗೆ ಬೇಗ
ಏಳುತ್ತಾರೆ. ಜತೆಗೆ ತಡರಾತ್ರಿವರೆಗೂ ಜಾಗರಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ರಸ್ತೆ, ಗಲ್ಲಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಸಂಚಾರ ದಟ್ಟಣೆಗೂ ಯಾವುದೇ ತೊಂದರೆ ಆಗಬಾರದು ಎಂದು ಹೇಳಿದರು.
ನಗರದ ವಿವಿಧ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಲಹೆ-ಸೂಚನೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಪಿ.ವಿ.ಸ್ನೇಹ, ಖಡೇಬಜಾರ ಎಸಿಪಿ ಶೇಖರಪ್ಪ, ಮಾರ್ಕೆಟ್ ಎಸಿಪಿ ಬಸವರಾಜ ಕಟ್ಟಿಮನಿ ಸೇರಿದಂತೆ ಇನ್ಸಪೆಕ್ಟರ್‌ಗಳು, ವಿವಿಧ ಮಂಡಳಿಗಳ ಪದಾ ಕಾರಿಗಳು, ಪಂಚ ಮಂಡಳಿಯವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.