ಬೆಳಗಾವಿ: ಉತ್ತರ ಕರ್ನಾಟಕದ ಲೇಖಕರನ್ನು ಗುರುತಿಸುತ್ತಿಲ್ಲ-ಡಾ. ಬಸವರಾಜ
ಬರವಣಿಗೆಯ ಶೈಲಿ ಕೂಡ ಓದುಗನಿಗೆ ಬೇಸರವಾಗದಂತಿರುತ್ತದೆ
Team Udayavani, Jul 3, 2023, 2:10 PM IST
ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಬರಹಗಾರರಿದ್ದಾರೆ. ಅಭ್ಯಾಸಪೂರ್ಣ ಕೃತಿಗಳನ್ನು ರಚಿಸುತ್ತಿದ್ದಾರೆ. ಯಾವುದೇ ಪಿಎಚ್‌ಡಿ ಪ್ರಬಂಧಗಳಿಗೆ ಕಡಿಮೆ ಇಲ್ಲದ ಕೃತಿಗಳು ಹೊರಬರುತ್ತಿವೆ. ಆದರೆ ಉತ್ತರ ಕರ್ನಾಟಕದ ಇಂತಹ ಕೆಲಸಗಳನ್ನು ಗುರುತಿಸಿ, ಗೌರವಿಸದಿರುವುದು ಬೇಸರದ ವಿಷಯ ಎಂದು ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿ
ವಿಷಾದಿಸಿದರು.
ಇಲ್ಲಿಯ ಅನಗೋಳದ ಆಶೀರ್ವಾದ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಶಿರೀಷ ಜೋಶಿ ಅವರು ರಚಿಸಿದ ಗುಜರಿ ತೋಡಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅತ್ಯಂತ ಹೆಮ್ಮೆಯ ಬರಹಗಾರರಲ್ಲಿ ಶಿರೀಷ ಜೋಶಿ ಸಹ ಒಬ್ಬರು. ಅವರ ಈ ಗುಜರಿ ತೋಡಿ ಕಾದಂಬರಿ ಕೂಡ ಸಾಕಷ್ಟು ಮಹತ್ವದ ವಿವರಗಳನ್ನು ಒಳಗೊಂಡ ಕೃತಿಯಾಗಿದ್ದು ಲೇಖಕರು ವಿಶ್ವವಿದ್ಯಾಲಯದ ಅಕಾಡೆಮಿಯ ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಸಾಕಷ್ಟು ಅಕಾಡೆಮಿಗಳಿವೆ. ವಿಶ್ವವಿದ್ಯಾಲಯಗಳಿವೆ. ಉತ್ತಮ ಗುಣಮಟ್ಟದ ಮೌಲಿಕ ಬರಹಗಾರರಿದ್ದಾರೆ. ಸಂಶೋಧನಾತ್ಮಕ ಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಅಂಥವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಸಂಬಂಧಿಸಿದವರು ಇದರ ಕಡೆ ಗಮನಿಸಬೇಕಾದ ಅಗತ್ಯವಿದೆ ಎಂದು ಡಾ| ಬಸವರಾಜ ಜಗಜಂಪಿ ಹೇಳಿದರು.
ಕೃತಿಯ ಕುರಿತು ಡಾ| ಪಿ ಜಿ ಕೆಂಪಣ್ಣವರ ಮತ್ತು ಪ್ರೊ| ಜಿ ಆರ್ ಕುಲಕರ್ಣಿ ಮಾತನಾಡಿ, ಲೇಖಕ ಅತ್ಯಂತ ತಾಳ್ಮೆಯಿಂದ ಮತ್ತು ಶ್ರಮದಿಂದ ಈ ಕೃತಿ ರಚಿಸಿದ್ದು ಇದೊಂದು ಮೌಲಿಕ ಗ್ರಂಥವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿಂಚಣಿಯ ಅಲ್ಲಮಪ್ರಭು ಸ್ವಾಮಿಜಿ ಅವರು ಮಾತನಾಡಿ, ಶಿರೀಷ ಜೋಶಿಯವರ ಪ್ರತಿಯೊಂದು ಕೃತಿಯೂ ಅಭ್ಯಾಸಪೂರ್ಣವಾಗಿರುತ್ತದೆ ಉದ್ದೇಶಕ್ಕೆ ಭಂಗವಾಗದಂತೆ ಅವರ ಬರವಣಿಗೆ ಇರುತ್ತದೆ. ಕೃತಿಗಳ ರಚನೆ ಅಷ್ಟೇ ಅಲ್ಲ ಅವರು ಚಲನಚಿತ್ರ ಕಥಾ ಸಂಭಾಷಣೆಗಳನ್ನು ಕೂಡ ತುಂಬಾ ಚೆನ್ನಾಗಿ ಬರೆಯುತ್ತಾರೆ. ಅವರ ಕೃತಿಗಳ ಕಥಾ ವಸ್ತು ವಿಶೇಷವಾಗಿದ್ದು ಅವರ ಬರವಣಿಗೆಯ ಶೈಲಿ ಕೂಡ ಓದುಗನಿಗೆ ಬೇಸರವಾಗದಂತಿರುತ್ತದೆ ಎಂದರು.
ಜೋಶಿ ಅವರ ಈ ಗುಜರಿ ತೋಡಿ ಕಾದಂಬರಿ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಬೇಕು, ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅಭಿಯಂತರ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜಿಸ್ಟ್ರಾರ್ ಕೆ ನಾಗೇಂದ್ರ, ಡಾ| ಸರಜೂ ಕಾಟ್ಕರ್, ಪ್ರೊ| ಡಿ ಎಸ್ ಚೌಗಲೆ, ಶ್ರೀಧರ ಕುಲಕರ್ಣಿ, ಯ ರು ಪಾಟೀಲ, ರಂಗಕರ್ಮಿ ಝಕೀರ ನದಾಫ, ಕೆ ಟಿ ಜೋಶಿ, ರಮೇಶ ಜಂಗಲ್, ಮಂಜುಳಾ ಜೋಶಿ, ಬಂಡು ಕುಲಕರ್ಣಿ, ಡಾ ಅರವಿಂದ ಕುಲಕರ್ಣಿ, ಅನಂತ ಪಪ್ಪು, ಪ್ರಾ| ಬಿ ಎಸ್ ಗವಿಮಠ ಮುಂತಾದವರು ಉಪಸ್ಥಿತರಿದ್ದರು.
ಲೇಖಕ ಶಿರೀಷ ಜೋಶಿ ತಮ್ಮ ಸಾಹಿತ್ಯ, ರಂಗಭೂಮಿ ಮತ್ತು ಸೇವಾ ಅನುಭವಗಳನ್ನು ಹಂಚಿಕೊಂಡರು. ಬಸವರಾಜ ಗಾರ್ಗಿ ನಿರೂಪಿಸಿದರು. ಶ್ರದ್ಧಾ ಪಾಟೀಲ ಸ್ವಾಗತಿಸಿದರು. ನೀರಜಾ ಗಣಾಚಾರಿ ಪರಿಚಯ ಮಾಡಿದರು. ಶ್ರೀನಾಥ ಜೋಶಿ ವಂದಿಸಿದರು. ಇದೆ ಸಂದರ್ಭದಲ್ಲಿ ಚಿತ್ರಕಲಾವಿದರಾದ ಬಾಳು ಸದಲಗೆ ದಂಪತಿಗಳನ್ನು ಸತ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.