ಕಳೆಗುಂದಿದ ಬೈಲವಾಡ: ಸರಿದ ಕಾರ್ಮೋಡ
ಮದುವಣಗಿತ್ತಿಯಂತೆ ಶೃಂಗಾರ |ಸ್ವಚ್ಛತೆ-ಬಣ್ಣ ಬಳಿದು ಸಡಗರ |ಸಿಗಲಿ ಸೌಕರ್ಯ
Team Udayavani, Feb 18, 2021, 6:52 PM IST
ಬೈಲಹೊಂಗಲ: ತಾಲೂಕಿನ ಬೈಲವಾಡದಲ್ಲಿ ಫೆ.20 ರಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗುತ್ತಿದೆ.
ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಸರಕಾರಿ ಆಯುರ್ವೆದಿಕ್ ಆಸ್ಪತ್ರೆ, ನೀರಿನ ಟ್ಯಾಂಕ್‌ಗಳು, ಸಾರ್ವಜನಿಕ ಸ್ಥಳಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಗ್ರಾಮವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬರುವುದರಿಂದ ಗ್ರಾಮದಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ತಯಾರು ಮಾಡುವಲ್ಲಿ ನಾಗರಿಕರು ನಿರತರಾಗಿ ಅಲ್ಲಲ್ಲಿ ಚರ್ಚೆ ಗಿಳಿದಿರುವುದು ಕಂಡು ಬರುತ್ತದೆ.
ಗ್ರಾ.ಪಂ ಕಚೇರಿ, ನೀರಿನ ಟ್ಯಾಂಕ್, ಪಂಪ ಹೌಸ್‌ಗಳಿಗೆ ಬಣ್ಣ ಬಳಿಯುವುದಲ್ಲದೇ ಗ್ರಾಮದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಗ್ರಾಮ ಸ್ವತ್ಛತೆಯಲ್ಲದೇ ಗ್ರಾಮ ವಾಸ್ತವ್ಯದ ಸಿದ್ಧತೆ ಭರದಿಂದ ನಡೆದಿದೆ ಎಂದು ಪಿಡಿಓ ಎಸ್.ಜಿ. ಪೂಜೇರಿ ತಿಳಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ನಾಗರಿಕರ ಪ್ರಶ್ನೆಗೆ ಉತ್ತರಿಸಲು ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾಮವಲ್ಲದೇ ಜಿಲ್ಲೆಯ ಜನರಲ್ಲೂ ಕುತೂಹಲ ಮೂಡಿಸಿದೆ. ಜಿಲ್ಲಾಧಿ ಕಾರಿಗಳ ಸ್ವಾಗತಕ್ಕೆ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.