BJP: ಮುಂದುವರಿದ ಸಮನ್ವಯ ಕೊರತೆ! ಪಂಚಮಸಾಲಿ ಹೋರಾಟ ಚರ್ಚೆ ವೇಳೆ ನಡೆದ ಗದ್ದಲ

ಅಶೋಕ್‌, ಸುನಿಲ್‌, ವಿಜಯೇಂದ್ರ ನಡುವೆ ಗೊಂದಲ

Team Udayavani, Dec 13, 2024, 1:16 AM IST

BJP: ಮುಂದುವರಿದ ಸಮನ್ವಯ ಕೊರತೆ! ಪಂಚಮಸಾಲಿ ಹೋರಾಟ ಚರ್ಚೆ ವೇಳೆ ನಡೆದ ಗದ್ದಲ

ಬೆಳಗಾವಿ: ಬಿಜೆಪಿ ನಾಯಕರ ನಡುವೆ ಪದೇಪದೆ ಸಂವಹನ ಹಾಗೂ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಗುರುವಾರ ವಿಧಾನಸಭೆ ಕಲಾಪದ ವೇಳೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಪ್ರಹಾರಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸುವಲ್ಲಿ ತಬ್ಬಿಬ್ಟಾದ ಪ್ರಸಂಗ ನಡೆಯಿತು.

ಲಾಠಿ ಪ್ರಹಾರ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್‌.ಅಶೋಕ್‌ ಪಟ್ಟು ಹಿಡಿದರೆ, ಸದನ ನಡೆಯುತ್ತಿರುವಾಗ ನಡೆದ ಘಟನೆ ಬಗ್ಗೆ ಸರಕಾರ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಬೇಕು ಎಂದು ವಿ. ಸುನೀಲ್‌ ಕುಮಾರ್‌ ಆಗ್ರಹಿಸಿದರು.

ಇದೇ ವಿಚಾರವಾಗಿ ಗೃಹ ಸಚಿವರು ಹೇಳಿಕೆ ದಾಖಲಿಸಿದರು. ಅನಂತರ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್‌ ಮಾತನಾಡುವಾಗ, ಪ್ರತಿಭಟನೆಗೆ ಬಿಜೆಪಿಯವರು ಪ್ರಚೋದನೆ ಕೊಟ್ಟಿದ್ದಾರೆ. ಆರೆಸ್ಸೆಸ್‌ನವರು ಕರೆ ತಂದು ಕಲ್ಲು ಹೊಡೆಸಿದ್ದಾರೆ ಎನ್ನುತ್ತಿದ್ದಂತೆ ಬಿ.ವೈ. ವಿಜಯೇಂದ್ರ ಅಸಮಾಧಾನ ಹೊರಹಾಕಿದರು. ಇದನ್ನು ಕಡತದಿಂದ ತೆಗೆಯಬೇಕು ಎಂದರು.

ಇದೇ ವೇಳೆ ಮತ್ತೋರ್ವ ಸಚಿವ ಕೃಷ್ಣ ಬೈರೇಗೌಡ ನೀಡುತ್ತಿದ್ದ ಉತ್ತರಕ್ಕೆ ಪ್ರತಿರೋಧ ಒಡ್ಡುವಲ್ಲಿ ಆರ್‌. ಅಶೋಕ್‌ ವ್ಯಸ್ತರಾಗಿದ್ದರು. ಸುನಿಲ್‌ ಕುಮಾರ್‌ ಕ್ರಿಯಾಲೋಪ ಎತ್ತಿದ್ದರು. ವಿಪಕ್ಷದ ನಾಯಕರೇ ಆರೆಸ್ಸೆಸ್‌ ಬಗೆಗಿನ ಶಬ್ದವನ್ನು ಕಡತದಿಂದ ತೆಗೆಸಿ, ರೀ ಅಶ್ವತ್ಥನಾರಾಯಣ ಹೇಳಿ ಅವರಿಗೆ ಎಂದು ವಿಜಯೇಂದ್ರ ಹಲವು ಬಾರಿ ಕೂಗಿ ಹೇಳಿದರೂ ಯಾರ ಗಮನಕ್ಕೂ ಹೋಗಲಿಲ್ಲ. ಅಷ್ಟರಲ್ಲಿ ಕಲಾಪವೂ ಮುಂದೂಡಿಕೆಯಾಯಿತು.

ಸ್ಪೀಕರ್‌ನ ಪ್ರಶ್ನೆ ಮಾಡೋಣ ಎಂದು ಅಶೋಕ್‌ ಅವರಿಗೆ ಸುನಿಲ್‌ ಹೇಳಿದರೆ, ವಿಜಯೇಂದ್ರ ಅವರು ಆರೆಸ್ಸೆಸ್‌ ವಿಚಾರ ಕಡತದಿಂದ ತೆಗೆಸುವುದಲ್ಲವೇ? ಎಂದರು. ಒಬ್ಬೊಬ್ಬರು ಒಂದೊಂದು ವಿಚಾರ ಹೇಳಿದರೆ ಹೇಗೆ ಎಂದು ಸ್ವಪಕ್ಷೀಯರ ಮೇಲೆಯೇ ಅಶೋಕ್‌ ಗರಂ ಆದರು. ಅದೇ ಬಿಸಿಯಲ್ಲಿ ಸ್ಪೀಕರ್‌ ಕೊಠಡಿಯತ್ತ ತೆರಳಿದ ಸುನಿಲ್‌ ಕುಮಾರ್‌ ಜತೆಗೆ ಅಶೋಕ್‌, ವಿಜಯೇಂದ್ರ ಎಲ್ಲರೂ ಹೆಜ್ಜೆ ಹಾಕಿದರು. ಒಟ್ಟಾರೆ ಬಿಜೆಪಿ ನಾಯಕರ ನಡುವಿನ ಗೊಂದಲಗಳು ಅಲ್ಲಲ್ಲಿ ಪ್ರಕಟವಾದವು.

ಪದೇ ಪದೆ ಆರೆಸ್ಸೆಸ್‌ ಚರ್ಚೆ ಬೇಡ. ಅದೊಂದು ಅಸಾಂವಿಧಾನಿಕ ಶಬ್ದ ಎನ್ನುವುದಾದರೆ ತೆಗೆದುಬಿಡೋಣ.
– ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

ಟಾಪ್ ನ್ಯೂಸ್

Ramesh-Kanchan

Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್‌ ಕಾಂಚನ್‌

Puttige

Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್‌ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ

Bailiuru

Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ

1-delhi

Pro Kabaddi; ತೆಲುಗು ಟೈಟಾನ್ಸ್‌  ಮೇಲೆ ಡೆಲ್ಲಿ ಸವಾರಿ

Sports

ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಗಾರರಿಗೆ ವಯೋಮಿತಿ ನಿರ್ಬಂಧವಿಲ್ಲ

jay-shah

Olympics ಕ್ರಿಕೆಟ್‌ ಸೇರ್ಪಡೆ: ಶಾ ಮಾತುಕತೆ

GDP

ಮುಂದಿನ 2 ತ್ತೈಮಾಸಿಕದಲ್ಲೂ ಕೈಗಾರಿಕ ಪ್ರಗತಿ ಕುಂಠಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Ramesh-Kanchan

Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್‌ ಕಾಂಚನ್‌

Puttige

Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್‌ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ

Bailiuru

Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ

1-delhi

Pro Kabaddi; ತೆಲುಗು ಟೈಟಾನ್ಸ್‌  ಮೇಲೆ ಡೆಲ್ಲಿ ಸವಾರಿ

Sports

ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಗಾರರಿಗೆ ವಯೋಮಿತಿ ನಿರ್ಬಂಧವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.