ಲಕ್ಷ ರೈತರೊಂದಿಗೆ ಇಂದು ಬಿಜೆಪಿ ಪ್ರತಿಭಟನೆ


Team Udayavani, Dec 10, 2018, 6:40 AM IST

bjpsymbol.jpg

ಬೆಳಗಾವಿ: ಕಬ್ಬು ಬಾಕಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಳಗಾವಿಯಲ್ಲಿ ರೈತರ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಬಳಿ ಈ ಸಮಾವೇಶ ನಡೆಯಲಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷ ರೈತರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯಡಿಯೂರಪ್ಪ, ಜಗದೀಶ ಶೆಟ್ಟರ, ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ ಹಾಗೂ ಬಿಜೆಪಿ ಶಾಸಕರು ಈ ಸಮಾವೇಶದಲ್ಲಿ ಭಾಗವಹಿಸಿ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಲಿದ್ದಾರೆ ಎಂದರು.

ಸಕ್ಕರೆ ಕಾರ್ಖಾನೆಗಳು ಹಾಗೂ ಅದರ ಮಾಲೀಕರು ಸರ್ಕಾರಕ್ಕಿಂತ ದೊಡ್ಡವರೇನಲ್ಲ. ಸರ್ಕಾರಕ್ಕೆ ಸವಾಲು ಹಾಕುವ ಮಟ್ಟದಲ್ಲಿ ಸಕ್ಕರೆ ಕಾರ್ಖಾನೆಗಳು ಬೆಳೆದಿವೆಯೇ? ಕಠಿಣ ಕಾನೂನು ಕ್ರಮ ಕೈಗೊಂಡು ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕು. ನಮಗೆ ಬಂದಿರುವ ಮಾಹಿತಿ ಪ್ರಕಾರ ಬೀದರ ಹಾಗೂ ಕಲಬುರಗಿ ಜಿಲ್ಲೆಗಳನ್ನು ಹೊರತುಪಡಿಸಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ 46 ಸಕ್ಕರೆ ಕಾರ್ಖಾನೆಗಳಿಂದ 2017-18 ನೇ ಸಾಲಿನಲ್ಲಿ 1,634 ಕೋಟಿ ರೂ.ಬಾಕಿ ಹಣ ಪಾವತಿಯಾಗಬೇಕಿದೆ. ಮೂರು ಜಿಲ್ಲೆಗಳ 46 ಸಕ್ಕರೆ ಕಾರ್ಖಾನೆಗಳ ಪೈಕಿ ಅಥಣಿ ತಾಲೂಕಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಗೋಕಾಕ ತಾಲೂಕಿನ ಘಟಪ್ರಭಾ ಸಕ್ಕರೆ ಕಾರ್ಖಾನೆಗಳು ಮಾತ್ರ ಪೂರ್ತಿ ಹಣ ಪಾವತಿಸಿವೆ. ಉಳಿದ ಕಾರ್ಖಾನೆಗಳು 50 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿವೆ ಎಂದರು.

ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿವರ:
ಬೆಳಗಾವಿ ಜಿಲ್ಲೆ:

ಅಥಣಿ ರೈತರ ಕಾರ್ಖಾನೆ – 3915 ಲಕ್ಷ
ಭಾಗ್ಯಲಕ್ಷ್ಮೀ ಕಾರ್ಖಾನೆ ಖಾನಾಪುರ – 920 ಲಕ್ಷ
ದೂದಗಂಗಾ ಕೃಷ್ಣಾ ಕಾರ್ಖಾನೆ – 3962 ಲಕ್ಷ
ಇಐಡಿ ಪ್ಯಾರಿ ರಾಮದುರ್ಗ – 2195 ಲಕ್ಷ
ಗೋಕಾಕ ಶುಗರ್ಸ್‌ – 1645 ಲಕ್ಷ
ಹಾಲಸಿದ್ದನಾಥ ನಿಪ್ಪಾಣಿ – 1619 ಲಕ್ಷ
ಹಿರಣ್ಯಕೇಶಿ 2783 ಲಕ್ಷ
ಮಲಪ್ರಭಾ ಎಂ ಕೆ ಹುಬ್ಬಳ್ಳಿ 918 ಲಕ್ಷ
ರಾಯಬಾಗ ಎಸ್‌ಎಸ್‌ಕೆ 548 ಲಕ್ಷ
ರೇಣುಕಾ ಶುಗರ್ಸ್‌ ಬುರ್ಲಟ್ಟಿ 2622 ಲಕ್ಷ
ರೇಣುಕಾ ಶುಗರ್ಸ್‌ ಮುನವಳ್ಳಿ 3526 ಲಕ್ಷ
ಸತೀಶ ಶುಗರ್ಸ್‌ 4540 ಲಕ್ಷ
ಶಿರಗುಪ್ಪಿ ಶುಗರ್ಸ್‌ ಕಾಗವಾಡ 1767 ಲಕ್ಷ
ಸೋಮೇಶ್ವರ ಬೈಲಹೊಂಗಲ 810 ಲಕ್ಷ
ಶಿವಶಕ್ತಿ ಶುಗರ್ಸ್‌ 4406 ಲಕ್ಷ
ಉಗಾರ ಶುಗರ್ಸ್‌ 7134 ಲಕ್ಷ
ವೆಂಕಟೇಶ್ವರ ಪವರ್‌ ಪ್ರೊಜೆಕ್ಟ್ 3666 ಲಕ್ಷ
ಸೌಭಾಗ್ಯ ಲಕ್ಷ್ಮಿ ಗೋಕಾಕ 618 ಲಕ್ಷ
ವಿಶ್ವರಾಜ ಶುಗರ್ಸ್‌ ಹುಕ್ಕೆರಿ 2024 ಲಕ್ಷ
ಬೆಳಗಾವಿ ಶುಗರ್ಸ್‌ ಹುದಲಿ 1514 ಲಕ್ಷ

ಬಾಗಲಕೊಟೆ ಜಿಲ್ಲೆ
ಬೀಳಗಿ ಶುಗರ್ಸ್‌ 5611 ಲಕ್ಷ
ಜೆಮ್‌ ಶುಗರ್ಸ್‌ 6818 ಲಕ್ಷ
ಗೋದಾವರಿ ಶುಗರ್ಸ 16359 ಲಕ್ಷ
ಇಂಡಿಯನ್‌ ಕೇನ್‌ ಪವರ್‌ 6548 ಲಕ್ಷ
ಜಮಖಂಡಿ ಶುಗರ್ಸ್‌ 6177 ಲಕ್ಷ
ನಿರಾಣಿ ಶುಗರ್ಸ್‌ 13167 ಲಕ್ಷ
ಪ್ರಭುಲಿಂಗೇಶ್ವರ ಶುಗರ್ಸ್‌ 9730 ಲಕ್ಷ
ರೈತರ ಸಹಕಾರಿ ಕಾರ್ಖಾನೆ 3384 ಲಕ್ಷ
ಇಡಿ ಪ್ಯಾರಿ 5629 ಲಕ್ಷ
ಸಾಯಿ ಪ್ರಿಯಾ ಶುಗರ್ಸ್‌ 6065 ಲಕ್ಷ
ಸಾವರಿನ್‌ ಇಂಡಸ್ಟ್ರೀಜ್‌ 800 ಲಕ್ಷ

ವಿಜಯಪುರ ಜಿಲ್ಲೆ
ಜ್ಞಾನಯೋಗಿ ಶುಗರ್ಸ್‌ 1931 ಲಕ್ಷ
ಇಂಡಿಯನ್‌ ಶುಗರ್‌ 4754 ಲಕ್ಷ
ನಂದಿ ಎಸ್‌ಎಸ್‌ಕೆ 2529 ಲಕ್ಷ
ಜಮಖಂಡಿ ಶುಗರ್ಸ್‌ 4785 ಲಕ್ಷ
ಕೆ.ಪಿ.ಆರ್‌ ಶುಗರ್‌ 7504 ಲಕ್ಷ
ಮನಾಲಿ ಶುಗರ್ಸ್‌ 2395 ಲಕ್ಷ
ಬಸವೇಶ್ವರ ಶುಗರ್ಸ್‌ 2620 ಲಕ್ಷ
ಬಾಲಾಜಿ ಶುಗರ್ಸ್‌ 3947 ಲಕ್ಷ
ಭೀಮಾಶಂಕರ ಎಸ್‌ಎಸ್‌ಕೆ 1985 ಲಕ್ಷ

ರಮೇಶ ಜಾರಕಿಹೊಳಿಯವರು ಬಿಜೆಪಿ ಸೇರುತ್ತಾರೆ ಎಂಬುದು ಕೇವಲ ಊಹಾಪೋಹ. ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಇದುವರೆಗೆ ಯಾವುದೇ ಪ್ರಸ್ತಾಪ ಅಥವಾ ಚರ್ಚೆ ಆಗಿಲ್ಲ. ಅದೇನಿದ್ದರೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ.
– ಲಕ್ಷ್ಮಣ ಸವದಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ .

ಟಾಪ್ ನ್ಯೂಸ್

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.