ಬಿಜೆಪಿ ಅಭಿವೃದ್ಧಿ ಸಾಧನೆ ಶೂನ್ಯ: ಸಂತೋಷ ಲಾಡ್‌


Team Udayavani, Dec 13, 2021, 11:59 AM IST

ಬಿಜೆಪಿ ಅಭಿವೃದ್ಧಿ ಸಾಧನೆ ಶೂನ್ಯ: ಸಂತೋಷ ಲಾಡ್‌

ಕಾಗವಾಡ: ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್‌ ಪಕ್ಷ ಅ ಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನುಅಧಿಕಾರಕ್ಕೆ ತಂದರೆ ಅಭಿವೃದ್ಧಿಗೆಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಉಸ್ತುವಾರಿ ಸಂತೋಷ ಲಾಡ್‌ ಹೇಳಿದರು.

ಅವರು ರವಿವಾರ ಐನಾಪುರ ಪಟ್ಟಣದಲ್ಲಿ ಪುರಸಭೆ ಹಾಗೂಪಪಂ ಚುನಾವಣೆ ಅಂಗವಾಗಿಕರೆದಿದ್ದ ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದುರಾಡಳಿತದಿಂದ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ.ಮೊನ್ನೆ ನಡೆದ ವಿಧಾನ ಪರಿಷತ್‌ಚುನಾವಣೆಯಲ್ಲಿ ಹಣದ ಹೊಳೆಯನ್ನೇಹರಿಸಿ ಚುನಾವಣೆಯನ್ನು ನಡೆಸಿದ್ದರು.ಅದೇ ರೀತಿ ಪುರಸಭೆ ಹಾಗೂಪಪಂ ಚುನಾವಣೆಗಳನ್ನು ನಡೆಸಲುಬಿಜೆಪಿ ಹುನ್ನಾರ ನಡೆಸಿದೆ. ಇಂಥದುರಾಡಳಿತದ ಬಿಜೆಪಿಗೆ ಕಾಂಗ್ರೆಸ್‌ ಕಾರ್ಯಕರ್ತರು ಸಂಘಟಿತವಾಗಿ ಚುನಾವಣೆಯನ್ನು ಎದುರಿಸಿ ತಕ್ಕ ಪಾಠ ಕಲಿಸಬೇಕೆಂದರು.

ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದೊಂದೇ ಬಿಜೆಪಿಯಸಾಧನೆಯಾಗಿದೆ. ಅದನ್ನು ಬಿಟ್ಟರೆಅಭಿವೃದ್ಧಿ ಶೂನ್ಯ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗ್ಯಾಸ್‌, ಪೆಟ್ರೋಲ್‌,ಡೀಸೆಲ್‌ ಸೇರಿದಂತೆ ಪ್ರತಿಯೊಂದುವಸ್ತುಗಳ ಬೆಲೆಯನ್ನು ಹೆಚ್ಚಿಸುವಮೂಲಕ ಜನಸಾಮಾನ್ಯರ ಬದುಕನ್ನುಕಸಿದುಕೊಂಡಿದ್ದಾರೆ. ಇಂಥ ಭ್ರಷ್ಟಸರ್ಕಾರಕ್ಕೆ ಪುರಸಭೆ ಹಾಗೂ ಪಟ್ಟಣಪಂಚಾಯತ್‌ ಚುನಾವಣೆಯಲ್ಲಿತಕ್ಕ ಪಾಠ ಕಲಿಸುವ ಮೂಲಕ ಕಿತ್ತೆಸೆಯಬೇಕೆಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ಚಿಂಗಳೆ, ಕೆಪಿಸಿಸಿ ಸದಸ್ಯ ದಿಗ್ವಿಜಯಪವಾರ ದೇಸಾಯಿ, ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ವಿಜಯಕುಮಾರ ಅಕಿವಾಟೆ,ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಗಾಣಿಗೇರ, ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ, ಸುಭಾಷಗೌಡಪಾಟೀಲ, ರಾಜುಗೌಡ ಪಾಟೀಲ, ಪ್ರವೀಣ(ಪುಟ್ಟು) ಗಾಣಿಗೇರ, ಕುಮಾರಅಪರಾಜ, ಅರುಣ ಗಾಣಿಗೇರ,ಬಾಳಾಸಾಹೇಬ ದಾನೊಳ್ಳಿ, ಗಜಾನನಯರಂಡೋಲಿ, ಸಂಜಯ ಕುಚನೂರೆ,ಸಂಜು ಭೀರಡಿ, ಆದಿನಾಥ ದಾನೊಳ್ಳಿ,ವಿಶ್ವನಾಥ ನಾಮದಾರ, ದಾದಾಸಾಹೇಬಜಂತೆಣ್ಣವರ, ಗೋಪಾಲ ಮಾನಗಾಂವೆ,ಗುರುರಾಜ ಮಡಿವಾಳರ, ರಮಜಾನಮುಜಾವರ, ಮಹಿಬೂಬ ನನದಿ,ಕುಮಾರ ಜಯಕರ, ಅನೂಪ ಶೆಟ್ಟಿ,ಸುರೇಶ ಅಡಿಸೇರಿ, ಸುನೀಲ ಪಾಟೀಲ,ಸುರೇಶ ಗಾಣಿಗೇರ, ಮುರಗೆಪ್ಪ ಮಹಾಜನ ಇನ್ನಿತರರಿದ್ದರು.

ಯಾರದೋ ಮನೆಯಲ್ಲಿ ಕುಳಿತು ಟಿಕೆಟ್‌ ಹಂಚಿಕೆಮಾಡುತ್ತಿಲ್ಲ. ಪಟ್ಟಣದ ಎಲ್ಲಮುಖಂಡರ ಅಭಿಪ್ರಾಯಪಡೆದು ಯೋಗ್ಯ ಹಾಗೂ ಭ್ರಷ್ಟಾಚಾರ ಮುಕ್ತ ಸೇವಾಮನೋಭಾವ ಹೊಂದಿದ ಜನಪರ ಯುವಕರನ್ನು ಕಣಕ್ಕಿಳಿಸುತ್ತಿದ್ದೇವೆ. ಈ ಬಾರಿ ಐನಾಪುರ ಪಪಂನಲ್ಲಿಕಾಂಗ್ರೆಸ್‌ ಪಕ್ಷದ ಅತಿಹೆಚ್ಚುಅಭ್ಯರ್ಥಿಗಳು ಆಯ್ಕೆಯಾಗುವಂತೆಪ್ರತಿಯೊಬ್ಬರೂ ಶ್ರಮಿಸಬೇಕು. -ರಾಜು ಕಾಗೆ, ಮಾಜಿ ಶಾಸಕ

ರಾಜ್ಯ-ದೇಶದಲ್ಲಿ ಬಿಜೆಪಿಯಿಂದ ರೈತರಉದ್ಧಾರ ಸಾಧ್ಯವಿಲ್ಲ.ಇವರದ್ದು ಅದಾನಿ, ಅಂಬಾನಿಪರವಾಗಿರುವಂತ ಸರ್ಕಾರ.ಇಂಥವರಿಂದ ದೇಶಉದ್ಧಾರವಾಗಲು ಸಾಧ್ಯವಿಲ್ಲ.ಇವರನ್ನು ಹೀಗೆ ಆಡಳಿತ ನಡೆಸಲು ಬಿಟ್ಟರೆ ದೇಶದಲ್ಲಿ ಮುಂದೊಂದು ದಿನ ತಿನ್ನಲು ಅನ್ನ ಕೂಡ ಸಿಗುವುದು ಕಷ್ಟವಾಗುತ್ತದೆ. -ರಾಜುಗೌಡ ಪಾಟೀಲ, ಕಾಂಗ್ರೆಸ್‌ ಮುಖಂಡ

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.