ಏಣಗಿ ಬಾಳಪ್ಪನವರಿಗೆ ಅವರೇ ಸಾಟಿ: ಕಾಟ್ಕರ್‌

ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ 8ನೇ ಮುದ್ರಣ ಬಿಡುಗಡೆ

Team Udayavani, May 24, 2022, 12:07 PM IST

10

ಬೆಳಗಾವಿ: ಎಂಟು ದಶಕಗಳವರೆಗೆ ರಂಗಭೂಮಿ ಮೇಲೆ ಮಿಂಚಿದ ಏಣಗಿ ಬಾಳಪ್ಪ ಈ ನಾಡಿನ ಹೆಮ್ಮೆ. ಅವರ ಆತ್ಮಕಥೆ ಇಡೀ ಕರ್ನಾಟಕದ ರಂಗಭೂಮಿಯ ಅಪೂರ್ವ ಕಥೆಯಿದ್ದಂತೆ. ಬಾಳಪ್ಪನವರಿಗೆ ಅವರೇ ಸಾಟಿ ಎಂದು ಸಾಹಿತಿ ಡಾ| ಸರಜೂ ಕಾಟ್ಕರ್‌ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ರಂಗಸಂಪದ ಹಾಗೂ ಚಂದ್ರಕಾಂತ ಕೂಸನೂರು ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತು ಗಣೇಶ ಅಮೀನಗಡ ನಿರೂಪಿಸಿದ ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ 8ನೇ ಮುದ್ರಣ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಾಳಪ್ಪನವರ ಕಲಾ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರು ಬೇರೆ ಕಂಪನಿಗಳಲ್ಲೂ ನಟಿಸಿದರು, ತಾವೇ ಕಂಪನಿ ಹುಟ್ಟು ಹಾಕಿ ಅದನ್ನೂ ನಡೆಸಿದರು. ತಾವೇ ನಡೆಸುತ್ತಿದ್ದ ನಾಟಕ ಕಂಪನಿ ಉಛ್ರಾಯ ಸ್ಥಿತಿ ತಲುಪಿತ್ತು. ಅಂತೆಯೇ ಕೆಲಕಾಲ ಅವರೂ ಕಷ್ಟದ ದಿನಗಳನ್ನೂ ಕಂಡಿದ್ದರು. ಆದರೆ, ರಂಗಭೂಮಿಯೊಂದಿಗಿನ ನಂಟು ಕಳಚಿಕೊಳ್ಳಲಿಲ್ಲ ರಂಗಭೂಮಿಯಲ್ಲಿ ದೀರ್ಘ‌ ಕಾಲ ಗಟ್ಟಿಯಾಗಿ ಉಳಿದರು. ಅದನ್ನು ಉಳಿಸಿದರು, ಬೆಳೆಸಿದರು ಎಂದರು.

ಏಣಗಿ ಬಾಳಪ್ಪ ಅವರಿಗೆ ಹೆಸರು ತಂದುಕೊಟ್ಟ ನಾಟಕ ಮತ್ತು ಪಾತ್ರ ಬಸವೇಶ್ವರ. ಈ ನಾಟಕ ನಡೆದಾಗ ಒಂದು ಬಾರಿ ಪ್ರಸಿದ್ಧ ಮಠದ ಮಠಾಧೀಶರೊಬ್ಬರು ವೇದಿಕೆ ಏರಿ ಬಸವೇಶ್ವರ ಪಾತ್ರಧಾರಿ ಬಾಳಪ್ಪನವರ ಕಾಲಿಗೆ ಎರಗಿದ ಘಟನೆ ನಡೆಯಿತು. ಅಷ್ಟರಮಟ್ಟಿಗೆ ಬಸವೇಶ್ವರ ಪಾತ್ರ ಮತ್ತು ನಾಟಕ ಖ್ಯಾತಿಗಳಿಸಿತ್ತು ಎಂದ ಅವರು, ಬಾಳಪ್ಪನವರ ನಾಟಕಗಳನ್ನು ಕುಟುಂಬದವರೆಲ್ಲ ಕುಳಿತು ನೋಡಬಹುದಾಗಿತ್ತು ಎಂದು ಸ್ಮರಿಸಿದರು. ಬಾಳಪ್ಪ ಸಮಾಜಮುಖೀಯೂ ಆಗಿದ್ದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ್ದರು. ಕರ್ನಾಟಕ ಏಕೀಕರಣ ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟ್ಟಂತೆ ಜನಜಾಗೃತಿ  ಮೂಡಿಸುವಂತಹ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅವರ ಕುರಿತಾದ ಈ ಕೃತಿ ಕನ್ನಡ, ಇಂಗ್ಲಿಷ್‌ ಮತ್ತು ಮರಾಠಿಯಲ್ಲಿ ಮುದ್ರಣ ಕಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎಸ್‌. ಗವಿಮಠ ಮಾತನಾಡಿ, ಕನ್ನಡ ರಂಗಭೂಮಿಯ ಶತಮಾನದ ಇತಿಹಾಸವೆಂದರೆ ಏಣಗಿ ಬಾಳಪ್ಪ. 1984ರಿಂದ ಅವರೊಂದಿಗೆ ಒಡನಾಟ ಆರಂಭವಾಯಿತು. ರಂಗಭೂಮಿ ಬಗ್ಗೆ ನನಗೆ ಪ್ರೀತಿ ಬೆಳೆಯಿತು. ರಂಗಭೂಮಿಯಲ್ಲಿ ಶಾಸ್ತ್ರೀಯವಾಗಿ ಕಲಿಯಬಯಸುವವರು ನಾಟ್ಯಭೂಷಣ ಕೃತಿಯನ್ನು ಓದಲೇಬೇಕು ಎಂದ ಅವರು, ಸರ್ಕಾರದಿಂದ ಬಾಳಪ್ಪನವರನ್ನು ಗುರುತಿಸುವ ಕೆಲಸ ಇಂದಿಗೂ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಲೇಖಕಿ ಆಶಾ ಕಡಪಟ್ಟಿ ಮಾತನಾಡಿ, ಸ್ವರಧಾರೆ ಗುಂಪು ಕಟ್ಟಿಕೊಂಡು ಏಣಗಿ ಬಾಳಪ್ಪನವರ ರಂಗಗೀತೆಗಳನ್ನು ನಾವೆಲ್ಲ ಕಲಿತಿದ್ದೇವೆ. ಬಯಲಾಟದಿಂದ ಆರಂಭವಾದ ಅವರ ಕಲಾ ಬದುಕು ರಂಗಭೂಮಿಯಲ್ಲಿ ಉನ್ನತ ಶಿಖರವೇರಿತು. ಅವರು ರಂಗಭೂಮಿ ಉಳಿಸಿ, ಬೆಳೆಸಿದರು. ಅದರ ಗೌರವವನ್ನೂ ಹೆಚ್ಚಿಸಿದರು ಎಂದು ಸ್ಮರಿಸಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ಬಣ್ಣದ ಬದುಕಿನ ಚಿನ್ನದ ದಿನಗಳ ರಚನೆಗೆ 4 ವರ್ಷ ಬೇಕಾಯಿತು. 2007 ರಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಬಿಡುಗಡೆಗೊಂಡ ಕೃತಿ ಒಂದೇ ವರ್ಷದಲ್ಲಿ 6 ಕಡೆ ಬಿಡುಗಡೆ ಕಂಡಿತು ಎಂದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೊನೊಳ್ಳಿ ಮಾತನಾಡಿ, ಬಾಳಪ್ಪನವರದು ವರ್ಣನಾತೀತ ವ್ಯಕ್ತಿತ್ವ. ಮರಾಠಿ ಪ್ರದೇಶವಾದ ಖಾನಾಪೂರದಲ್ಲಿ ಬಾಳಪ್ಪನವರ ನಾಟಕಗಳು ನಡೆದಾಗಿನ ದಿನಗಳು ಮತ್ತು ಬಾಳಪ್ಪನವರ ಕುಟುಂಬದೊಂದಿಗಿನ ಸೊನಳ್ಳಿ ಕುಟುಂಬದ ಸಂಬಂಧವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಆರ್‌.ಬಿ.ಕಟ್ಟಿ, ಡಾ| ಬಸವರಾಜ ಜಗಜಂಪಿ, ಡಾ| ರಾಮಕೃಷ್ಣ ಮರಾಠೆ, ಡಾ| ಎಚ್‌ .ಬಿ.ರಾಜಶೇಖರ, ಡಾ| ಎಚ್‌.ಬಿ.ಕೋಲಕಾರ, ಡಾ| ಎಸ್‌.ಎಸ್‌.ಅಂಗಡಿ, ಯ.ರು.ಪಾಟೀಲ, ಸುಭಾಸ ಏಣಗಿ, ಮುರುಗೇಶ ಶಿವಪೂಜಿ ಉಪಸ್ಥಿತರಿದ್ದರು. ಬಸವರಾಜ ಗಾರ್ಗಿ ನಿರೂಪಿಸಿದರು. ಹಮೀದಾಬೇಗಂ ದೇಸಾಯಿ ಸ್ವಾಗತಿಸಿದರು. ನೈನಾ ಗಿರಿಗೌಡರ ಪ್ರಾರ್ಥಿಸಿದರು. ಸುನೀತಾ ದೇಸಾಯಿ ವಂದಿಸಿದರು.

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.