![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 3, 2020, 2:37 PM IST
ಗೋಕಾಕ: ಮಳೆ ಹಾಗೂ ಪ್ರವಾಹದಿಂದ ಕುಸಿದ ಮನೆಗಳ ಜಿ.ಪಿ.ಎಸ್ ಮಾಡಿ ವರದಿ ಸಲ್ಲಿಸಲು ಜಿ.ಪಂ ಇಂಜಿನಿಯರ್‌ಗಳು ರೈತರಿಂದ ಲಂಚ ಕೇಳಿ, ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ರೈತ ಸಂಘದ ನೂರಾರು ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ ಜಿ.ಪಂ ಇಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದುಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ ಎಇಇ ಉದಯಕುಮಾರ ಕಾಂಬ್ಳೆ ಅವರು, ತಪ್ಪಿತಸ್ಥ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಬಾಕಿ ಉಳಿದ ಎಲ್ಲ ರೈತರ ಬಿದ್ದ ಮನೆಗಳ ಜಿಪಿಎಸ್‌ನ್ನು ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ರೈತರ ಕ್ಷಮೆ ಕೇಳಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು, ತಹಶೀಲ್ದಾರ ಕಚೇರಿಗೆ ತೆರಳಿ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ, ಲಂಚ ಕೇಳಿದ ಇಂಜಿನಿಯರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ ಮುಖಾಂತರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
2019 -20 ನೇ ಸಾಲಿನಲ್ಲಿ ಘಟಪ್ರಭಾ ನದಿಗೆ ಉಂಟಾದ ಪ್ರವಾಹಕ್ಕೆ ನದಿಯ ದಡದ ರೈತರು ತಮ್ಮ ಮನೆ ಕಳೆದುಕೊಂಡು ಗುಡಿ-ಗುಂಡಾರ ಹಾಗೂ ಧರ್ಮಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. 2 ವರ್ಷಗಳು ಕಳೆದರೂ ಸಹ ಇನ್ನೂವರೆಗೆ ಮನೆ ಕಟ್ಟಲು ಸರಕಾರದಿಂದ ಪರಿಹಾರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಬೇಕಾದ ಜಿ.ಪಂ ಇಂಜಿನಿಯರ್ ರೈತರಿಂದ ಮನೆ ಜಿಪಿಎಸ್ ಮಾಡಲು ಲಂಚ ಕೇಳುತ್ತಿದ್ದು, ಹಣ ಕೊಡದವರ ಮನೆಗಳನ್ನು ಲಾಗ್ ಇನ್ ಮಾಡದೆ ಕೈ ಬಿಟ್ಟಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಂಘಟನೆಯ ರಾಜ್ಯ ಸಂಚಾಲಕ ಗಣೇಶ ಈಳಿಗೇರ, ರಮೇಶ ಬೂದಿಗೊಪ್ಪ, ಮುತ್ತೆಪ್ಪ ಕುರುಬರ,ಶಂಕರ ಹಡಗಿನಾಳ, ಮಹಾವೀರ ದಪ್ಪಾದುಳಿ, ಶಿವಾನಂದ ಇಳಿಗೇರ, ರಾಜು ಜಿಗತಮ್ಮನವರ, ಸಂಜುದೇಮನ್ನವರ, ಆಕಾಶ ಬಂಡಿ, ಮಾರುತಿ ಸನದಿ, ವಿಠಲಮಹಾಕಾಳಿ, ಮಲೀಕ ಬಳಿಗಾರ, ಸಾಗರ ಬಂಡಿ, ಸಿದ್ದಲಿಂಗ ಪೂಜಾರಿ, ಮಲ್ಲಿಕಾರ್ಜುನ ಇಳಿಗೇರ, ದುರ್ಗಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಇದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.