ಪುಂಡರ ವಿರುದ್ಧ ದೇಶದ್ರೋಹ, ಗೂಂಡಾ ಕಾಯ್ದೆಯಡಿ ಪ್ರಕರಣ
ಪ್ರತಿಮೆ ಭಗ್ನಗೊಳಿಸಿದ ಕೃತ್ಯ ವಿರುದ್ಧ ವಿಧಾನಸಭೆ ಖಂಡನ ನಿರ್ಣಯ
Team Udayavani, Dec 21, 2021, 7:00 AM IST
ಬೆಳಗಾವಿ: ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಪ್ರತಿಮೆಗಳಿಗೆ ಹಾನಿ ಮಾಡಿರುವ, ಬಸವೇಶ್ವರರ ಭಾವಚಿತ್ರಕ್ಕೆ ಮಸಿ ಬಳಿದಿರುವ ಪ್ರಕರಣಗಳನ್ನು ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಖಂಡಿಸಿ, ಕೃತ್ಯ ಎಸಗಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಜೆಡಿಎಸ್‌ನ ಡಾ| ಅನ್ನದಾನಿ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮೂರೂ ಪಕ್ಷಗಳ ಸದಸ್ಯರು ಪುಂಡಾಟಿಕೆಯನ್ನು ಒಕ್ಕೊರ ಲಿನಿಂದ ಖಂಡಿಸಿದರು, ಇಂಥ ಕೃತ್ಯ ಎಸಗುವವರು “ದೇಶದ್ರೋಹಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಎಂಇಎಸ್ ಬಗ್ಗೆ ಕಿಡಿಕಾರಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನ ನಿರ್ಣಯ ಕೈಗೊಳ್ಳುವ ಸಲಹೆ ನೀಡಿದರು. ಇದಕ್ಕೆ ಪಕ್ಷಾತೀತ ಸಹಮತ ವ್ಯಕ್ತವಾಯಿತು. ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ಮಹಾರಾಷ್ಟ್ರ ಮತ್ತು ಎಂಇಎಸ್ ವಿರುದ್ಧ ಹರಿಹಾ ಯ್ದರು. ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪ ಗೊಳಿಸಿರುವುದು ದೇಶದ್ರೋಹದ ಕೆಲಸ. ಕೃತ್ಯದಲ್ಲಿ ಪಾಲ್ಗೊಂಡವರ ಹಿನ್ನೆಲೆ ಪತ್ತೆ ಹಚ್ಚ ಲಾಗುತ್ತಿದೆ. ಕೆಲವು ಸಂಘಟನೆಗಳು ಭಾಗಿಯಾಗಿ ರುವ ಶಂಕೆಯಿದ್ದು, ಮೂಲ ವ್ಯಕ್ತಿಯನ್ನು ಬಂಧಿಸ ಲಾಗಿದೆ. ಶಿವಾಜಿ ಮೂರ್ತಿಗೆ ಮಸಿ ಬಳಿದವ ನನ್ನೂ ಬಂಧಿಸಲಾಗಿದೆ. ಇದರ ಹಿಂದೆಯೂ ದೊಡ್ಡ ಶಕ್ತಿ ಇದೆ. ಇದೆಲ್ಲವನ್ನು ತನಿಖೆಯ ಬಳಿಕ ಬಹಿರಂಗಪಡಿಸುತ್ತೇವೆ ಎಂದರು.
ಇದನ್ನೂ ಓದಿ:ಹೆಚ್ಚುತ್ತಿರುವ ಸೋಂಕಿನ ಪ್ರಕರಣ : ಎಲ್ಲ ಹೊರರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ : BBMP
ಮಹಾರಾಷ್ಟ್ರದ ಜತ್ ತಾಲೂಕಿನ 40 ಗ್ರಾ.ಪಂ.ಗಳು ಅಲ್ಲಿನ ಸರಕಾರ ತಮಗೆ ಕುಡಿಯಲು ನೀರು ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿ, ಕರ್ನಾಟಕಕ್ಕೆ ಸೇರಿಸುವಂತೆ ನಿರ್ಣಯ ಕೈಗೊಂಡಿವೆ. ಅವರು ಒಪ್ಪಿದರೆ ಸೇರಿಸಿಕೊಳ್ಳಲು ಸಿದ್ಧರಿದ್ದೇವೆ. ಇದು ವಿವಾದವಾಗಬಹುದು. ಅದನ್ನು ಎದುರಿಸಲು ತಯಾರಿದ್ದೇವೆ ಎಂದರು.
ಎಂಇಎಸ್ ನಿಷೇಧಿಸುವ ಬಗ್ಗೆ ಕಾನೂನು ಅವಕಾಶವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅವಕಾಶ ಇಲ್ಲದಿದ್ದರೆ ಎಂಇಎಸ್ ನಿಯಂತ್ರಿಸುತ್ತೇವೆ. ಗಡಿ ಅಭಿವೃದ್ಧಿ, ಮಹಾರಾಷ್ಟ್ರ ದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಕ್ಕೊರಲ ನಿರ್ಣಯ
ಗಡಿ ವಿವಾದದಲ್ಲಿ ಮಹಾಜನ ಆಯೋಗದ ವರದಿ ಅಂತಿಮ. ರಾಜ್ಯದ ಈಗಿರುವ ಗಡಿ ಯಥಾಸ್ಥಿತಿ ಕಾಪಾಡಲು ಬದ್ಧವಾಗಿದೆ. ಆದರೂ ಗಡಿ ವಿವಾದವನ್ನು ಜೀವಂತ ಇಡುತ್ತ ಬರಲಾಗುತ್ತಿದೆ. ರಾಯಣ್ಣನ ಪ್ರತಿಮೆ, ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವ ಪ್ರಕರಣವನ್ನು ಸಭೆ ಖಂಡಿಸುತ್ತದೆ. ಇದನ್ನು ದೇಶದ್ರೋಹದ ಕೆಲಸ ಎಂದು ಪರಿಗಣಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗುವುದು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು. ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇರಬೇಕೆಂದು ಬಯಸುತ್ತೇವೆ. ಗಡಿ ಆಚೆಗೆ ನಡೆಯುತ್ತಿರುವ ಕುಕೃತ್ಯವನ್ನು ತಡೆ ಯಬೇಕು ಎಂದು ಸದನ ಒಕ್ಕೊರಲಿನಿಂದ ನಿರ್ಣಯಿಸಿತು.
ನಾಡು ನುಡಿಗೆ ಅವಮಾನವನ್ನು ಯಾವ ಸರಕಾರವೂ ಸಹಿ ಸುವುದಿಲ್ಲ. ಪ್ರತಿ ಭಟನೆಯ ಹೆಸರಿನಲ್ಲಿ ಮಹನೀಯರ ಪ್ರತಿಮೆ ಗಳಿಗೆ ಅವಮಾನವನ್ನು ಖಂಡಿಸು ತ್ತೇನೆ. ಪುಂಡಾಟಿಕೆ ಮಾಡಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು.
-ಬಿ.ಎಸ್. ಯಡಿಯೂರಪ್ಪ , ಮಾಜಿ ಸಿಎಂ
ರಾಯಣ್ಣ , ಶಿವಾಜಿ ಮೂರ್ತಿಗಳ ಮೇಲಿನ ದಾಳಿ ಖಂಡಿಸುತ್ತೇನೆ. ಈ ಕೃತ್ಯದಲ್ಲಿ ಪಾಲ್ಗೊಂಡವರನ್ನು ಗಡಿಪಾರು ಮಾಡಿ, ಕಾನೂನಿ ನಲ್ಲಿ ಅವಕಾಶ ಇದ್ದರೆ ಎಂಇಎಸ್ ನಿಷೇಧ ಮಾಡಿ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ಅಲ್ಲಿ ಕನ್ನಡ ಬಾವುಟ ಸುಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ.
-ಸಿದ್ದರಾಮಯ್ಯ, ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.