ಚಿಕ್ಕೋಡಿ: ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಅನ್ನದಾತರಿಗೆ ವರದಾನ
ಏತ ನೀರಾವರಿ ಯೋಜನೆಯಿಂದ ಸಿಬಿಸಿ ಕಾಲುವೆಗೆ ನೀರು ಹರಿಲಾರಂಭಿಸಿದೆ
Team Udayavani, May 22, 2023, 4:39 PM IST
ಚಿಕ್ಕೋಡಿ: ಬಿರು ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ಚಿಕ್ಕೋಡಿ ಭಾಗದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶ್ರೀ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಚಿಕ್ಕೋಡಿ ತಾಲೂಕಿನ ಜನತೆಗೆ ವರದಾನವಾಗಿ ಪರಿಣಮಿಸಿದೆ.
ಒಂದೆಡೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಇನ್ನೊಂದೆಡೆ ಕೃಷ್ಣಾ ನದಿಯ ಒಳಹರಿವು ಗಣನೀಯ ಪ್ರಮಾಣದಲ್ಲಿ
ಇಳಿಕೆಯಾಗಿ ತಾಲೂಕಿನ ಜಲಮೂಲಗಳು ಬತ್ತಲಾರಂಬಿಸುತ್ತಿವೆ. ಅಂತರ್ಜಲ ಮಟ್ಟವೂ ಕ್ಷೀಣಿಸಲು ಆರಂಭಿಸಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಹ ಹಾಹಾಕಾರ ಏರ್ಪಟ್ಟಿತ್ತು. ಆದರೆ ಕ್ಷೇತ್ರದಲ್ಲಿ ಗಟ್ಟಿ ನಾಯಕತ್ವದ ಫಲವಾಗಿ ಇದೆಲ್ಲಕ್ಕೂ ತಕ್ಕ ಮಟ್ಟಿಗೆ ಪರಿಹಾರ ಸಿಗಲು ಸಾಧ್ಯವಾಗಿದೆ.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ದೂರದೃಷ್ಟಿ ಫಲವಾಗಿ ರೂಪುಗೊಂಡ
ಶ್ರೀ ಅನ್ನಪೂಣೇಶ್ವರಿ ಏತ ನೀರಾವರಿ ಯೋಜನೆಯಿಂದ ಸಿಬಿಸಿ ಕಾಲುವೆಗೆ ನೀರು ಹರಿಲಾರಂಭಿಸಿದೆ. ಇದರಿಂದ
ಬೇಸಿಗೆಯಲ್ಲಿ ಚಿಕ್ಕೋಡಿ ತಾಲೂಕಿನ ಜನತೆಗೆ ಅನುಕೂಲವಾಗುತ್ತಿದೆ.
ಕೃಷ್ಣಾ ನದಿಗೆ ನೀರಿನ ಮಟ್ಟ ಕಡಿಮೆಯಾದಾಗ ತಕ್ಷಣ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ ವಿ.ಪ.ಸದಸ್ಯ ಪ್ರಕಾಶ ಹುಕ್ಕೇರಿ ಅವರು ಮಹಾರಾಷ್ಟ್ರದಿಂದ ನೀರು ಬಿಡಿಸಲು ಯಶಸ್ವಿಯಾಗಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆಯಡಿ ಕಲ್ಲೋಳ ಬಳಿ ಕೃಷ್ಣಾ ನದಿಯಿಂದ ಅತ್ಯಾಧುನಿಕ ಯಂತ್ರಗಳಿಂದ ನೀರು ಎತ್ತಿ, ಅಲ್ಲಿಂದ 15 ಕಿಮೀ ದೂರದಲ್ಲಿರುವ ಚಿಕ್ಕೋಡಿ ಬ್ರ್ಯಾಂಚ್ ಕೆನಾಲ್‌ಗೆ ನೀರು ಹರಿಸಿ,
ಇದರಿಂದ ಜನರು, ಜಾನುವಾರುಗಳಿಗೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಿಗೂ ಅಗತ್ಯ ನೀರು ಪೂರೈಸಲಾಗುತ್ತಿದೆ. ಹನಿ
ನೀರಿಗೂ ಪರದಾಡುವ ಪರಿಸ್ಥಿತಿಯಲ್ಲಿದ್ದ ಜನತೆಗೆ ಭರಪೂರ ನೀರಿನ ಅನುಕೂಲ ಮಾಡಿಕೊಡಲಾಗಿದೆ.
ವಾರದಿಂದ ಕಾಲುವೆಗೆ ನೀರು ಹರಿದು ಬರಲಾರಂಭಿಸಿದೆ. ಅಗಾಧ ಪ್ರಮಾಣದ ಬಿಸಿಲು ಇರುವುದರಿಂದ ನಿಧಾನವಾಗಿ ನೀರು
ಹರಿದು ಬರಲಾರಂಬಿಸಿದೆ. ಸದ್ಯ ಹಿರೇಕೊಡಿ, ನಾಗರಾಳ ಮತ್ತು ನೇಕ ಕಡೆ ನೀರು ಬರುತ್ತಿದೆ. ನಾಲ್ಕೈದು ದಿನಗಳ ಒಳಗಾಗಿ ಶಿರಗಾಂವ ಗ್ರಾಮದ ಕಡೆ ನೀರು ಬರುತ್ತಿದೆ. ಇದರಿಂದ ರೈತಾಪಿ ವರ್ಗದ ಜನರಿಗೆ ಅನುಕೂಲವಾಗಲಿದೆ.
*ಭೀಮಾ ಉದಗಟ್ಟಿ
ಶಿರಗಾಂವ ಗ್ರಾಮಸ್ಥರು
*ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.