ಸಂಕಷ್ಟದಲ್ಲಿ ಬೇಬಿ ಸ್ವೀಟ್‌ ಕಾರ್ನ್ ಬೆಳೆಗಾರರು

ಉತ್ತಮ ಫಸಲು ಬಂದರೂ ಸೂಕ್ತ ಮಾರುಕಟ್ಟೆ ಇಲ್ಲ ಮಹಾರಾಷ್ಟ್ರ ಗಡಿ ಬಂದ್‌ನಿಂದ ಸಾಗಾಟ ಸಮಸ್ಯೆ ಹೆಚ್ಚಳ

Team Udayavani, Apr 11, 2020, 5:03 PM IST

11-April-30

ಚಿಕ್ಕೋಡಿ: ಬೆಳಕೂಡ ಗ್ರಾಮದ ರೈತರು ಬೆಳೆದ ಬೇಬಿ ಸ್ವೀಟ್‌ ಕಾರ್ನರ್‌ ಮೆಕ್ಕೆಜೋಳ ಕಾಳು ಗಟ್ಟುವ ಮೂಲಕ ಹಾಳಾಗುತ್ತಿರುವುದನ್ನು ಪ್ರದರ್ಶಿಸಿದ ಬೆಳೆಗಾರರು.

ಚಿಕ್ಕೋಡಿ: ಕಿಲ್ಲರ ಕೊರೊನಾ ಅಟ್ಟಹಾಸದಿಂದ ಬೇಬಿ ಸ್ವೀಟ್‌ ಕಾರ್ನ್ ಬೆಳೆದ ರೈತ ಕಣ್ಣೀರು ಸುರಿಸುವಂತಾಗಿದೆ. ಸೂಕ್ತ ಮಾರುಕಟ್ಟೆ ಇಲ್ಲದೇ ಜಮೀನಿನಲ್ಲಿ ಬೆಳೆ ಹಾಳಾಗುತ್ತಿದೆ. ಇದರಿಂದ ರೈತನ ಬದುಕು ಕಷ್ಟಕರವಾಗಿದೆ. ತಾಲೂಕಿನ ಬೆಳಕೂಡ ಗ್ರಾಮ ವ್ಯಾಪ್ತಿಯ ಶಿವಶಂಕರ ಹಿರೇಮಠ ಹಾಗೂ ಅಪ್ಪಯ್ಯ ಹಿರೇಮಠ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೇಬಿ ಗೋವಿನ ಜೋಳದ ಬೆಳೆದಿದ್ದು, ಫಸಲು ಚನ್ನಾಗಿ ಬಂದಿದೆ. ಆದರೆ ಕೊರೊನಾ ಹಾವಳಿಯಿಂದ ಇಡೀ ದೇಶ ಲಾಕ್‌ಡೌನ್‌ ಆಗಿದೆ. ಅದರಲ್ಲಿಯೂ ನೆರೆಯ ಮಹಾರಾಷ್ಟ್ರ ಸಂಪರ್ಕ ಸಂಪೂರ್ಣ ಬಂದ್‌ ಆಗಿದೆ. ಇದರಿಂದ ಬೇಬಿ ಸ್ವೀಟ್‌ ಕಾರ್ನ್ ಬೆಳೆದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ನಾಲ್ಕು ಎಕರೆ ಬೆಳೆಗೆ ಪ್ರತಿ ಎಕರೆಗೆ ತಲಾ 20 ಸಾವಿರ ರೂ. ಖರ್ಚು ಮಾಡಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ಈ ಮೊದಲು ಮಹಾರಾಷ್ಟ್ರದ ಮಿಜರ್‌ ಹತ್ತಿರ ಅರಗ ಕಾರ್ಖಾನೆಗೆ ಗೋವಿನ ಜೋಳ ಸಾಗಾಟವಾಗುತ್ತಿತ್ತು. ಅಲ್ಲಿಂದ ದೊಡ್ಡ-ದೊಡ್ಡ ಹೊಟೇಲ್‌ಗ‌ಳಿಗೆ ಸರಬರಾಜು ಆಗುತ್ತಿತ್ತು. ಕೊರೊನಾ ಹಿನ್ನೆಲ್ಲೆಯಲ್ಲಿ ರಾಜ್ಯದ ಗಡಿ ಭಾಗ ಸಂಪೂರ್ಣ ಬಂದ್‌ ಆಗಿದೆ. ಜಮೀನಿನಲ್ಲಿ ಮೆಕ್ಕೆಜೋಳ ಬಲಿತು ಕಾಳಾಗುತ್ತಿದೆ. ಇದರಿಂದ ರೈತನಿಗೆ ಬಹಳ ನಷ್ಟವಾಗುತ್ತಿದೆ.

ಚಿಕ್ಕೋಡಿ ಪೂರ್ವ ಭಾಗದ ಬೆಳಕೂಡ ಗ್ರಾಮ ವ್ಯಾಪ್ತಿಯ ಪ್ರದೇಶ ಸಂಪೂರ್ಣ ಬರಪೀಡಿತ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ನೀರು ಸಿಗುವುದು ಕಷ್ಟ. ಆದರೂ ಸಾಲಸೋಲ ಮಾಡಿ ಕೊಳವೆ ಬಾವಿ ಕೊರೆಸಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಇದೀಗ ಬೇಬಿ ಸ್ವೀಟ್‌ ಕಾರ್ನ್ ಬೆಳೆ ಫಸಲು ಬಂದಿದೆ. ಆದರೆ ಮಾರಾಟವಾಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಉಪಜೀವನ ಸಾಗಿಸಲು ಬೇಬಿ ಸ್ವೀಟ್‌ ಕಾರ್ನ್ ಬಿತ್ತನೆ ಮಾಡಲಾಗಿತ್ತು. ಈಗ ಬೆಳೆ ಕೈಗೆ ಬಂದಿದೆ. ಆದರೆ ಮಾರುಕಟ್ಟೆಗೆ ಹೋಗದೇ ಹೊಲದಲ್ಲಿ ಹಾಳಾಗುತ್ತಿದೆ. ಮಾರುಕಟ್ಟೆಗೆ ಸಾಗಾಟವಾಗಿದ್ದರೇ ಟನ್‌ಗೆ ಕನಿಷ್ಠ 7 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಈಗ ಲಾಕ್‌ ಡೌನ್‌ ಇರುವುದರಿಂದ ಕನಿಷ್ಠ 3 ಲಕ್ಷ ರೂ. ಹಾನಿ ಸಂಭವಿಸುತ್ತಿದೆ ಎಂದು ಅಪ್ಪಯ್ಯ ಹಿರೇಮಠ ಕಳವಳ ವ್ಯಕ್ತಪಡಿಸಿದರು.

ಸಾಲ ಮಾಡಿ ಬೆಬಿ ಸ್ವೀಟ್‌ ಕಾರ್ನರ್‌ ಬಿತ್ತನೆ ಮಾಡಲಾಗಿದೆ. ಈಗ ಬಂದ್‌ ಇರುವುದರಿಂದ ಬೆಳೆ ಮಾರುಕಟ್ಟೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ, ಕೂಡಲೇ ಕೃಷಿ
ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಬೆಳೆಹಾನಿಗೆ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ ಮಾರುಕಟ್ಟೆಗೆ ಸಾಗಿಸಲು ಅನುಕೂಲ ಕಲ್ಪಿಸಬೇಕು.
ಶಿವಶಂಕರ ಹಿರೇಮಠ, ಬೆಳಕೂಡ ರೈತ

ಮಹಾದೇವ ಪೂಜೇರಿ

ಟಾಪ್ ನ್ಯೂಸ್

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐನಾಪೂರ: ಶ್ರೀ ಕೆರಿಸಿದ್ದೇಶ್ವರ ದೇವರ ಭೇಟಿ -ಭಂಡಾರಮಯ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ

1-cc

Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.