ಜಾನುವಾರು ಬೇನೆಗೆ ರೈತ ತತ್ತರ
Team Udayavani, Jan 12, 2019, 11:31 AM IST
ಚಿಕ್ಕೋಡಿ: ಜಾನುವಾರುಗಳಿಗೆ ವ್ಯಾಪಕವಾಗಿ ಹರಡಿರುವ ಕಾಲು-ಬಾಯಿ ಬೇನೆ ಮಹಾಮಾರಿ ರೋಗಕ್ಕೆ ತಾಲೂಕಿನ ಮುಗಳಿ ಗ್ರಾಮದ ರೈತರು ತತ್ತರಿಸಿ ಹೋಗಿದ್ದು, ಗ್ರಾಮದ ಹತ್ತಾರು ಕುಟುಂಬಗಳ ನೂರಕ್ಕೂ ಹೆಚ್ಚಿನ ರಾಸುಗಳು ರೋಗಕ್ಕೆ ಬಲಿಯಾಗಿವೆ.
ಕಳೆದ ಒಂದು ತಿಂಗಳಿಂದ ರೋಗ ಗಡಿ ಜಿಲ್ಲೆಗೆ ಹರಡಿದ್ದು, ಮುಗಳಿ ಗ್ರಾಮವೊಂದರಲ್ಲಿಯೇ ನೂರಕ್ಕೂ ಹೆಚ್ಚಿನ ಜಾನುವಾರಗಳು ರೋಗಕ್ಕೆ ತುತ್ತಾಗಿದ್ದು, ಸರ್ಕಾರವೇ ದನಕರುಗಳ ಸಾವಿಗೆ ಕಾರಣವಾಗಿದೆಂದು ಗ್ರಾಮಸ್ಥರು ಪಶು ಸಂಗೋಪನಾ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪಶು ಆಸ್ಪತ್ರೆ ಇಲ್ಲದೇ ಇರುವುದಕ್ಕೆ ಇಷ್ಟೊಂದು ಜಾನುವಾರಗಳು ಸಾವಿನ ಕದ ತಟ್ಟಿದ್ದು, ಇನ್ನೂ ಹಲವು ದನಕರುಗಳು ಸೂಕ್ತ ಚಿಕಿತ್ಸೆ ಇಲ್ಲದೇ ಒದ್ದಾಡುತ್ತಿವೆ ಎಂದು ಗ್ರಾಮದ ರೈತರು ದೂರಿದರು.
ತೀವ್ರ ಬರಗಾಲ ಪೀಡಿತ ಪ್ರದೇಶವಾಗಿರುವ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಸಮರ್ಪಕ ಮಳೆ ಆಗಿಲ್ಲ, ಇದರಿಂದ ಬರಗಾಲಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾಮಾರಿ ಕಾಲು-ಬಾಯಿ ಬೇನೆ ವಕ್ಕರಿಸಿ ರೈತರ ಹೊಟ್ಟೆಗೆ ಬರೆ ಎಳೆದಂತಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿಯೇ ಅತಿ ಹೆಚ್ಚಾಗಿ ಹೈನುಗಾರಿಕೆ ಹೊಂದಿರುವ ಮುಗಳಿ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ಜಾನುವಾರುಗಳು ಇದ್ದು, ಇಲ್ಲಿ ಪಶು ಆಸ್ಪತ್ರೆ ಇದ್ದರೆ ರೋಗ ಗುಣಪಡಿಸಬಹುದಾಗಿತ್ತು. ಆದರೆ ಸರ್ಕಾರ ಮಾತ್ರ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮೀನಮೇಷ ಮಾಡುತ್ತಿದೆ ಎಂದು ರೈತ ರಾಜು ಹರಗನ್ನವರ ಆರೋಪಿಸಿದರು.
ರೋಗದ ಲಕ್ಷಣ ಕಂಡ ತಕ್ಷಣಾ ರೋಗಗ್ರಸ್ತ ಪ್ರಾಣಿಯನ್ನು ಇತರ ಜಾನುವಾರುಗಳಿಂದ ಬೇರ್ಪಡಿಸಬೇಕು. ಅಲ್ಲದೇ ನಿತ್ಯ ಕೊಟ್ಟಿಗೆಯನ್ನು ಶುಚಿಗೊಳಿಸಿ ಕಟ್ಟುವುದರಿಂದ ಇತರ ಪ್ರಾಣಿಗಳಿಗೆ ಕಾಯಿಲೆ ಹರಡದಂತೆ ತಡೆಯಬಹುದಾಗಿದೆ. ರೋಗಗ್ರಸ್ತ ಪ್ರಾಣಿಯಿಂದ ಈ ಅಂಟು ರೋಗವು ಬೇಗನೆ ಇತರೆಡೆಗೆ ವ್ಯಾಪಿಸುವುದರಿಂದ ಈ ರಾಸುಗಳನ್ನು ಮಾರಾಟ ಮಾಡಬಾರದು. ಕಾಯಿಲೆಗೆ ತುತ್ತಾದ ಜಾನುವಾರಿನ ಕಾಲು ಬಾಯಿ ಹುಣ್ಣನ್ನು ಸ್ವಲ್ಪ ಅಡುಗೆ ಸೋಡ ದ್ರಾವಣದಿಂದ ಶುಚಿಗೊಳಿಸುವುದು. ಮೃದು ಆಹಾರ ನೀಡುವುದು. ವಿಟಮಿನ್ ಲಸಿಕೆ ಕೊಡಿಸುವ ಮೂಲಕ ಆರೈಕೆ ಮಾಡಬೇಕು ಎನ್ನುತ್ತಾರೆ ಪಶು ವೈದ್ಯರು.
ರೋಗದ ಲಕ್ಷಣ
ಕಾಲು ಮತ್ತು ಬಾಯಿ ಜ್ವರಕ್ಕೆ ತುತ್ತಾದ ಜಾನುವಾರಗಳಲ್ಲಿ ಅತಿಯಾದ ಜ್ವರ, ಬಾಯಿಯಲ್ಲಿ ನೀರ್ಗುಳ್ಳೆ, ಜೊಲ್ಲು ಸುರಿಸುವುದು. ಕಾಲು ಕುಂಟುವುದು ಹಾಗೂ ಕೆಚ್ಚಲಿನ ಮೇಲೆ ಗುಳ್ಳೆಗಳು ಮೂಡುವುದು ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತವೆ.
ಪ್ರತಿ ವರ್ಷ ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಬರದಂತೆ ಪಶುಸಂಗೋಪನಾ ಇಲಾಖೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಲಸಿಕೆ ಕೊಡಿಸಿದೆ. ರೋಗಕ್ಕೆ ತುತ್ತಾಗಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಚಳಿ ಹೆಚ್ಚಾಗಿ ಇರುವುದರಿಂದ ಶೇ 30ರಷ್ಟು ಕರುಗಳ ಸಾವಿನ ಪ್ರಮಾಣ ಹೆಚ್ಚಿತ್ತದೆ. ಮುಗಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
•ಡಾ. ಸದಾಶಿವ ಉಪ್ಪಾರ,
ತಾಲೂಕು ಆರೋಗ್ಯಾಧಿಕಾರಿ,
ಪಶು ಸಂಗೋಪನಾ ಇಲಾಖೆ ಚಿಕ್ಕೋಡಿ
ಜಾನುವಾರುಗಳನ್ನೇ ನಂಬಿಕೊಂಡಿರುವ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಕಾಲುಬಾಯಿ ಬೇನೆ ರೋಗಕ್ಕೆ ನಮ್ಮ ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ಗ್ರಾಮದಲ್ಲಿ ಪಶು ಆಸ್ಪತ್ರೆ ಆರಂಭಿಸಿ ವೈದ್ಯರ ನೇಮಕ ಮಾಡಬೇಕು.
•ಗಣಪತಿ ಬಡಿಗೇರ,
ಮುಗಳಿ ಗ್ರಾಮದ ರೈತ.
ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.