ಮೂರು ನೈರ್ಮಲೀಕರಣ ಘಟಕ ಸ್ಥಾಪನೆ
Team Udayavani, Apr 10, 2020, 12:31 PM IST
ಚಿಕ್ಕೋಡಿ: ನಗರದಲ್ಲಿ ಕೊರೊನಾ ನೈರ್ಮಲೀಕರಣ ಘಟಕಗಳಿಗೆ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಉದ್ಘಾಟಿಸಿದರು.
ಚಿಕ್ಕೋಡಿ: ನಗರದ ಮೂರು ಕಡೆಗಳಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟುವ ನೈರ್ಮಲೀಕರಣ ಘಟಕಗಳು ಸ್ಥಾಪನೆಯಾಗಿದ್ದು, ಪೊಲೀಸ್, ಪೌರ ಕಾರ್ಮಿಕರು ಹಾಗೂ ವೈದ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು.
ನಗರದಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಪುರಸಭೆ ಚಿಕ್ಕೋಡಿ ಹಾಗೂ ಕೇಶವ ಸ್ಮೃತಿ ಟ್ರಸ್ಟ್ ಚಿಕ್ಕೋಡಿ ಆಶ್ರಯದಲ್ಲಿ ನಿರ್ಮಿಸಿದ ಕೊರೊನಾ ಹರಡುವಿಕೆ ತಡೆಗಟ್ಟುವ ನೈರ್ಮಲೀಕರಣ ಮೂರು ಘಟಕಗಳ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟಲು ಇಂತಹ ನೈರ್ಮಲೀಕರಣ ಘಟಕಗಳ ಪಾತ್ರ ಮುಖ್ಯವಾಗಿವೆ ಎಂದರು. ಬಸವ ಪ್ರಸಾದ ಜೊಲ್ಲೆ ಮಾತನಾಡಿ, ದೇಶಾದ್ಯಂತ ಮತ್ತು ರಾಜ್ಯದಲ್ಲಿ ಕೂಡ ಕೊರೊನಾ ವೈರಸ್ ಮಹಾಮಾರಿ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲರಿಗೂ ಸ್ಯಾನಿಟೈಸರ್ ಮುಖ್ಯ. ಪೊಲೀಸರು, ವೈದ್ಯರು ಹಾಗೂ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರು ಈ ಘಟಕಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಧುರೀಣ ಜಗದೀಶ ಕವಟಗಿಮಠ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳಗಾವಿ ವಿಭಾಗದ ಸಂಜಯ ಅಡಕೆ, ಮನೋಜ ನಾಯಿಕ, ವಿಠ್ಠಲ ಶಿಂಧೆ, ಸಿಎಂಒ ಸಂತೋಷ ಕೊಣ್ಣೂರೆ, ಡಾ| ಸುಂದರ ರೋಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.