ಮಕ್ಕಳಿಗೆ ದೊರಕದ ಅಂಗನವಾಡಿ ನೆರಳು
Team Udayavani, Sep 20, 2019, 1:00 PM IST
ಹಿರೇಬಾಗೇವಾಡಿ: ಖಾಸಗಿ ಕಾನ್ವೆಂಟ್ ಹಾವಳಿಯಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ದಾಖಲಾತಿಯ ಪ್ರಮಾಣ ಕುಸಿಯುತ್ತಿದೆ ಎಂದುಕೊಂಡರೂ ಇದಕ್ಕೆ ಅಪವಾದ ಎಂಬಂತೆ ಮಾಸ್ತಿಮರರ್ಡಿ ಗ್ರಾಮದ 455 ಸಂಖ್ಯೆಯ ಅಂಗನವಾಡಿ ಕೇಂದ್ರದಲ್ಲಿ 42 ವಿದ್ಯಾರ್ಥಿಗಳು ದಾಖಲಾಗಿ ಅಚ್ಚರಿ ಮೂಡಿಸಿದ್ದಾರೆ. ವಿಪರ್ಯಾಸ ಎಂದರೆ ಬಹು ವರ್ಷಗಳಿಂದಲೂ ಸ್ವಂತ ಕಟ್ಟಡ ಇಲ್ಲದೇ ಹತ್ತು ಹಲವು ಸಮಸ್ಯೆಗಳಿಂದ ಅಂಗನವಾಡಿ ಶಿಕ್ಷಕಿಯರು ಹಾಗೂ ಮಕ್ಕಳು ಬಳಲುವಂತಾಗಿದೆ.
ಏನು ಸಮಸ್ಯೆಃ ಈ ಅಂಗನವಾಡಿಗೆ ಸ್ವಂತ ಕಟ್ಟಡ ಒದಗಿಸಲು 2013-14ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್.ಐ.ಡಿ.ಎಫ್ ಯೋಜನೆ ಅಡಿ 4.50 ಲಕ್ಷ ರೂ. ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ಆದರೆ ಗುತ್ತಿಗೆದಾರನ ವಿಳಂಬ ಧೋರಣೆ ಹಾಗೂ ಜಿ.ಪಂ ಅಭಿಯಂತರ. ನಿರ್ಲಕ್ಷ್ಯ ದಿಂದ ಇದುವರೆಗೂ ಕಟ್ಟಡ ಪೂರ್ಣಗೊಳ್ಳದೇ ಮಕ್ಕಳು ಬೇರೆ ಕಟ್ಟಡದಲ್ಲಿ ಓದುವ ಅನಿವಾರ್ಯತೆ ಬಂದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೈತಿಕ ಚಟುವಟಿಕೆ: ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಸ್ವಂತ ಜಾಗವಿಲ್ಲದೇ ಪಕ್ಕದ ಪ್ರೌಢಶಾಲೆಯಲ್ಲಿ ಆಶ್ರಯ ಪಡೆದು ಕೆಂದ್ರವನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣಕಾಸಿನ ಮುಗ್ಗಟ್ಟು ಮತ್ತು ಗ್ರಾಪಂ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಪಂ ಬೆಳಗಾವಿ ಉಪ ವಿಭಾಗದ ತಾಂತ್ರಿಕ ಅಧಿ ಕಾರಿ ಇವರ ನಡುವಿನ ಸಮನ್ವಯದ ಕೊರತೆಯಿಂದಾಗಿ ಜನರಿಗೆ ತಲುಪಬೇಕಾದ ಕಟ್ಟಡ ಅರ್ಧಕ್ಕೆ ನಿಂತು ಉಪಯೋಗಕ್ಕೆ ಬಾರದಂತಾಗಿದೆ. ಈಗ ಈ ಕಟ್ಟಡ ಜೂಜಾಟ, ಮದ್ಯ ಸೇವನೆ ಸೇರಿದಂತೆ ಹಲವಾರು ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ.
ನಮ್ಮ ಭಾಗದ ಜನಪ್ರತಿನಿ ಧಿಗಳು ಹಾಗೂ ಬೆಳಗಾವಿ. ಸ್ಥಳೀಯ ಗ್ರಾಪಂ ಈ ಬಗ್ಗೆ ಗಮನ ಹರಿಸಲ್ಲ. ಕಾಮಗಾರಿಯ ತಾಂತ್ರಿಕ ಉಸ್ತವಾರಿ ಜಿ.ಪಂ. ಅಭಿಯಂತರು ನಿರ್ಲಕ್ಷ್ಯ ಧೋರಣೆಯೇ ಕಟ್ಟಡ ಅಪೂರ್ಣಗೊಳ್ಳಲು ಪ್ರಮುಖ ಕಾರಣ. ಪ್ರಕಾಶಗೌಡ ಪಾಟೀಲ ಗ್ರಾಮಸ್ಥರು ಹಾಗೂ ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್ ಬೆಳಗಾವಿ.
-ಶಿವಾನಂದ ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.