ಗ್ರಾಮೀಣ ಜನರಿಗೆ ಅಶುದ್ಧ ನೀರೇ ಗತಿ!
Team Udayavani, Mar 13, 2020, 4:46 PM IST
ಸಾಂದರ್ಭಿಕ ಚಿತ್ರ
ರಾಯಬಾಗ: ಸಾಮಾನ್ಯ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮದಲ್ಲಿ ಜನಸಂಖ್ಯೆ ಆಧಾರದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿವೆ. ಆದರೆ ಕೆಆರ್‌ಐಡಿಎಲ್‌ದಿಂದ ನಿರ್ಮಿಸಿದ ನೀರಿನ ಘಟಕಗಳು ಸ್ಥಗಿತಗೊಂಡು ಇಲ್ಲಿನ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ.
ತಾಲೂಕಿನಲ್ಲಿ 101 ಶುದ್ಧ ನೀರಿನ ಘಟಕಗಳು ಇದ್ದು, ಅವುಗಳಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆಗೆ 44 ಘಟಕಗಳು, ಇನ್ನುಳಿದ 57 ಘಟಕಗಳು ಕೆಆರ್‌ಐಡಿಲ್ ನಿರ್ವಹಣೆಗೆ ಒಳಪಟ್ಟಿವೆ. ಈಗ ಎಲ್ಲ ಘಟಕಗಳ ಮೇಲುಸ್ತುವಾರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತ ನೈರ್ಮಲ್ಯ ಇಲಾಖೆ ಸುಪರ್ದಿಗೆ ವಹಿಸಲಾಗಿದೆ.
ಕೆಆರ್‌ಐಡಿಐಲ್ ಇಲಾಖೆಯಿಂದ ನಿರ್ಮಿಸಿದ ಬಹುತೇಕ ಶುದ್ಧ ನೀರಿನ ಘಟಕಗಳು ಅನೇಕ ತಾಂತ್ರಿಕ ತೊಂದರೆಗಳಿಂದ ಸ್ಥಗೀತಗೊಂಡಿವೆ. ಘಟಕಗಳನ್ನು ನಿರ್ಮಿಸಲು ಗುತ್ತಿಗೆ ಪಡೆದ ಏಜೆನ್ಸಿಯವರು ಕಳಪೆ ಕಾಮಗಾರಿಗಳಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಮರೀಚಿಕೆಯಾಗಿದೆ ಎಂದು ಗ್ರಾಮೀಣ ಭಾಗದ ಜನರ ಆರೋಪಿಸಿದ್ದಾರೆ.
ಕೆಆರ್‌ಐಡಿಎಲ್ ಇಲಾಖೆ ಕಾರ್ಯ ವೈಖರಿಯಿಂದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದರಿಂದ ಈಗ ಎಲ್ಲ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಒಪ್ಪಿಸಲಾಗಿದೆ. ಈ ಇಲಾಖೆಯವರ ಮಾಹಿತಿಯಂತೆ ಈಗ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊಸ ಏಜೆನ್ಸಿಯವರಿಗೆ ನೀಡಿ ನೀರು ಒದಗಿಸುವ ಕಾರ್ಯ ಪ್ರಾರಂಭಿಸುವುದಾಗಿ ಆರ್ ಡಿಡಬ್ಲ್ಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಕುಡಿಯುವ ನೀರು ಇಲಾಖೆಯವರು ನೀಡಿದ ಪ್ರಕಾರ ತಾಲೂಕಿನಲ್ಲಿರುವ 101 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 92 ಘಟಕಗಳು ಸುಸ್ಥಿತಿಯಲಿದ್ದು, ಇನ್ನುಳಿದ 9 ಘಟಕಗಳು ಮಾತ್ರ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳಿಂದ ಸ್ಥಗಿತಗೊಂಡಿವೆ. ಅವುಗಳನ್ನು ಶೀಘ್ರ ದುರಸ್ತಿಗೊಳಿಸಿ ಜನರಿಗೆ ಶುದ್ಧ ನೀರು ಒದಗಿಸುವುದಾಗಿ ಇಲಾಖೆ ತಾಲೂಕಾಧಿಕಾರಿ ಪದ್ಮಜಾ ಪಾಟೀಲ ಹೇಳುತ್ತಾರೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ವಸ್ತುಸ್ಥಿತಿ ಮಾತ್ರ ಬೇರೆ ಹೇಳುತ್ತದೆ.
ಜನರಿಗೆ ಹೋಳೆ ನೀರೆ ಗತಿ: ತಾಲೂಕಿನಲ್ಲಿರುವ 101 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸಿದೆ ಬಂದ್ ಆಗಿದ್ದರಿಂದ ಜನರಿಗೆ ಶುದ್ಧ ನೀರು ಮರೀಚಿಕೆಯಾಗಿ, ಬಾವಿ, ಬೊರವೆಲ್, ಹೊಳೆ ನೀರೇ ಗತಿಯಾಗಿದೆ. ಸರ್ಕಾರ ಗ್ರಾಮೀಣ ಜನರಿಗೆ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ ಶುದ್ಧ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರನ್ನು ಒಗಿಸಲು ಮುಂದಾಗಲಿ ಎಂಬುದು ಗ್ರಾಮೀಣ ಜನರ ಒತ್ತಾಯವಾಗಿದೆ.
ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಲು ಟೆಂಡರ್ ಮೂಲಕ ಈಗ ಹೊಸ ಏಜೆನ್ಸಿ
ನೇಮಕ ಮಾಡಲಾಗಿದೆ. ಘಟಕಗಳನ್ನು ಏಜೆನ್ಸಿಯವರ ಸುಪರ್ದಿಗೆ ನೀಡುವಂತೆ ಗ್ರಾಪಂ ಹೇಳಿದ್ದು, ಏಜೆನ್ಸಿಯವರು ಸರಿಯಾಗಿ ಅವುಗಳ ನಿರ್ವಹಣೆ ಮಾಡಲಿದ್ದಾರೆ. – ಪದ್ಮಜಾ ಪಾಟೀಲ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ರಾಯಬಾಗ
-ಸಂಭಾಜಿ ಚವ್ಹಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.