ನದಿ ನೀರು ನಿರ್ವಹಣೆಗೆ ಸಮಿತಿ ರಚನೆ ಸಲಹೆ
•ಕರ್ನಾಟಕ-ಮಹಾರಾಷ್ಟ್ರಗಳ ಜನಪ್ರತಿನಿಧಿಗಳು-ರೈತರು-ಸದಸ್ಯರು
Team Udayavani, Jun 26, 2019, 2:30 PM IST
ಳಗಾವಿ: ಮಹಾರಾಷ್ಟ್ರದ ರಾಜಾಪುರದಿಂದ ಬಿಡುಗಡೆಯಾದ ನೀರು ಅಥಣಿ ತಾಲೂಕಿನ ದರೂರು ಸೇತುವೆ ತಲುಪಿದ್ದು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು.
ಬೆಳಗಾವಿ: ಕೃಷ್ಣಾ ತೀರದ ರೈತರು ಮತ್ತು ಜನರ ಕುಡಿಯುವ ನೀರಿನ ಸಂಕಷ್ಟಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ನದಿ ನೀರು ನಿರ್ವಹಣಾ ಮೇಲ್ವಿಚಾರಣೆ ಸಮಿತಿಯೊಂದನ್ನು ಮಠಾಧೀಶರ ನೇತೃತ್ವದಲ್ಲಿ ರೈತರೇ ರಚಿಸಿಕೊಳ್ಳುವುದು ಸೂಕ್ತ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಬಿಡುಗಡೆಯಾದ ನೀರು ಅಥಣಿ ತಾಲೂಕಿನ ದರೂರು ಸೇತುವೆ ತಲುಪಿದ ಹಿನ್ನೆಲೆಯಲ್ಲಿ ಮಂಗಳವಾರ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಲಾØಪುರ ಜಿಲ್ಲೆಯ. ಶಿರೋಳ ಶಾಸಕ ಉಲಾØಸರಾವ ಪಾಟೀಲರು ಸ್ವತಃ ರಾಜಾಪುರ ಬ್ಯಾರೇಜ್ ಗೇಟನ್ನು ತೆರೆದು ಒಮ್ಮೆ ನೀರು ಬಿಡಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೃಷ್ಣಾ ತೀರದ ಜನಪ್ರತಿನಿಧಿಗಳು ಮತ್ತು ರೈತರನ್ನು ಒಳಗೊಂಡ ಸಮಿತಿಯೊಂದನ್ನು ಮಠಾಧೀಶರ ಮಾರ್ಗದರ್ಶನದಲ್ಲಿ ರಚಿಸಿಕೊಂಡರೆ ಬೇಸಿಗೆಯಲ್ಲಿ ನದಿಗಳ ನೀರು ನಿರ್ವಹಣಾ ಮೇಲ್ವಿಚಾರಣೆ ಕೈಗೊಳ್ಳಬಹುದಾಗಿದೆ ಎಂದು ಅವರು ಸಲಹೆ ನೀಡಿದರು.
ಕಳೆದ ಮೂರು ತಿಂಗಳಿಂದ ಚಿಕ್ಕೋಡಿ,ಅಥಣಿ ಮತ್ತು ರಾಯಬಾಗ ತಾಲೂಕುಗಳ ರೈತರು ಮತ್ತು ಸಾರ್ವಜನಿಕರು ಕುಡಿಯುವ ನೀರಿನ ತೀವ್ರ ಅಭಾವದಿಂದ ಸಂಕಷ್ಟಕ್ಕೆ ಒಳಗಾದರೂ ರಾಜ್ಯ ಸರಕಾರವು ಕೊಯ್ನಾ ನೀರು ಬಿಡುಗಡೆಗೆ ಯಾವುದೇ ಗಂಭೀರ ಪ್ರಯತ್ನ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಕೊಲಾØಪುರ ಸುತ್ತಮುತ್ತಲೂ ಭಾರೀ ಮಳೆ ಸುರಿದಿದ್ದರಿಂದ ರಾಜಾಪುರ ಬ್ಯಾರೇಜಿನಿಂದ ಅನಿವಾರ್ಯವಾಗಿ ಬಿಟ್ಟ ನೀರು 60 ಕಿಮೀ ಸಾಗಿ ದರೂರು ಸೇತುವೆ ದಾಟಿ ಹೋಗುತ್ತಿದೆ. ಆದರೆ ನೀರಿನ ಸಮಸ್ಯೆ ಮುಂದಿನ ವರ್ಷವೂ ಪುನರಾವರ್ತನೆ ಯಾಗಬಾರದು. ಸರಕಾರ ಈಗಿನಿಂದಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದರು.
ನದಿ ಇಂಗಳಗಾವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕೃಷ್ಣಾ ನದಿ ನೀರು ದರೂರು ಸೇತುವೆ ತಲುಪಿದ್ದು ಜನರು ಇದನ್ನು ಹಾಲಿನಂತೆಯೇ ಮಿತವಾಗಿ ಬಳಸಬೇಕು ಎಂದರು.
ಭಾರತೀಯ ಕಿಸಾನ್ ಸಂಘದ ಭರಮು ನಾಯಕ, ಅಶೋಕ ದಾನಗೌಡರ, ಸಿದ್ಧಾರೂಢ ಮಠಪತಿ, ಲಕಡಿ,ದುಂಡಪ್ಪ ಅವಟಿ, ಬಸವರಾಜ ಖೇಮಲಾಪುರ, ಶಿವಪ್ಪ ಶಮರಂತ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷೆ ಯಶೋಧ ಬಿರಡಿ, ಸತ್ತೆವ್ವ ತಾಸಿಲ್ದಾರ, ವಿರೇಂದ್ರ ಗೋಬರಿ, ಶಿವಾನಂದ ಸದಲಗಾ, ದರ್ಶನ್ ಶೆಟ್ಟಿ, ಅಭಿನವ ಉಪಾಧ್ಯೆ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.