Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ, ಬೆಳಗಾವಿ ಅಧಿವೇಶನದಿಂದಲೇ ಮತ್ತೆ ಪುಟಿದೇಳುವ ಪ್ರಯತ್ನದಲ್ಲಿ ಕಾಂಗ್ರೆಸ್
Team Udayavani, Dec 26, 2024, 7:40 AM IST
ಬೆಳಗಾವಿ: ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿದೊಡ್ಡ ಮತ್ತು ಬಲಿಷ್ಠ ರಾಜ್ಯ ಕರ್ನಾಟಕ. ಇಲ್ಲಿಂದಲೇ ಪ್ಯಾನ್ ಇಂಡಿಯಾದಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಕಾಂಗ್ರೆಸ್ ಪಡೆ ಮುಂದಾಗಿದ್ದು, ಇದಕ್ಕೆ ಕುಂದಾನಗರಿಯಲ್ಲಿ ಸಜ್ಜುಗೊಂಡ ಗಾಂಧಿ ಭಾರತದ ವೇದಿಕೆ ಮೊದಲ ಮೆಟ್ಟಿಲಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಗುರುವಾರ ಕಾಂಗ್ರೆಸ್‌ನ ಅಧಿನಾಯಕರು ಕಹಳೆ ಮೊಳಗಿಸಲಿದ್ದಾರೆ.
ಮುಂದಿನ 2 ವರ್ಷಗಳು ಅಂದರೆ 2025 ಮತ್ತು 2026ರಲ್ಲಿ ಉತ್ತರ ಪ್ರದೇಶ, ದಿಲ್ಲಿ, ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳು ವಿಧಾನಸಭಾ ಚುನಾವಣೆ ಎದುರಿಸಲಿವೆ. ಇದೇ ಅವಧಿಯಲ್ಲಿ ಕರ್ನಾಟಕ ಸೇರಿ ಆಯಾ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕೂಡ ನಡೆಯಲಿವೆ. ಇದೆಲ್ಲದಕ್ಕೂ ಭದ್ರಬುನಾದಿ ಹಾಕಲು ಮುಂದಿನ ಎರಡು ದಿನಗಳ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಮೂಲಕ ಮುನ್ನುಡಿ ಬರೆಯಲಾಗುತ್ತಿದೆ.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ರೂಪಿಸಲಾದ ಗಾಂಧಿ ಭಾರತ ಎಂಬ ಐತಿಹಾಸಿಕ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ ದೇಶದ ಎಲ್ಲ ರಾಜ್ಯಗಳ ವಿಪಕ್ಷ ನಾಯಕರು ಬರುತ್ತಿದ್ದಾರೆ. ಇದರಲ್ಲೂ ಬಹುತೇಕರು ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಈ ಮಹತ್ವದ ವೇದಿಕೆಯಲ್ಲಿ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ನ ಗತವೈಭವವನ್ನು ಮರುಸ್ಥಾಪಿಸಲು, ಆ ಮೂಲಕ ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತಗೊಳಿಸಲು ತಂತ್ರ ಹೆಣೆಯಲು ಉದ್ದೇಶಿಸಲಾಗಿದೆ.
ಈ ನಿಟ್ಟಿನಲ್ಲಿ ಮುಖ್ಯವಾಗಿ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಜೈ ಬಾಪು-ಜೈ ಭೀಮ- ಜೈ ಸಂವಿಧಾನ ರ್ಯಾಲಿ ಕೂಡ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ದಲಿತ ಮತಗಳನ್ನು ಕ್ರೋಡೀಕರಿಸಲು ಉದ್ದೇಶಿಸಲಾಗಿದೆ.
ಈಚೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಪ್ಲಸ್ ಗುರಿ ಸಾಧನೆಯಲ್ಲಿ ವಿಫಲವಾಗಲು ಬಿಜೆಪಿ ನಾಯಕರು ಆಗಾಗ್ಗೆ ಸಂವಿಧಾನದ ಬಗ್ಗೆ ನೀಡಿದ ಹೇಳಿಕೆಗಳು ಕೂಡ ಕಾರಣವಾಗಿವೆ. ಇದಲ್ಲದೆ ಒಂದು ದೇಶ ಒಂದು ಚುನಾವಣೆಯನ್ನು ಪ್ರಬಲವಾಗಿ ವಿರೋಧಿಸುವುದು. ಕೊನೇ ಪಕ್ಷ ಒಂದು ಕಡೆಯಾದರೂ ಬ್ಯಾಲೆಟ್ ಪೇಪರ್ ಪ್ರಯೋಗ ಮಾಡುವಂತೆ ಚುನಾವಣ ಆಯೋಗದ ಮೇಲೆ ಒತ್ತಡ ಹಾಕುವುದು. ಒಂದು ರಾಷ್ಟ್ರ ಒಂದು ತೆರಿಗೆ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು. ಕರ್ನಾಟಕ ಒಳಗೊಂಡಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಬಾರದಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳು ಈ ಎರಡು ದಿನಗಳ ಕಾಂಗ್ರೆಸ್ ಅಧಿವೇಶನದ ಮುಖ್ಯಾಂಶ ಎಂದು ಪಕ್ಷದ ಮೂಲಗಳು ಉದಯವಾಣಿಗೆ ತಿಳಿಸಿವೆ.
ರಾಜ್ಯ ಕಾಂಗ್ರೆಸ್‌ಗೂ ಸಿಗಲಿದೆ ಬಲ
ಇಡೀ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸ್ವತಃ ಕರ್ನಾಟಕ ಆತಿಥ್ಯ ನೀಡುತ್ತಿದೆ. ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅದರ ಅಧ್ಯಕ್ಷರೂ ಆಗಿದ್ದಾರೆ. ಸಹಜವಾಗಿ ಅದು ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲು ಪುಷ್ಟಿ ನೀಡಲಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದರ ಫಲ ಕೂಡ ಸಿಗುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ಗೆ ಮೂರು ಕ್ಷೇತ್ರ ಉಪಚುನಾವಣೆಯಲ್ಲೂ ಅಪೂರ್ವ ಗೆಲುವು ದಕ್ಕಿದೆ. ಅದು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಈ ಮಧ್ಯೆ ನಿರೀಕ್ಷಿತ ಸ್ಥಾನಗಳು ಸಿಕ್ಕಿಲ್ಲ ಎಂಬ ಅಸಮಾಧಾನದ ನಡುವೆಯೇ ಲೋಕಸಭಾ ಚುನಾವಣೆಯಲ್ಲಿ ಒಂದರಿಂದ ಒಂಬತ್ತಕ್ಕೆ ಜಿಗಿದಿದೆ. ಈಗ ಶತಮಾನೋತ್ಸವ ನಂತರ ದೊರೆಯುವ ಬಲದೊಂದಿಗೆ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಲೆಕ್ಕಕ್ಕೇ ಇಲ್ಲ ಎನ್ನುವಂತೆ ಬಿಂಬಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.
ಇದೇ ಸಂದರ್ಭ ಬಳಸಿಕೊಂಡು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಜತೆಗೆ ಬೃಹತ್ ಸಾರ್ವಜನಿಕ ಸಭೆಯನ್ನೂ ಏರ್ಪಡಿಸಲಾಗಿದೆ. ಸಿಡಬ್ಲ್ಯುಸಿಯಲ್ಲಿ ದೇಶದ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಅವ ಲೋಕನ ಕೂಡ ನಡೆಯಲಿದೆ. ಜತೆಗೆ ರಾಜಕೀ ಯ ವಾಗಿ ಕೆಲ ವೊಂದು ಪ್ರಮುಖ ನಿರ್ಣಯಗ ಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ್ದು, ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಡಿ.26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣ ಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮವಿದ್ದು, 27ರಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಂದು ಏನಾಗಿತ್ತು?-
– 1924ರ ಡಿಸೆಂಬರ್ 26, 27ರಂದು ನಡೆದ ಅಧಿವೇಶನದಲ್ಲಿ ಗಾಂಧಿ ಅಧ್ಯಕ್ಷರಾಗಿದ್ದರು
– ರಾಜ್ಯದ ಗಂಗಾಧರ ದೇಶಪಾಂಡೆ ಹಾಗೂ ನೆಹರೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು
– ದೇಶದ ವಿವಿಧೆಡೆಯಿಂದ 1844 ಪ್ರತಿನಿಧಿಗಳು ಭಾಗವಹಿಸಿದ್ದರು. 16 ನಿರ್ಣಯ ಕೈಗೊಳ್ಳಲಾಗಿತ್ತು
– ಕಾಂಗ್ರೆಸ್ ನಾಯಕರು ಸ್ವಾತಂತ್ರÂ ಹೋರಾಟದ ನಾಯಕತ್ವ ವಹಿಸಿಕೊಂಡು ಮಾರ್ಗದರ್ಶನ ನೀಡಿದ್ದರು
ಇಂದು ಏನಾಗುತ್ತಿದೆ?
– ಇಂದು ರಾಜ್ಯ ಮಲ್ಲಿಕಾರ್ಜನ ಖರ್ಗೆ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿದ್ದಾರೆ
– ಬೆಳಗಾವಿಯ ಅದೇ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ
– ಇಂದಿನ ಪರಿಸ್ಥಿತಿಯಲ್ಲಿ ದೇಶ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಬಗ್ಗೆ ಚರ್ಚೆ ನಡೆಯಲಿದೆ
– ಪಕ್ಷದ ಹಾಲಿ, ಮಾಜಿ ಸಿಎಂಗಳು, ಶಾಸಕಾಂಗ ಪಕ್ಷದ ನಾಯಕರು ಸೇರಿ ಪ್ರತಿನಿಧಿಗಳ ಭಾಗಿ
ಅಧಿವೇಶನದ ಉದ್ದೇಶಗಳು….
– ಕೇಂದ್ರ ಸರಕಾರದ ಒಂದು ದೇಶ ಒಂದು ಚುನಾವಣೆ ಪ್ರಬಲವಾಗಿ ವಿರೋಧಿಸುವುದು
– ಕೊನೇ ಪಕ್ಷ ಒಂದು ಕಡೆಯಾದರೂ ಬ್ಯಾಲೆಟ್ ಪೇಪರ್ ಪ್ರಯೋಗಕ್ಕೆ ಆಯೋಗದ ಮೇಲೆ ಒತ್ತಡ
– ಒಂದು ರಾಷ್ಟ್ರ ಒಂದು ತೆರಿಗೆ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು.
– ರಾಜ್ಯ ಸೇರಿ ಕಾಂಗ್ರೆಸ್ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಬಾರದಂತೆ ನೋಡಿಕೊಳ್ಳುವುದು
– ವಿಜಯ ಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.