ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಿ
Team Udayavani, Feb 15, 2020, 12:46 PM IST
ರಾಮದುರ್ಗ: ಕಂದಾಯ ಇಲಾಖೆ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ತಾಲೂಕಾ ಗ್ರಾಮ ಸಹಾಯಕರ ಸಂಘದಿಂದ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಗ್ರಾಮ ಸಹಾಯಕ ಸಂಘದ ತಾಲೂಕಾಧ್ಯಕ್ಷ ಕರಿಯಪ್ಪ ತಳವಾರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ 40 ವರ್ಷಗಳಿಂದ ರಾಜ್ಯದಲ್ಲಿ 10.450 ಜನ ಸೇವೆ ಸಲ್ಲಿಸಲಾಗುತ್ತಿದೆ. 1978 ರಿಂದ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕ ಹುದ್ದೆಯನ್ನು ಸೃಷ್ಠಿ ಮಾಡಿ ಕೇವಲ 75 ರೂ. ವೇತನದಿಂದ ಸೇವೆ ಸಲ್ಲಿಸುತ್ತಾ ಸತತ 40 ವರ್ಷಗಳಿಂದ ಅತಿ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕೆ.ಎ.ಟಿ ಗೆ ನಮ್ಮ ಸಂಘದಿಂದ ಸದಸ್ಯರು ಡಿ ಗ್ರುಪ್ ಬಯಸಿ ಅರ್ಜಿ ಸಲ್ಲಿಸಿದ್ದು, 05.12.1996 ರಂದು ತೀರ್ಪು ನೀಡಿ ಸದರಿ ಗ್ರಾಮ ಸೇವೆಯನ್ನು ಗ್ರುಪ್ ಡಿ ಅಂತಾ ಪರಿಗಣಿಸಲು ಸಂಬಂಧ ಪಟ್ಟಂತೆ ನಿಯಮಾವಳಿಗಳನ್ನು ರೂಪಿಸುವಂತೆ ಸರಕಾರಕ್ಕೆ ಸೂಚಿಸಿ 8 ತಿಂಗಳು ಕಾಲಾವಕಾಶ ನೀಡಿತು. ಆದರೆ ಆಗಿನ ಸರ್ಕಾರವು ಇದನ್ನು ಮಾನ್ಯ ಮಾಡಲಿಲ್ಲ ಎಂದು ಆರೋಪಿಸಿದರು.
ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ 1998ರಂದು ಅಂತಿಮ ತೀರ್ಪು ನೀಡಿ ಭಾರತ ಸಂವಿಧಾನದ ಅನುಚ್ಚೇದ 302ರ ಪ್ರಕಾರ ಹುದ್ದೆ ಕಾಯಂ ಮಾಡಿ ಭಾರತ ಅನುಚ್ಚೇದ 309 ರ ಪ್ರಕಾರ ಸಮಾನ ವೇತನ ಎಂಬ ಹಕ್ಕಿನಡಿಯಲ್ಲಿ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರೆಂದು ಪರಿಗಣಿಸುವ ಹಕ್ಕು ಆಯಾ ರಾಜ್ಯಪಾಲರಿಗೆ ಇರುವದನ್ನು ತೋರಿಸಿಕೊಟ್ಟಿದೆ. ಅದರ ಪ್ರಕಾರ 10.07.2007 ರಂದು ನಮ್ಮ ಹುದ್ದೆ ಕಾಯಂ ಆಗಿದ್ದು, ಆದರೆ ಡಿ ಗ್ರುಪ್ ಆಗಲಿಲ್ಲ. ಕಾರಣ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ಒದಗಿಸಿಕೊಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪಾಧ್ಯಕ್ಷ ಅಪ್ಪಾಸಾಬ ಪವಾಡಿಗೌಡ್ರ, ಕಾರ್ಯದರ್ಶಿ ಮನೋಹರ ಕಣವಿ, ಅನಿಲ ಬಾರ್ಕಿ, ಮಹಾತೇಶ ಬಜೆನ್ನವರ, ರಮೇಶ ಉಜ್ಜಿನಕೊಪ್ಪ, ಫಕೀರಪ್ಪ ಕೊಳ್ಳಾರ, ಲಕ್ಷ್ಮಣ ಚಿಪ್ಪಲಕಟ್ಟಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.