ಚಿಕ್ಕೋಡಿಯಲ್ಲಿ ಹೈಟಿಕ್ ಕನಕ ಭವನ ನಿರ್ಮಾಣ: ಶಾಸಕ ಗಣೇಶ ಹುಕ್ಕೇರಿ
Team Udayavani, Nov 11, 2022, 2:42 PM IST
ಚಿಕ್ಕೋಡಿ: ಇಡೀ ವಿಶ್ವಕ್ಕೆ ಭಕ್ತಿ ಮಾರ್ಗ ತೋರಿಸಿ ಬದುಕಿ ಬಾಳಿದ ಸಂತ ಶ್ರೇಷ್ಠ ಕನಕದಾಸರ ಆದರ್ಶವನ್ನು ಇಂದಿನ ಯುವಕರು ಅಳವಡಿಸಿಕೊಂಡು ಸುಭದ್ರ ಸಮಾಜ ನಿರ್ಮಿಸಲು ಕೈ ಜೋಡಿಸಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವು ದಿನಗಳಿಂದ ಕನಕ ಭವನ ಬೇಡಿಕೆ ಇದ್ದು, ಮುಂಬರುವ ದಿನಗಳಲ್ಲಿ ಹೈಟಿಕ್ ಭವನ ನಿರ್ಮಾಣ ಮಾಡಿ ಹಾಲುಮತ ಸಮಾಜ ಬಾಂಧವರಿಗೆ ಅನೂಕೂಲ ಕಲ್ಪಿಸಲಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿ, ಕೀರ್ತನೆಗಳ ಮೂಲಕ ಜನರಲ್ಲಿ ಭಕ್ತಿ-ಭಾವ ಮೂಡಿಸಿದ ಕನಕದಾಸರ ಸಾಹಿತ್ಯವನ್ನು ಎಲ್ಲರೂ ಓದಬೇಕು. ಅದರ ಮೂಲಕ ಸುಸಂಸ್ಕೃತ ದೇಶ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಕೊಡಬೇಕು ಎಂದು ಕುರುಬರ ಸಮಾಜದ ಮುಖಂಡ ಸಿದ್ದಪ್ಪ ರ‍್ಯಾಯಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲುಮತ ದೇವಸ್ಥಾನಗಳ ಅಭಿವೃದ್ಧಿಗೆ 1.35 ಕೋಟಿ ರೂ. ಅನುದಾನ ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುದಾನ ಕೊಡಲಾಗುತ್ತದೆ. ಪುರಸಭೆ ಆಡಳಿತ ಮಂಡಳಿ ಸೂಕ್ತ ಜಾಗವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಡಂಗೇರ, ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ರಾಮಣ್ಣಾ ಬನ್ನಟ್ಟಿ, ಶಿವು ರ‍್ಯಾಯಿ, ವಿನಾಯಕ ಬನ್ನಟ್ಟಿ, ಎಂ.ಕೆ.ಪೂಜೇರಿ, ರಾಮಣ್ಣಾ ಕಟ್ಟಿಕರ, ಸುರೇಶ ಹೆಗಡೆ, ಬೀರಾ ಬನ್ನೆ, ಲಕ್ಷ್ಮಣ ಪೂಜೇರಿ, ಸುರೇಶ ಬಾಡಕರ, ಮಹಾದೇವ ಕವಲಾಪೂರೆ, ಹಾಲಪ್ಪ ಡಂಗೇರ, ಕಿರಣ ಗುಡಸೆ, ಸಿದ್ದಪ್ಪ ಡಂಗೇರ ಮುಂತಾದವರು ಇದ್ದರು.
ಭವ್ಯ ಮೆರವಣಿಗೆ: ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಇರುವ ಕನಕದಾಸರ ಪುತ್ಥಳಿಗೆ ಎಲ್ಲ ಗಣ್ಯರು ಪೂಜೆ ಸಲ್ಲಿಸಿ ಪುಸ್ಪ ನಮನ ಸಲ್ಲಿಸಿದರು. ಅಲ್ಲಿಂದ ಡೊಳ್ಳು-ವಾದ್ಯದೊಂದಿಗೆ ಕನಕದಾಸರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.