ಜಿಲ್ಲೆಯಾದ್ಯಂತ ಮುಂದುವರಿದ ವರ್ಷಧಾರೆ
ಮಹಾರಾಷ್ಟ್ರದ ಕರಾವಳಿಯಲ್ಲಿ ಮಳೆ ನಿಲ್ಲದಿದ್ದರೆ ಪ್ರವಾಹ ಪರಿಸ್ಥಿತಿ
Team Udayavani, Jun 4, 2020, 6:54 AM IST
ಚಿಕ್ಕೋಡಿ: ಕಲ್ಲೋಳ ಹತ್ತಿರ ಕೃಷ್ಣಾ ನದಿ
ಬೆಳಗಾವಿ: ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಬೀಸುತ್ತಿರುವ ನಿಸರ್ಗ ಚಂಡಮಾರುತದ ಪರಿಣಾಮ ವಾಯುಭಾರ ಕುಸಿತವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಡೆಬಿಡದೇ ಮಳೆ ಆಗುತ್ತಿದೆ. ಬುಧವಾರವೂ ಧಾರಾಕಾರ ಮಳೆ ಹಾಗೂ ಭಾರೀ ಗಾಳಿ ಮುಂದುವರಿಯಿತು. ಬೆಳಗಾವಿಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ ದ ಸಿಂಧದುರ್ಗಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಹೆ„ ಅಲರ್ಟ್ ಘೋಷಿಸಲಾಗಿದ್ದು, ಈ ಭಾಗದಲ್ಲಿ ನಿಸರ್ಗ ಚಂಡಮಾರುತ ಬಾರದಿದ್ದರೂ ಭಾರೀ ಗಾಳಿ-ಮಳೆ ಬೀಸುತ್ತಿದೆ. ಇದರ ಪರಿಣಾಮ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಆಗುತ್ತಿದೆ. ರವಿವಾರ ಮಧ್ಯಾಹ್ನದಿಂದಲೂ ಪ್ರಾರಂಭವಾಗಿರುವ ಗಾಳಿ-ಮಳೆ ಇನ್ನೂ ಮುಂದುವರಿದಿದೆ.
ಖಾನಾಪುರ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಜನರು ಪರದಾಡುವಂತಾಯಿತು. ಇತ್ತ ಜೋರಾಗಿ ಮಳೆ ಆಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದು, ಮುಂಗಾರು ಪೂರ್ವವೇ ಜಿಟಿಜಿಟಿ ವರ್ಷಧಾರೆಯಿಂದ ಸಂತಸಗೊಂಡಿದ್ದಾರೆ. ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಇಲ್ಲಿ ಎಲ್ಲ ಕಡೆಗಳಲ್ಲೂ ಹೆ„ ಅಲರ್ಟ್ ಘೋಷಿಸಿ ಸಂಪೂರ್ಣ ಬಂದ್ ಮಾಡಲಾಗಿದೆ. ಎಲ್ಲ ಬಸ್, ಖಾಸಗಿ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ಸರ್ಕಾರಿ ರಜೆ ನೀಡಲಾಗಿದ್ದು, ಜನರು ಹೊರಗೆ ಬಾರದಂತೆ ಸೂಚಿಸಲಾಗಿದೆ.
ಕೃಷ್ಣೆಮಟ್ಟ ಮೂರುಅಡಿ ಹೆಚ್ಚಳ
ಚಿಕ್ಕೋಡಿ: ನಿಸರ್ಗ ಚಂಡಮಾರುತ ಪರಿಣಾಮ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮಟ್ಟದಲ್ಲಿ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮಟ್ಟ ಕೂಡ ಏರುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ ಹತ್ತಿರ ಬುಧವಾರ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಹೀಗಾಗಿ ಬ್ಯಾರೇಜದ ಎಲ್ಲ ಗೇಟ್‌ಗಳನ್ನು ಮಹಾರಾಷ್ಟ್ರದ ನೀರಾವರಿ ಇಲಾಖೆ ತೆರೆದಿದೆ. ಇದರಿಂದ ಅಪಾರ ಪ್ರಮಾಣದ ನೀರು ರಾಜ್ಯಕ್ಕೆ ಹರಿದು ಬರುವ ಸಾಧ್ಯತೆ ಇದೆ. ಇದೇ ರೀತಿ ಮಳೆ ಮುಂದುವರೆದರೆ ಮಹಾರಾಷ್ಟ್ರದ ಕೋಯ್ನಾ, ಕಾಳಮ್ಮವಾಡಿ, ಧೂಮ್ ಮುಂತಾದ ಜಲಾಶಯಗಳಿಂದ ನೀರು ಹೊರಬಿಡುವ
ಸಾಧ್ಯತೆ ದಟ್ಟವಾಗಿದೆ. ವಿಪತ್ತು ನಿರ್ವಹಣಾ ತಂಡ ಯಡೂರು ಗ್ರಾಮ ತಲುಪಿದೆ. ಕಳೆದ ವರ್ಷ ಭಾರಿ ಮಳೆಯಿಂದ ಭೀಕರ ಪ್ರವಾಹ ಎದುರಾಗಿ ನದಿ ತೀರದ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.