ಕೊರೊನಾ ಪರೀಕ್ಷಾ ಘಟಕ ಮಂಜೂರು
ಮೂರನೇ ಅಲೆ ತಡೆಗೆ ಯತ್ನಿಸಿ, ಔಷಧ ಸಸ್ಯ ಬೆಳೆಸಿ ಪರಿಸರ ರಕ್ಷಣೆ ಎಲ್ಲರ ಹೊಣೆ
Team Udayavani, Jun 6, 2021, 6:38 PM IST
ಚಿಕ್ಕೋಡಿ: ನನ್ನ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಚಿಕ್ಕೋಡಿಯಲ್ಲಿ ಕೊರೊನಾ ಪರೀಕ್ಷೆ ಘಟಕಕ್ಕೆ ಮಂಜೂರಾತಿ ನೀಡಿದ್ದು, ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಘಟಕ ಆರಂಭಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಟ್ರೀ ಪಾರ್ಕ್‌ದಲ್ಲಿ ವಿವಿಧ ಔಷಧ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕೊರೊನಾ ಮೂರನೇ ಅಲೆ ಬರದಂತೆ ತಡೆಗಟ್ಟಲು ಎಲ್ಲರೂ ಪ್ರಯತ್ನ ಮಾಡಬೇಕಿದೆ ಎಂದರು. ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಬೇಡಿಕೆ ಇಡಲಾಗಿದೆ.
ವೈದ್ಯಕೀಯ ಕಾಲೇಜು ಮಂಜೂರಾತಿಯಿಂದ 750 ರಿಂದ1000 ಬೆಡ್ ಆಸ್ಪತ್ರೆ ಆರಂಭವಾಗುತ್ತದೆ. ಬೆಳಗಾವಿ ಹೊರತುಪಡಿಸಿ ಚಿಕ್ಕೋಡಿಯಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿ ನೀಡಬೇಕೆಂದು ಆರೋಗ್ಯ ಸಚಿವ ಸುಧಾಕರ ಅವರಿಗೆ ಮನವಿ ಮಾಡಿದಾಗ ಸಚಿವರು ಸ್ಪಂದಿ ಸಿದ್ದಾರೆ ಎಂದರು.
ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಸಸಿ ನೆಡಬೇಕು. ಸಮಾಜದ ರಕ್ಷಣೆ ಆಗಬೇಕಾದರೆ ಪರಿಸರ ಉಳಿವು ಅವಶ್ಯಕ. ಪರಿಸರ ಮಾನವನಿಗೆ ಎಲ್ಲವು ಕೊಟ್ಟಿದೆ. ಪರಿಸರ ಸಂರಕ್ಷಣಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಟ್ರಿ ಪಾರ್ಕ್ ಚಿಕ್ಕೋಡಿ ನಗರದಲ್ಲಿ ವಿಶೇಷ ಪಾರ್ಕ್ ಆಗಬೇಕು. ಔಷಧ ಸಸ್ಯ ಹೆಚ್ಚಾಗಿ ಬೆಳೆಸಬೇಕು. ನಗರದ ಆರೋಗ್ಯ ಹಿತದೃಷ್ಟಿಯಿಂದ ಪಾರ್ಕ್ ಅನುಕೂಲವಾಗಲಿದೆ ಎಂದರು.
ಸಂಪಾದನ ಸ್ವಾಮೀಜಿ, ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ. ಸಹಕಾರ ಮಹಾ ಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಉಪಾಧ್ಯಕ್ಷ ಸಂಜಯ ಕವಟಗಿಮಠ. ಸದಸ್ಯರಾದ ಸಂತೋಷ ಜೋಗಳೆ, ವಿಶ್ವನಾಥ ಕಾಮಗೌಡ, ನಾಗರಾಜ ಮೇಧಾರ. ಸಂತೋಷ ಟವಳೆ, ಬಾಬು ಮಿರ್ಜೆ, ಸಿದ್ದಪ್ಪ ಡಂಗೇರ, ಮುಖ್ಯಾ ಧಿಕಾರಿ ಡಾ.ಸುಂದರ ರೋಗಿ ಸೇರಿದಂತೆ ಅರಣ್ಯ ಇಲಾಖೆ ಅಧಿ ಕಾರಿಗಳು ಪುರಸಭೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.