ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲ
Team Udayavani, Apr 25, 2024, 11:21 AM IST
■ ಉದಯವಾಣಿ ಸಮಾಚಾರ
ಅಡಹಳ್ಳಿ: ಶುದ್ಧ ಹಸ್ತ, ದೇಶಾಭಿಮಾನ ಹೊಂದಿದ ನರೇಂದ್ರ ಮೋದಿ ಅವರಿಂದ ಮಾತ್ರ ದೇಶ ರಕ್ಷಣೆ ಸಾಧ್ಯ, ಹೀಗಾಗಿ ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ ಜೊಲ್ಲೆಯವರಿಗೆ ಮತ ಹಾಕಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಸಮೀಪದ ಬಡಚಿ, ಪಡತರವಾಡಿ, ಕನಾಳ, ಖೊತನಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ
ಅಣ್ಣಸಾಹೇಬ ಜೊಲ್ಲೆಯವರ ಪರ ಹಮ್ಮಿಕೊಂಡ ಮತಯಾಚನೆ ಸಭೆಯಲ್ಲಿ ಮಾತನಾಡಿ, ದೇಶದ ಎಲ್ಲ ವರ್ಗದ ಜನರು ನರೇಂದ್ರ ಮೋದಿ ಅವರನ್ನು ಒಪ್ಪಿ 10 ವರ್ಷಗಳಿಂದ ಅಪ್ಪಿಕೊಂಡಿದ್ದಾರೆ. ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಜೊಲ್ಲೆಯವರ ಸಾಮಾಜಿಕ ಕಳಕಳಿ ಅಮೋಘವಾಗಿದೆ. ಅವರ ಹಣಕಾಸು ಸಂಸ್ಥೆ ಹಾಗೂ ಕಾರ್ಖಾನೆಗಳಲ್ಲಿ ಅನೇಕ ಯುವಕರಿಗೆ ಕೆಲಸ ನೀಡಿದ ಫಲವಾಗಿ ಸಾವಿರಾರು ಕುಟುಂಬಗಳು ಅವರ ಸ್ಮರಣೆ ಮಾಡಿ ಜೀವನ ಸಾಗಿಸುತ್ತಿವೆ. 5 ವರ್ಷಗಳ ಅವಧಿಯಲ್ಲಿ ಜೊಲ್ಲೆಯವರು 8800 ಕೋಟಿಗಿಂತಲೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಶಾಹಜನ ಡೊಂಗರಗಾಂವ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಹಲ್ಲೆ, ಕೊಲೆ ಸೇರಿದಂತೆ ಹತ್ತು
ಹಲವಾರು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸಮಾಜ ಘಾತಕ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿರುವ ಈ ರಾಜ್ಯದಲ್ಲಿ ಶಾಂತಿ,
ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತೃತೀಯ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು. ಮುಂಖಡ ಗಿರೀಶ ಬುಟಾಳಿ, ನಿಂಗಪ್ಪ ಖೋಕಲೆ, ಜಿಲ್ಲಾ ಸಂಚಾಲಕ ಸಿದ್ದಪ್ಪ ಮುದಕಣ್ಣವರ, ಅಪ್ಪಾಸಾಹೇಬ ಅವತಾಡೆ ಮಾತನಾಡಿದರು.
ಮುಖಂಡರಾದ ರವಿ ಸಂಕ, ಮುತ್ತಪ್ಪ ಕಾಡದೇವರಮಠ, ಮಹಾಂತೇಶ ಅಲಿಬಾದಿ, ವಿಠಲ ಗಲಬಿ, ಮಾಯಪ್ಪ ಪೂಜಾರಿ, , ಸದಾಶಿವ ಕೊಂಪಿ, ಡಾ, ಇಂಚಗೇರಿ, ವಿಠಲ ಪೂಜಾರಿ, ನಾರಾಯಣ ಪವಾರ, ಬಸವರಾಜ ಹಲ್ಯಾಳ, ಖಂಡುಬಾ ಪವಾರ, ಡಾ, ರವಿ ಜಂಬಗಿ, ನಾರಾಯಣ ಜಗದಾಳೆ, ವಿನಾಯಕ ವಾಘಮೋರೆ, ಮಾರುತಿ ಪವಾರ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.