ನೌಕರಿ ಕೊಡಿಸುವುದಾಗಿ ಹಣ ಪಡೆದ ಅಧಿಕಾರಿ ಹುಡುಕುತ್ತ ಬಂದ ದಂಪತಿ!
Team Udayavani, Jun 19, 2019, 2:47 PM IST
ರಾಯಬಾಗ: ತಮ್ಮ ಸೊಸೆಗೆ ನೌಕರಿ ಕೊಡಿಸಲು ಹಣ ನೀಡಿ ಅಧಿಕಾರಿಯಿಂದ ಮೋಸಕ್ಕೆ ಒಳಗಾದ ಔರಾದ ತಾಲೂಕಿನ ರಾಠೊಡ ದಂಪತಿ.
ರಾಯಬಾಗ: ನೌಕರಿ ಕೊಡಿಸುವುದಾಗಿ ಆಮೀಷವೊಡ್ಡಿ ಲಕ್ಷಾಂತರ ರೂ. ತೆಗೆದುಕೊಂಡು ವರ್ಗಾವಣೆಗೊಂಡ ಅಧಿಕಾರಿಯನ್ನು ಹುಡುಕಿಕೊಂಡು ದಂಪತಿಯೊಬ್ಬರು ಬೀದರದಿಂದ ಪಟ್ಟಣಕ್ಕೆಮಂಗಳವಾರ ಆಗಮಿಸಿದ್ದಾರೆ.
ಪ್ರಸ್ತುತ ರಾಯಬಾಗ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ಎಚ್. ಪಾಯಕ ಎಂಬ ಅಧಿಕಾರಿ ಈ ಹಿಂದೆ 2011ರಿಂದ 2017 ರವರೆಗೆ ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆಯಲ್ಲಿ 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ಸಂದರ್ಭದಲ್ಲಿ ಔರಾದ ತಾಲೂಕಿನ ಜ್ಯೋತಿ ಗಣೇಶ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಹೇಳಿ 1.50 ಲಕ್ಷ ರೂ. ಪಡೆದಿದ್ದಾರೆ. ಈಗ ನೌಕರಿಯನ್ನು ಕೊಡಿಸದೆ, ಹಣವನ್ನು ಮರಳಿ ನೀಡದೆ ಇಲ್ಲಿಗೆ ವರ್ಗವಾಗಿರುವ ಅಧಿಕಾರಿಯನ್ನು ಹುಡುಕಿಕೊಂಡು ಬಂದಿದ್ದಾಗಿ ರಾಮರಾವ್ ರಾಠೊಡ ದಂಪತಿ ತಿಳಿಸಿದ್ದಾರೆ.
ಏಕಾಏಕಿ ಔರಾದದಿಂದ ವರ್ಗಗೊಂಡ ಅಧಿಕಾರಿಯನ್ನು ಹುಡುಕುತ್ತ ಕಳೆದ 4-5 ದಿನಗಳ ಹಿಂದೆ ಪಟ್ಟಣಕ್ಕೆ ಬಂದಿರುವ ರಾಮರಾವ್ ರಾಠೊಡ ದಂಪತಿ, ಸ್ಥಳೀಯರ ಸಹಾಯದಿಂದ ಅಧಿಕಾರಿಯನ್ನು ಪತ್ತೆ ಹಚ್ಚಿ, ನೀಡಿದ ಹಣ ಮರಳಿ ಕೊಡುವಂತೆ ಬೇಡಿಕೊಂಡಿದ್ದಾರೆ. ಅದಕ್ಕೆ ಎರಡ್ಮೂರು ಸಲ ನೋಡೋಣ ಎಂದ ಅಧಿಕಾರಿ, ಮಂಗಳವಾರ ತಾವು ಯಾರು ಎಂಬುದೇ ನನಗೆ ಗೊತ್ತಿಲ್ಲವೆಂದು ತಿರುಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮರಾವ್ ರಾಠೊಡ, ಊರಿನ ಪಂಚರು ಕೂಡಿ ಅಧಿಕಾರಿಯಿಂದ ಹಣ ವಸೂಲಿ ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ಮತ್ತು ಹಣ ನೀಡಿದಕ್ಕೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲದ್ದರಿಂದ ಪೊಲೀಸರಿಗೆ ದೂರು ನೀಡಿಲ್ಲವೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.