50ಕ್ಕೂ ಹೆಚ್ಚು ಗ್ರಾಮದಲ್ಲಿ ಕೊಳೆಯುತ್ತಿದೆ ಕ್ಯಾಬೀಜ್
Team Udayavani, Apr 28, 2020, 7:24 PM IST
ಬೆಳಗಾವಿ: ಲಾರಿಗಳಲ್ಲಿ ಟನ್‌ಗಟ್ಟಲೇ ಹೋಗುತ್ತಿದ್ದ ಕ್ಯಾಬೀಜ್ ಈಗ ಸೈಕಲ್ ಮೇಲೆ ಕೆಜಿ ಲೆಕ್ಕದಲ್ಲಿ ಸಣ್ಣ-ಸಣ್ಣ ಚೀಲಗಳಲ್ಲಿ ಸಾಗಾಟ ಆಗುತ್ತಿದೆ. ಕೈತುಂಬ ಸಿಗುತ್ತಿದ್ದ ಹಣ ಬೆರಣಿಕೆಯಲ್ಲಿ ಬರುತ್ತಿದೆ. ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿರುವ ಬೆಳೆ ಎಷ್ಟೋ ಜನರ ಮನೆಗೆ ಉಚಿತವಾಗಿ ಸೇರುತ್ತಿದೆ. ಇದು ಬೆಳಗಾವಿ ಜಿಲ್ಲೆಯ ತರಕಾರಿ ಬೆಳೆಗಾರರ ಶೋಚನೀಯ ಕಥೆ.
ಕೋವಿಡ್ 19 ವೈರಸ್ ಎಂಬ ಮಹಾಮಾರಿ ತರಕಾರಿ ಬೆಳೆಗಾರರ ಸಂಕಷ್ಟದ ಜೀವನಕ್ಕೆ ಮತ್ತಷ್ಟು ಕಷ್ಟದ ಲೇಪನ ಮಾಡಿದೆ. ಖರೀದಿದಾರರೂ ಇಲ್ಲ. ನಿರೀಕ್ಷೆ ಮಾಡಿದಷ್ಟು ಬೆಲೆಯೂ ಇಲ್ಲ. ಇದರಿಂದ ಕ್ಯಾಬೀಜ್ ದಂತಹ ಎಷ್ಟೋ ತರಕಾರಿಗಳು ಹೊಲದಲ್ಲೇ ಹಾಳಾಗುತ್ತಿವೆ. ಉಚಿತವಾಗಿ ತೆಗೆದುಕೊಂಡು ಹೋಗಿ ಎಂದರೂ ಜನರು ಕಾಣಿಸುತ್ತಿಲ್ಲ. ಲಾಕ್‌ಡೌನ್ ಹತ್ತಾರು ಸಂಕಷ್ಟಗಳನ್ನು ತಂದೊಡ್ಡಿದೆ. ತರಕಾರಿಗಳಿಗೆ ಬೆಲೆಯೇ ಬಾರದೇ ಸಾವಿರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾರುಕಟ್ಟೆಗೆ ತರಕಾರಿ ಒಯ್ಯಲಾಗದೇ ಒದ್ದಾಡುತ್ತಿದ್ದಾರೆ. ಅನಿವಾರ್ಯವಾಗಿ ಹೊಲದಲ್ಲಿನ ಬೆಳೆ ನಾಶ ಮಾಡಲು ರೈತರು ಮುಂದಾಗಿದ್ದಾರೆ. ಈಗಾಗಲೇ ಎಷ್ಟೋ ಕಡೆ ಸ್ವತಃ ರೈತರೇ ಕ್ಯಾಬೀಜ್ ಮೊದಲಾದ ಬೆಳೆ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದಾರೆ.
ಇನ್ನು ಕೆಲ ರೈತರು ಕುರಿಗಳಿಗೆ ಮೇಯಲು ಬಿಟ್ಟಿದ್ದಾರೆ. ಬೆಳಗಾವಿ ತಾಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕ್ಯಾಬೀಜ್ ಬೆಳೆ ಹೊಲಗಳ ತುಂಬ ತುಂಬಿ ನಿಂತಿದೆ. ಪೇಟೆಗೆ ತಂದರೆ ಒಂದು ಚೀಲಕ್ಕೆ ಕೇವಲ 70 ರಿಂದ 80 ರೂ. ಮಾತ್ರ. ಹತ್ತು ಕಿ.ಮೀ. ದೂರದ ಹಳ್ಳಿಗಳಿಂದ ಬೆಳಗಾವಿಗೆ ತರಬೇಕಾದರೆ ಕನಿಷ್ಠ 60 ರೂ. ಸಾಗಾಟದ ವೆಚ್ಚ. ದಲ್ಲಾಳಿಗಳಿಗೆ ಒಂದಿಷ್ಟು ಹಣ ಕೊಡಬೇಕು. ಇದರಿಂದ ಕೊನೆಗೆ ರೈತರಿಗೆ ಉಳಿಯುವುದು ನಾಲ್ಕೈದು ರೂಪಾಯಿ ಮಾತ್ರ. ಹೀಗಾಗಿ ಅನೇಕ ರೈತರು ಮಾರುಕಟ್ಟೆಗೆ ಬರುವದನ್ನೇ ನಿಲ್ಲಿಸಿದ್ದಾರೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಈಗ ಪ್ರತಿ ಕೆಜಿಗೆ 70 ರಿಂದ 80 ಪೈಸೆ ಸಿಗುತ್ತಿದೆ. ಒಂದು ಲಾರಿ ಲೋಡ್ ಮಾಡಿದರೆ (10 ಟನ್) ಸಿಗುವದು ಕೇವಲ 8,000 ರೂ. ಮಾತ್ರ. ಆದರೆ ಅದೇ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಇದ್ದರೆ ಒಂದು ಟನ್‌ಗೆ ಕನಿಷ್ಠ ಒಂದು ಲಕ್ಷ ರೂ. ವರೆಗೆ ಸಿಗುತ್ತದೆ. ಕೋವಿಡ್ 19 ವೈರಸ್ ಬಂದಿರುವುದರಿಂದ ಒಂದು ಟನ್‌ಗೆ ಈಗ 10 ಸಾವಿರವೂ ಸಿಗುತ್ತಿಲ್ಲ ಎನ್ನುತ್ತಾರೆ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ.
ಸಣ್ಣ ರೈತರಿಗೆ ಇದು ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಹೀಗಾಗಿ ಸರಕಾರ ಯಾವುದೇ ದಾಖಲೆ ಕೇಳದೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು. ಅನೇಕ ರೈತರು ಬೇರೆಯವರ ಹೊಲ ಮಾಡುತ್ತಿದ್ದಾರೆ. ಅವರ ಹೆಸರಿನಲ್ಲಿ ಹೊಲ ಇರುವದಿಲ್ಲ. ದಾಖಲೆ ಬೇರೆಯವರ ಹೆಸರಿನಲ್ಲಿ ಇರುತ್ತದೆ. ಆದಕಾರಣ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ನಿಜವಾಗಿ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ನೆರವು ನೀಡಬೇಕು. – ಅಪ್ಪಾಸಾಹೇಬ ದೇಸಾಯಿ, ರೈತ ಮುಖಂಡ, ಬೆಳಗಾವಿ
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.