ಬೆಳಗಾವಿಯ ಎರಡು ವೃದ್ಧಾಶ್ರಮಗಳಲ್ಲಿ ಕಾಲಿಟ್ಟ ಕೋವಿಡ್
Team Udayavani, Jun 2, 2021, 10:34 AM IST
ಬೆಳಗಾವಿ: ಬೆಳಗಾವಿಯಲ್ಲಿ ವೃದ್ಧಾಶ್ರಮಗಳನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೋವಿಡ್ ಸೋಂಕಿನಿಂದ ಅನೇಕರು ಸಂಕಷ್ಟದಲ್ಲಿದ್ದು, ಬೆಳಗಾವಿಯ ಎರಡು ವೃದ್ಧಾಶ್ರಮಗಳ 23 ಜನರಿಗೆ ಕೋವಿಡ್ ಪಾಸಿಟಿವ್ ದೃಢಟ್ಟಿದೆ.
ಬಸವನಕುಡಚಿ ಬಳಿಯ ದೇವರಾಜ ಅರಸ್ ಕಾಲೋನಿಯ ವೃದ್ಧಾಶ್ರಮದ 14 ಜನರು ಹಾಗೂ ತಾಲೂಕಿನ ಬಾಮನವಾಡಿ ಬಳಿಯ ವೃದ್ಧಾಶ್ರಮದ 9 ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಇದನ್ನೂ ಓದಿ: ದೂಧ್ ಸಾಗರ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ
ವೃದ್ಧಾಶ್ರಮದಲ್ಲಿ ಸೋಂಕು ಪತ್ತೆಯಾದ ಬಹುತೇಕರಲ್ಲಿ ರೋಗದ ಗುಣಲಕ್ಷಣ ಇಲ್ಲ. ಎರಡೂ ವೃದ್ಧಾಶ್ರಮಗಳ 23 ಜನರ ಪೈಕಿ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಳಿದ 20 ಜನರು ವೃದ್ಧಾಶ್ರಮದಲ್ಲೇ ಪ್ರತ್ಯೇಕ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.