ಹೆಚ್ಚುತ್ತಿವೆ ಚೆಕ್‌ಪೋಸ್ಟ್
Team Udayavani, Mar 27, 2021, 3:47 PM IST
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಮಹಾ ಗಡಿಯಿಂದ ಅಕ್ರಮವಾಗಿ ರಾಜ್ಯ ಪ್ರವೇಶ ಮಾಡುವ ರಸ್ತೆಗಳಲ್ಲಿಯೂ ಚೆಕ್ ಪೋಸ್ಟ್ ಸ್ಥಾಪಿಸಲು ಸಿದ್ಧತೆ ನಡೆಸಿದೆ.
ಗಡಿಯಲ್ಲಿ ಕಳೆದ ಎರಡು ದಿನಗಳಿಂದ ಜಿಲ್ಲಾಡಳಿತ ಮತ್ತು ತಾಲೂಕಾಡಳಿತಬಿಗಿ ಭದ್ರತೆಗೆ ಮುಂದಾಗಿದೆ. ಸ್ವಯಂಪ್ರೇರಣೆಯಿಂದ ಸಾರ್ವಜನಿಕರು ಗಡಿಪ್ರದೇಶಗಳನ್ನು ಬಂದ್ ಮಾಡಿ ಸುರಕ್ಷತೆಗೆ ಮುಂದಾಗುತ್ತಿದ್ದಾರೆ.
ತಾಲೂಕಿನ ಯಕ್ಸಂಬಾ-ಧಾನವಾಡ,ದೂಧಗಂಗಾ ನದಿ ಬಳಿ ಯಕ್ಸಂಬಾ- ದತ್ತವಾಡ, ಮಲಿಕವಾಡ-ದತ್ತವಾಡ ಮತ್ತು ಸದಲಗಾ -ದತ್ತವಾಡ ರಸ್ತೆಮೇಲೆ ಮಣ್ಣು ಮತ್ತು ಗಿಡ ಮರಗಳಟೊಂಗೆ ಹಾಕಿ ಮಹಾರಾಷ್ಟ್ರ-ಕರ್ನಾಟಕರಸ್ತೆ ಸಂಪರ್ಕವನ್ನು ಸಾರ್ವಜನಿಕರು ನಿಷೇಧಿ ಸಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗಡಿಗ್ರಾಮಗಳ ಜನತೆಯ ಹಿತದೃಷ್ಟಿಯಿಂದಉಪವಿಭಾಗಾಧಿ ಕಾರಿ ಯುಕೇಶಕುಮಾರಮತ್ತು ತಹಶೀಲ್ದಾರ್ ಪ್ರವೀಣ ಜೈನ್‌ಅವರ ಆದೇಶದ ಮೇರೆಗೆ ಕಂದಾಯನಿರೀಕ್ಷಕ ಆರ್.ಐ.ನಾಯಿಕ, ಸ್ಥಳೀಯಪೊಲೀಸ್ ಠಾಣೆಯ ಸಿಬ್ಬಂದಿ ಗಡಿಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಗಡಿಯಲ್ಲಿ ಬಿಗಿ ಭದ್ರತೆ: ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಗ್ರಾಮಗಳಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಒದಗಿಸಿದೆ. ನಿಪ್ಪಾಣಿ ಹಾಗೂ ಚಿಕ್ಕೋಡಿತಾಲೂಕಾ ವ್ಯಾಪ್ತಿಯಲ್ಲಿ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಮಹಾರಾಷ್ಟ್ರದಿಂದಬರುವ ಹಾಗೂ ರಾಜ್ಯದಿಂದ ಹೋಗುವಎಲ್ಲ ವಾಹನಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ. ನಿಪ್ಪಾಣಿ ತಾಲೂಕಿನ ನಿಪ್ಪಾಣಿ-ರಾಧಾನಗರಿ ರಸ್ತೆ,ಕೊಗನ್ನೊಳ್ಳಿ, ಬೋರಗಾಂವ-ಇಚಲಕರಂಜಿ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಆರಂಭವಾಗಿವೆ. ಚಿಕ್ಕೋಡಿತಾಲೂಕಿನಲ್ಲಿ ಸದಲಗಾ-ಧಾನವಾಡ, ಯಕ್ಸಂಬಾ-ದತ್ತವಾಡ, ಮಲಿಕವಾಡ- ದತ್ತವಾಡ ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪನೆಮಾಡಲು ತಾಲೂಕಾಡಳಿತ ಸಿದ್ಧತೆಯಲ್ಲಿದೆ. ಒಟ್ಟಾರೆ ಕೊರೊನಾ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕೋವಿಡ್ ನಿಯಂತ್ರಿಸಲುಸರ್ಕಾರದ ಆದೇಶ ಅನುಸಾರ ನಿಪ್ಪಾಣಿ ತಾಲೂಕು ಮತ್ತು ಚಿಕ್ಕೋಡಿ ತಾಲೂಕು ಗಡಿಯಲ್ಲಿ ಚೆಕ್ ಪೋಸ್ಟ್‌ಸ್ಥಾಪನೆ ಮಾಡಿ ಬಿಗಿ ಭದ್ರತೆಒದಗಿಸಲಾಗಿದೆ. ಮಹಾರಾಷ್ಟ್ರದಿಂದಬರುವ ಸಾರ್ವಜನಿಕರಿಗೆ ಆರ್‌ಟಿಪಿಎಸ್‌ರಿಪೋರ್ಟ್ ಕಡ್ಡಾಯವಾಗಿದೆ. ಮಹಾ ಗಡಿಯಿಂದ ಅಕ್ರಮವಾಗಿ ರಾಜ್ಯ ಪ್ರವೇಶ ಮಾಡುವ ರಸ್ತೆಗಳಲ್ಲಿಯೂ ಸಹ ಚೆಕ್‌ಪೋಸ್ಟ ಸ್ಥಾಪಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. -ಮನೋಜಕುಮಾರ ನಾಯಿಕ, ಡಿವೈಎಸ್‌ಪಿ, ಚಿಕ್ಕೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.