ಪೆಟ್ರೋಲಿಯಂ ಕೇಂದ್ರದಲ್ಲಿ ರಕ್ಷಣಾ ಅಣಕು ಪ್ರದರ್ಶನ
Team Udayavani, Dec 6, 2022, 2:31 PM IST
ಬೆಳಗಾವಿ: ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್.ಡಿ.ಆರ್.ಎಫ್ ವತಿಯಿಂದ ವಿಪತ್ತು ಸಂದರ್ಭ ನಿರ್ವಹಣೆ ಕುರಿತು ರಕ್ಷಣಾ ಮತ್ತು ಅಣಕು ಪ್ರದರ್ಶನ ಸೋಮವಾರ ದೇಸೂರಿನ ಬಿಪಿಸಿಎಲ್-ಐಓಸಿಎಲ್ ಪೆಟ್ರೋಲಿಯಂ ಶೇಖರಣಾ ಕೇಂದ್ರದಲ್ಲಿ ನಡೆಯಿತು.
ಪೆಟ್ರೋಲಿಯಂ ಸ್ಟೋರೇಜ್‌ಗಳಲ್ಲಿ, ಪೆಟ್ರೋಲಿಯಂ ವ್ಯಾಗನ್ ಟ್ಯಾಂಕರ್ ಸೋರಿಕೆ, ಬೆಂಕಿ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತಾಗಿ, ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಕೈಗೊಳ್ಳಲಾಯಿತು. ಬೆಳಗಾವಿ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ್ ಹಾಗೂ ಜಿಲ್ಲಾ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೊಡ ಅವರ ನಿರ್ದೇಶನದಂತೆ ಅಣಕು ಪ್ರದರ್ಶನ ಜರುಗಿತು.
ಅವಘಡ ಸಂಭವಿಸಿದ ಕುರಿತು ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚಿಸಿ, ಘಟನೆ ಸ್ಥಳಕ್ಕೆ ಭೇಟಿ ನೀಡಿ ಅವಘಡವನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.
ಸನ್ನಿವೇಶದಲ್ಲಿ ಶೇಖರಣೆಯಾದ ಪೆಟ್ರೋಲಿಯಂ ಕಳುಹಿಸುವ ಸಂದರ್ಭದಲ್ಲಿ ವ್ಯಾಗನ್ ಟ್ಯಾಂಕರ್ ಸೋರಿಕೆಯಾಗಿದ್ದು, ಅದರಿಂದ ಪೆಟ್ರೋಲಿಯಂ ಶೇಖರಣಾ ಕೇಂದ್ರದ ಒಳಗಡೆ ಬೆಂಕಿ ಸಂಭವಿಸಿತು. ಅವಘಡದಲ್ಲಿ ಗಾಯಗೊಂಡಿರುವ 25 ಕಾರ್ಮಿಕರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಿ, ಮೆಡಿಕಲ್ ಪೋಸ್ಟ್ ಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸನ್ನಿವೇಶವನ್ನು ಅಣಕು ಪ್ರದರ್ಶನದಲ್ಲಿ ಕೈಗೊಳ್ಳಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಮಾಸ್ತಿಹೊಳಿ, ವಡಗಾಂವ ಸಿಪಿಐ ಶ್ರೀನಿವಾಸ ಹಾಂಡ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಭಾರತ ಪೆಟ್ರೋಲಿಯಂ ಟೆರಟರಿ ಮ್ಯಾನೇಜರ್ ಸುರೇಶ ಅಲಾಟೆ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನೀಲಗಾರ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಕಿರಣ್ ನಾಯಕ್, ಎನ್.ಡಿ.ಆರ್. ಎಫ್ ಇನಸ್ಪೆಕ್ಟರ್ ಶಿವಕುಮಾರ, ಸಬ್ ಇನಸ್ಪೆಕ್ಟರ್ ಶಾಂತಿ ಲಾಲ್ ಜಟಿಯಾ, ಬಿಪಿಸಿಎಲ್ ರಕ್ಷಣಾ ಅಧಿಕಾರಿ ವಿಮಲ್ ಸಿ. ಪಿ, ಐಓಸಿಎಲ್ ಡಿಪೋ ಮ್ಯಾನೇಜರ್ ಪುನೀತ್ ಮುರುಡೇಶ್ವರ ಅಣಕು ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.
ಈ ಅಣುಕು ಪ್ರದರ್ಶನದಲ್ಲಿ 10 ಅಗ್ನಿಶಾಕದಳದ ಸಿಬ್ಬಂದಿಗಳು, 25 ಗƒಹರಕ್ಷಕ ದಳ, 25 ಎನ್.ಡಿ.ಆರ್.ಎಫ್, 20 ವೈದ್ಯಕೀಯ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ, 20 ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.