![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jun 10, 2019, 9:38 AM IST
ಬೈಲಹೊಂಗಲ; ಪಟ್ಟಣದ ದೊಡ್ಡಕೆರೆ ದಂಡೆಯ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬೈಲಹೊಂಗಲ: ಪಟ್ಟಣದ ಕೆರೆಯ ದಂಡೆಯ ನಿವಾಸಿಗಳು ಮಳೆ ನೀರಿನಿಂದಾಗುವ ಹಾನಿ ತಪ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು. ಶಾಶ್ವತ ನೆಲೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರವಿವಾರ ಪ್ರತಿಭಟನೆ ನಡೆಸಿದರು.
ತಮ್ಮಗಾಗುತ್ತಿರುವ ಅನ್ಯಾಯಕ್ಕೆ ಕೂಡಲೇ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ, ಕೀಲಿ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನಿವಾಸಿಗಳು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ ಸದಸ್ಯರ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಸ್ಥಳದಲ್ಲೆ ಕೆಲಕಾಲ ಮಕ್ಕಳು, ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಬೀದಿ ವ್ಯಾಪಾರಿಗಳ ಅಧ್ಯಕ್ಷ ಸುನೀಲ ಹಲಗಿ ಮಾತನಾಡಿ, ಕೆರೆಯ ದಂಡೆಯ ಮೇಲೆ ಮುಸ್ಲಿಂ ಸಮಾಜದ ಸೈಯ್ಯದ, ಸಿಖ್ ಸಮುದಾಯದ ನಿವಾಸಿಗಳು ಯಾವುದೇ ಮೂಲ ಸೌಕರ್ಯಗಳಿಲ್ಲದೇ 40 ವರ್ಷಗಳಿಂದ ವಾಸಿಸುತ್ತಿದ್ದು, ಈ ಸ್ಥಳದ ಮೇಲ್ಭಾಗದಿಂದ ಮಳೆಗಾಲದಲ್ಲಿ ಮಳೆ ನೀರು ಕೆರೆಗೆ ಹರಿದು ಬರುತ್ತದೆ. ಆ ಸಂದರ್ಭದಲ್ಲಿ ಈ ನಿವಾಸಿಗಳ ಮನೆಗೆ ನೀರು ನುಗ್ಗುತ್ತದೆ. ಚಿಕ್ಕಮಕ್ಕಳು ಆಟವಾಡುತ್ತಾ ನೀರಿನಲ್ಲಿ ತೇಲಿ ಹೋದ ಘಟನೆಗಳು ಸಹ ನಡೆದಿವೆ. ಈ ಕುರಿತು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ನೀರು ಹರಿಯಲು ದೊಡ್ಡ ಗಟಾರು ನಿರ್ಮಿಸಬೇಕು ಸ್ಪಂದಿಸದಿದ್ದರೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಖ್ ಸಮುದಾಯದ ಅಜಿತಸಿಂಗ್ ಮಾತನಾಡಿ, ಕೆರೆ ದಂಡೆಯ ಪುರಸಭೆ ಜಾಗೆಯಲ್ಲಿ ವಾಸಿಸುತ್ತಿರುವ ನಮಗೆ ಅಕ್ರಮ, ಸಕ್ರಮದಲ್ಲಿ ವಿದ್ಯುತ್ ಸೌಕರ್ಯ ಪಡೆದಿದ್ದನ್ನು ಬಿಟ್ಟು ಯಾವುದೆ ಸೌಕರ್ಯ ಸಿಕ್ಕಿಲ್ಲ. ಇಲ್ಲಿ ರಸ್ತೆ, ಗಟಾರಿಲ್ಲದೇ ಗಬ್ಬೆದ್ದು ನಾರುತ್ತಿರುವತ್ತಿರುವುದರಿಂದ ಸೊಳ್ಳೆಗಳ ಕಾಟ ಅತಿಯಾಗಿರುವುದರಿಂದ ಚಿಕ್ಕಮಕ್ಕಳು ಹಾಗೂ ವಯೋವೃದ್ದರು ಡೆಂಘೀ, ಮಲೇರಿಯಾದಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಸೌಕರ್ಯವಿಲ್ಲ. 40 ವರ್ಷದಿಂದ ವಾಸಿಸುತ್ತಿದ್ದರೂ ಹಕ್ಕು ಪತ್ರ ನೀಡಿಲ್ಲ ಎಂದು ದೂರಿಸದರು.
ಬಿಬಿಜಾನ ಸೈಯ್ಯದ, ಮಡಿವಾಳಯ್ಯ ಹಿರೇಮಠ ಮಾತನಾಡಿ, ಶ್ರೀಮಂತರಿಗೆ ಹಾಗೂ ಪ್ರಭಾವಿಗಳಿಗೆ ಪುರಸಭೆಯವರು ಮನೆ ಮಂಜೂರು ಮಾಡುತ್ತಾರೆ. ನಮ್ಮಂತಹ ಬಡವರ ಗೋಳನ್ನು ಕೇಳುವರು ಯಾರೂ ಇಲ್ಲ, ಇಲ್ಲಿನ ಕೆಲ ನಿವಾಸಿಗಳು ಖಾಸಗಿ ಜಾಗೆಯಲ್ಲಿ ವಾಸಿಸುತ್ತಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮೈನುದ್ದೀನ್ ಬೇಪಾರಿ, ಕುತೇಜಾ ಸೈಯ್ಯದ, ಶರೀಫಾ ಸೈಯ್ಯದ, ಹುಸೇನಬಿ ಸೈಯ್ಯದ, ಶೈನಾಜ ಸೈಯ್ಯದ, ಸಲ್ಮಾ ಸೈಯ್ಯದ, ಫಾತೀಮಾ ಸೈಯ್ಯದ, ಮಮತಾಜ ಸೈಯ್ಯದ, ಬಲಬೀರಸಿಂಗ್, ಸತನಾಮಸಿಂಗ್, ಜಗತ್‌ಸಿಂಗ್, ದೀಪಕ ಸಿಂಗ್, ಬಿಜಲ ಕೌರ, ಪರಂಗನಾ ಕೌರ, ಸದ್ದಾಮ ಸೈಯ್ಯದ, ಮಹ್ಮದ ಸೈಯ್ಯದ್, ಹುಸೇನ ಸೈಯ್ಯದ ಇದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.