ಚಿಕ್ಕೋಡಿ ಜಿಲ್ಲೆ ರಚನೆಗೆ ಆಗ್ರಹ


Team Udayavani, Oct 14, 2019, 12:12 PM IST

bg-tdy-2

ಚಿಕ್ಕೋಡಿ: ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೇ ಅಥಣಿ ತಾಲೂಕು ತೆಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳುವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಹೇಳಿದರು.

ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಭಿವೃದ್ಧಿ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೆ ಇನ್ನ ಮೇಲೆ ಹೋರಾಟದ ರೂಪುರೇಷ ಉಗ್ರರೂಪ ತಾಳಲಿದೆ ಎಂದರು.

ಕಳೆದ ಒಂದು ವಾರದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದಾಗ ಜಿಲ್ಲಾ ಹೋರಾಟ ಸಮಿತಿ ಭೇಟಿ ಮಾಡಿ ಮನವಿ ಮಾಡುವ ವೇಳೆಯಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದರು ಆದರೆ ಹೋರಾಟದ ಮತ್ತು ಜಿಲ್ಲೆಯ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡುವ ವೇಳೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಧ್ಯಸ್ಥಿಕೆ ವಹಿಸಿದಾಗ ಕೆಲಹೊತ್ತು ಮಾತಿನ ಚಕಮಕಿ ನಡೆದಿದೆ. ಸವದಿ ಅವರ ಮನಸ್ಸಿಗೆ ನೋವಾಗಿದ್ದರೇ ಜಿಲ್ಲಾ ಹೋರಾಟ ಸಮಿತಿ ಕ್ಷೇಮೆಯಾಚಿಸುತ್ತದೆ. ಆದರೆ ಜಿಲ್ಲೆ ಮಾಡಲು ಹಿಂದೆ ಸರಿಯದು ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೇನೆಂದು ಭರವಸೆ ನೀಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನ ದೊಡ್ಡದಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು, ರಾಜ್ಯಸಭೆ ಸದಸ್ಯರು ಮತ್ತು ಶಾಸಕರು ಇರುವುದರಿಂದ ಜಿಲ್ಲೆ ಘೋಷಣೆಗೆ ಒತ್ತಾಯ ಮಾಡಬೇಕು.

ಬಳ್ಳಾರಿ ಜಿಲ್ಲೆಯ ಒಬ್ಬ ಶಾಸಕ ಜಿಲ್ಲೆಗಾಗಿ ರಾಜೀನಾಮೆ ನೀಡಿದ ಬಳಿಕ ವಿಜಯನಗರ ಜಿಲ್ಲೆ ಮಾಡಲು ಸರ್ಕಾರ ಹೊರಟಿದೆ. ಆದರೆ ಬೆಳಗಾವಿ ಜಿಲ್ಲೆಯ ನಾಯಕರಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಸಾಹಿತಿ ಪ್ರೊ| ಎಸ್‌. ವೈ. ಹಂಜಿ, ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ, ತುಕರಾಮ ಕೋಳಿ ಮುಂತಾದವರು ಇದ್ದರು.

ಟಾಪ್ ನ್ಯೂಸ್

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laxmi-hebbalkar

Belagavi; ಅಭಯ್ ಪಾಟೀಲ್ ‘ಕೇಂದ್ರದ ಮೊಬೈಲ್’ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಗರಂ

vijaya-sankeshwar1

ಮಾಟಮಂತ್ರದ ಕಾಟ: ಕುಟುಂಬದ ವಿರುದ್ಧವೇ ದೂರು ನೀಡಲು ಮುಂದಾದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ

Road Mishap ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

Road Mishap ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

belagvi

Belagavi; ರೈತರಿಗೆ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.