ಕೆಎಲ್‌ಇ ಸಂಸ್ಥೆಯಿಂದ ಉ.ಕ. ಅಭಿವೃದ್ಧಿ

ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ; ಕೆಎಲ್‌ಇ ಸಂಸ್ಥೆ, ಕೋರೆ ಕೊಂಡಾಡಿದ ಸಿಎಂ

Team Udayavani, Jun 12, 2022, 3:05 PM IST

15

ಬೆಳಗಾವಿ: ಯಾವ ಸಂಸ್ಥೆಯಲ್ಲಿ ಶಿಕ್ಷಣ, ಜ್ಞಾನ ಇರುತ್ತದೋ ಅದರಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಂಗಣದಲ್ಲಿ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಮುಂಚೆ ಭೂಮಿ, ಬಂಡವಾಳ ಜಾಸ್ತಿ ಇದ್ದವರು ಜಗತ್ತು ಆಳುತ್ತಿದ್ದರು. 21ನೇ ಶತಮಾನದಲ್ಲಿ ಜ್ಞಾನ ಇದ್ದವರು ಜಗತ್ತನ್ನು ಆಳುತ್ತಾರೆ. ಜಗತ್ತಿನಲ್ಲಿಯೇ ಬೆಂಗಳೂರು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ವಿವಿಧ ದೇಶಗಳ ಗಣ್ಯರು ಬರುತ್ತಿದ್ದಾರೆ. ಕೆಎಲ್‌ಇ ಸಂಸ್ಥೆ ಜ್ಞಾನ ಮಂದಿರದಲ್ಲಿ ಕೆಲಸ ಮಾಡಲು ಸಿಕ್ಕಿದ ಭಾಗ್ಯ ನೀವೇ ಧನ್ಯರು. ಕೆಎಲ್‌ಇ ಸಂಸ್ಥೆಗೆ ದೊಡ್ಡ ಇತಿಹಾಸವಿದೆ. ಸಾವಿರಾರು ಗುರುಗಳು, ದಾನಿಗಳು ಕೂಡಿ ಕಟ್ಟಿರುವ ದೊಡ್ಡ ಸಂಸ್ಥೆ. ಕೆಎಲ್‌ಇ ಅತ್ಯಂತ ಪ್ರಜಾಸತಾತ್ಮಕ ಇರುವ ಶಿಕ್ಷಣ ಸಂಸ್ಥೆ. ಡಾ| ಪ್ರಭಾಕರ ಕೋರೆ ಸ್ಥಾನ ಅತ್ಯಂತ ಮಹತ್ವದ್ದು. ಅವರು ಚುನಾಯಿತ ಚೇರಮನ್‌ ಆಗಿದ್ದಾರೆ ಹೊರತು ನೇಮಕಗೊಂಡ ಚೇರಮನ್‌ ಅಲ್ಲ ಎಂದು ಹೊಗಳಿದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೆಎಲ್‌ಇ ಸಂಸ್ಥೆ ಪೂರಕವಾಗಿದೆ. ಕೆಎಲ್‌ಇ ಸಂಸ್ಥೆ ಇರದಿದ್ದರೆ ಕರ್ನಾಟಕದ ಸ್ಥಿತಿ ಹೇಗಿರುತ್ತಿತ್ತು ಎಂದು ನಾವು ಊಹಿಸಿಕೊಳ್ಳುವುದು ಅಸಾಧ್ಯ. ಕೋರೆ ಅವರಂತಹ ನೂರಾರು ಜನ ಬಂದರೆ ಈ ದೇಶದ ಚಿತ್ರಣವೇ ಬದಲಾಗುತ್ತದೆ. ಕೋರೆ ಅವರ ಜ್ಞಾನ ಭಂಡಾರ, ಯಶಸ್ಸಿನ ಪಯಣ ಹೀಗೆಯೇ ಮುಂದೆ ಸಾಗಲಿ ಎಂದರು.

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಕಟ್ಟುವಲ್ಲಿ ಸಪ್ತರ್ಷಿಗಳ ಕೊಡುಗೆ ಅಪಾರ. ಅವರ ತ್ಯಾಗದ ಫಲದಿಂದಲೇ ಸಂಸ್ಥೆ ಬೆಳೆದಿದೆ. ನನ್ನ ಒಬ್ಬನಿಂದ ಇದು ಬೆಳೆದಿಲ್ಲ. ಎಂಟನೇ ಋಷಿ ಅಂತ ನನ್ನನ್ನು ಸಂಬೋಧಿಸಲಾಗಿದೆ. ಸಪ್ತರ್ಷಿಗಳು ಶಿಕ್ಷಕರಾಗಿದ್ದರು, ನಾನು ಶಿಕ್ಷಕನಲ್ಲ. ಮನೆಯ ಕುಟುಂಬದ ಹಿರಿಯ ಮಾತ್ರ ಎಂದರು.

ಕೆಎಲ್‌ಇ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಉನ್ನತ ಸ್ಥಾನದಲ್ಲಿ ಇದ್ದಾರೆ. ಇನ್ಫೋಸಿಸ್‌ನ ಸುಧಾಮೂರ್ತಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ದಿ.ಅನಂತಕುಮಾರ, ಪ್ರಹ್ಲಾದ ಜೋಶಿ, ಮುರಗೇಶ ನಿರಾಣಿ ಅನೇಕ ರಾಜಕೀಯ ಮುಖಂಡರು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ಸಂಗತಿ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಸಂಸ್ಥೆಯ ರಚನಾತ್ಮಕ ಕಾರ್ಯಗಳಿಗೆ ಕೈಜೋಡಿಸಿವೆ. ಈ ದಿಸೆಯಲ್ಲಿ ಬಿಜೆಪಿಗೆ ಸಂಸ್ಥೆಯು ಚಿರಋಣಿಯಾಗಿದೆ. ನಮ್ಮ ಸಂಸ್ಥೆ ಯಾರಿಂದ ಉದ್ಧಾರ ಆಗುತ್ತದೆಯೋ ಅಂತವವರಿಗೆ ನಾವು ಬೆಂಬಲಿಸುತ್ತೇವೆ. ಹೀಗಾಗಿ ಅಭ್ಯರ್ಥಿಗಳಾದ ಅರುಣ ಶಾಹಾಪೂರ ಹಾಗೂ ಹನುಮಂತ ನಿರಾಣಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಕೆಎಲ್‌ಇ ಸಂಸ್ಥೆಯ ಶಿಕ್ಷಕರು ಹಾಗೂ ಪದವೀಧರರಿಗೆ ಕರೆ ನೀಡಿದರು.

ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿದರು. ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಅಮರಸಿಂಹ ಪಾಟೀಲ, ವಿಶ್ವನಾಥ ಪಾಟೀಲ, ಅನಿಲ ಪಟ್ಟೇದ, ಜಯಾನಂದ ಮುನವಳ್ಳಿ ಇದ್ದರು.

ಕೋರೆ ಹಿರೇ ಸ್ವಾಮಿಗಳಾಗಿ ಬಿಡಿ!

ಉಮೇಶ ಕತ್ತಿ ನಾವೆಲ್ಲ ಸೇರಿದಾಗ, “ನೀವು ರಾಜಕಾರಣಕ್ಕೆ ಬೇಡ, ಸ್ವಾಮಿಗಳಾಗಿ ಬಿಡಿ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು. ಆಗ ಕೋರೆ ಕೈ ಸನ್ನೆ ಮಾಡಿ ಪಕ್ಕದಲ್ಲಿ ಕೈ ಮಾಡಿದಾಗ “ನೀವೇ ಹಿರೇ ಸ್ವಾಮಿಗಳು’ ಎಂದು ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಪ್ರಭಾಕರ ಕೋರೆ ಸೇವೆ ಅದ್ಭುತ:

ಕೆಎಲ್‌ಇ ಸೊಸೈಟಿ ವಿಷಯಕ್ಕೆ ಬಂದಾಗ ಡಾ| ಪ್ರಭಾಕರ ಕೋರೆ ಬಹಳ ಸ್ವಾರ್ಥಿ ಆಗುತ್ತಾರೆ. ಶಿಕ್ಷಣ ಸಂಸ್ಥೆಗೆ ಜಾಗ ಕೇಳಲು ಬಂದಾಗ ದರ ಕಡಿಮೆ ಮಾಡಿ ಅಂತ ಹೇಳುತ್ತಾರೆ. ಡೋನೇಷನ್‌ ಕಡಿಮೆ ಮಾಡಿ ಅಂದಾಗ ನಂದೇನಿಲ್ಲಪ್ಪ ಎಲ್ಲ ಸೊಸೈಟಿಯದ್ದು ಅಂತಾರೆ. ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿದ ಸೇವೆ ಇತರೆ ಕ್ಷೇತ್ರದಲ್ಲಿ ಅದ್ಭುತವಾಗಿದೆ. ಸಂಸ್ಥೆಗಾಗಿ ತಮ್ಮ ಮನೆತನ, ಉದ್ಯೋಗ ಬಿಟ್ಟು ದುಡಿಯುತ್ತಾರೆ ಎಂದು ಕೋರೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದರು.

ಪ್ರಕಾಶ ಹುಕ್ಕೇರಿ ಮ್ಯಾಟ್ರಿಕ್‌ ಫೇಲ್‌ ಎಂದ ಕೋರೆ !

ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ನಮ್ಮ ಕೆಎಲ್‌ಇ ಸಂಸ್ಥೆಯ ಮಾಜಿ ವಿದ್ಯಾರ್ಥಿ ಆಗಿದ್ದು, ಆದರೆ ಜಿಎ ಹೈಸ್ಕೂಲ್‌ನಲ್ಲಿ ಮ್ಯಾಟ್ರಿಕ್‌(ಎಸ್ಸೆಸ್ಸೆಲ್ಸಿ) ಫೇಲ್‌ ಆಗಿದ್ದಾರೆ ಎಂದು ಪ್ರಭಾಕರ ಕೋರೆ ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೂ ಮೊದಲು ಮಾತನಾಡಿದ್ದ ಸಚಿವ ಉಮೇಶ ಕತ್ತಿ, ಹುಕ್ಕೇರಿ ಶಿಕ್ಷಕನೂ ಅಲ್ಲ, ಪದವೀಧರನೂ ಅಲ್ಲ. ಇಂತವರು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಟಾಪ್ ನ್ಯೂಸ್

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.