ಕಾಮಗಾರಿಗೆ ಅಡೆತಡೆ; ಕೆಲ ವೃತ್ತಗಳ ತೆರವು
Team Udayavani, Jan 6, 2020, 1:01 PM IST
ಹಾರೂಗೇರಿ: ಪಟ್ಟಣದಲ್ಲಿ ಜತ್-ಜಾಂಬೋಟಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಅಡಚಣೆಯಾಗಿದ್ದ ಮತ್ತು ರಸ್ತೆ ಮಧ್ಯೆದಲ್ಲಿದ್ದ ಮಹಾನ್ ನಾಯಕರ ವೃತ್ತಗಳನ್ನು ತಾಲೂಕಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಭದ್ರತೆಯಲ್ಲಿ ರವಿವಾರ ಯಶಸ್ವಿಯಾಗಿ ತೆರವುಗೊಳಿಸಿದರು.
ಬೆಳಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ವೃತ್ತಗಳಿರುವ ಸ್ಥಳಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೆರವುಗೊಳಿಸಿದರು. ಕಳೆದ ವಾರದಲ್ಲಿ ಭೇಟಿ ನೀಡಿ ವೃತ್ತಗಳನ್ನು ಪರಿಶೀಲಿಸಿದ್ದ ತಾಲೂಕು ಆಡಳಿತ, ಕಂದಾಯ ಇಲಾಖೆ, ಪುರಸಭೆ ಅಧಿಕಾರಿಗಳು, ರಸ್ತೆ ಮಧ್ಯೆದಲ್ಲಿರುವ ವೃತ್ತಗಳನ್ನು ತೆರವುಗೊಳಿಸಿ, ಅದಕ್ಕೆ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಗಾಯರಾಣ ಜಾಗವನ್ನು ನೀಡುವುದಾಗಿ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದ್ದರು. ಅದರಂತೆ ವೃತ್ತ ತೆರವುಗೊಳಿಸುವ ಮುನ್ನ ಗಾಯರಾಣ ಜಾಗ ಸೂಚಿಸುವಂತೆ ಅಧಿಕಾರಿಗಳೊಂದಿಗೆ ಕೆಲವರು ಮಾತುಕತೆ ನಡೆಸಿದರು. ರಸ್ತೆ ಪಕ್ಕದಲ್ಲಿದ್ದ ಸರ್ಕಾರಿ ಜಾಗದಲ್ಲಿ ಭಾವಚಿತ್ರ ಈಡಲು ಅನುಮತಿ ನೀಡಿದ್ದರಿಂದ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು.
ಕಳೆದ ಮೂರ್‍ನಾಲ್ಕು ತಿಂಗಳುಗಳಿಂದ ಜಟಿಲವಾಗಿದ್ದ ವೃತ್ತಗಳ ತೆರವು ಕಾರ್ಯ, ಆಯಾ ಸಮುದಾಯ, ಸಂಘಟನೆಗಳ ವಿರೋಧ, ಚರ್ಚೆ, ಸಭೆಗಳ ಬಳಿಕ ಶನಿವಾರ ಸಂಜೆ ರಾಯಬಾಗ ತಹಶೀಲ್ದಾರ್ ಕಚೇರಿಯಲ್ಲಿ ಸಂಘಟನೆಗಳ ಮುಖಂಡರೊಂದಿಗೆಚರ್ಚಿಸಿ, ಅವರ ಮನವೊಲಿಸುವ ಮೂಲಕ ರವಿವಾರಬೆಳಿಗ್ಗೆ ರಾಜ್ಯ ಹೆದ್ದಾರಿ ಕಾಮಗಾರಿಗೆ ಮುಕ್ತವಾಯಿತು. ಈ ವೇಳೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಮಾತನಾಡಿ, ಹಾರೂಗೇರಿ ಪಟ್ಟಣದಲ್ಲಿ ಅನಧೀಕೃತವಾಗಿ ನಿರ್ಮಾಣವಾಗಿರುವ ಕೆಲ ಸಂಘಟನೆಗಳ ಮೂರ್ತಿಗಳು, ಧ್ವಜ ಸ್ತಂಭಗಳನ್ನುಸಾರ್ವಜನಿಕರ ದೂರುಗಳನ್ನಾದರಿಸಿ, ಪುರಸಭೆ ನಿರ್ದೇಶನದ ಮೇರೆಗೆ ತಾಲೂಕಾಡಳಿತ ತೆರವು ಕಾರ್ಯಾಚರಣೆ ಕೈಗೊಂಡಿದೆ. ಇದಕ್ಕೆ ಸಂಘಟನೆಗಳು ಸಹಕಾರ ನೀಡಿ ಸ್ವಯಂ ಪ್ರೇರಿತರಾಗಿ ವೃತ್ತಗಳನ್ನು ತೆರವುಗೊಳಿಸಿ ಮಾದರಿಯಾಗಿದ್ದಾರೆ.
ಈಗ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಅವರಿಗೆ ಬದಲಿ ಜಾಗವನ್ನು ಗುರುತಿಸಲು ಸಾಧ್ಯವಿಲ್ಲ. ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿಯೇ ಮಹಾನ್ ನಾಯಕರ ಭಾವಚಿತ್ರಗಳನ್ನಿಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆಗಳು ಮಹಾನ್ ನಾಯಕರ ವೃತ್ತಗಳನ್ನು ಸ್ಥಾಪಿಸಲು ಪುರಸಭೆಯಲ್ಲಿ ಠರಾವು ಪಾಸ್ ಮಾಡಿ, ಮುಂದಿನ ಹಂತವಾಗಿ ತಾಲೂಕಾಡಳಿತ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಪಿಐ ಕೆ.ಎಸ್. ಹಟ್ಟಿ, ಡಿವೈಎಸ್‌ಪಿ ಗಿರೀಶ, ಪಿಎಸ್‌ಐ ಯಮನಪ್ಪ ಮಾಂಗ್, ಉಪತಹಶೀಲ್ದಾರ್ ಹಿರೇಮಠ, ಕಂದಾಯ ನಿರೀಕ್ಷಕ ರಾಜು ದಾನೊಳ್ಳಿ, ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ, ಕಂದಾಯ ಅಧಿಕಾರಿ ಶ್ರೀಶೈಲ ದಾಶ್ಯಾಳ, ಗ್ರಾಮ ಲೆಕ್ಕಾಧಿಕಾರಿ ಎನ್.ಪಿ. ನಕ್ಕರಗುಂದಿ, ಪ್ರಸಾದ ವೆರೆನಕರ ಹಾಗೂ ರಾಯಬಾಗ, ಕುಡಚಿ ಠಾಣೆಗಳ ಪಿಎಸ್‌ಐ ಮತ್ತು ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.