ಹೊರ ರಾಜ್ಯದ ಕ್ಷೌರಿಕರಿಗೆ ಉದ್ಯೋಗ ಲೈಸೆನ್ಸ್ ಕೊಡಬೇಡಿ
ಅನ್ಯ ರಾಜ್ಯದಿಂದ ಬಂದವರಿಗೆ ಪರವಾನಗಿ ನೀಡುವ ಮುನ್ನ ಸಮಾಜಕ್ಕೆ ಮಾಹಿತಿ ನೀಡಬೇಕು
Team Udayavani, Feb 19, 2022, 5:48 PM IST
ಹಿರೇಬಾಗೇವಾಡಿ: ಹೊರ ರಾಜ್ಯದವರಿಗೆ ಕ್ಷೌರಿಕ ಅಂಗಡಿ ನಡೆಸಲು ಗ್ರಾಮದಲ್ಲಿ ಉದ್ಯೋಗ ಲೈಸೆನ್ಸ್ ಕೊಡಬೇಡಿ ಎಂದು ಇಲ್ಲಿನ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜದವರು ಗ್ರಾಪಂ ಅಧ್ಯಕ್ಷೆ ಸ್ವಾತಿ ಅಡಿವೇಶ ಇಟಗಿ ಹಾಗೂ ಪಿಡಿಒ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪೂರ್ವಜರ ಕಾಲದಿಂದಲೂ ಸ್ಥಳೀಯ ಹಡಪದ ಅಪ್ಪಣ್ಣ ಸಮಾಜದವರು ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದವರಿಂದ ಗ್ರಾಮದಲ್ಲಿ ಕ್ಷೌರಿಕ ಅಂಗಡಿಗಳು ಪ್ರಾರಂಭವಾಗುತ್ತಿವೆ. ಇದು ನಮಗೆ ಆರ್ಥಿಕವಾಗಿ ಬಹಳ ಹೊರೆಬೀಳುತ್ತಿದ್ದು, ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ಆದ್ದರಿಂದ ಅನ್ಯ ರಾಜ್ಯದಿಂದ ಬಂದವರಿಗೆ ಪರವಾನಗಿ ನೀಡುವ ಮುನ್ನ ಸಮಾಜಕ್ಕೆ ಮಾಹಿತಿ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಗ್ರಾಪಂ ಕಾರ್ಯದರ್ಶಿ ಶಂಕರ ತಳವಾರ, ಗ್ರಾಪಂ ಸದಸ್ಯರಾದ ಬಸವರಾಜ ತೋಟಗಿ, ಆನಂದಗೌಡ ಪಾಟೀಲ, ಸಂಜಯ ದೇಸಾಯಿ, ಖತಾಲಬಿ ಗೋವೆ, ರಾಜು ಪಾಟೀಲ, ಸಂಘದ ಅಧ್ಯಕ್ಷ ಚಂಬಣ್ಣ ನಾವಲಗಿ, ಚಂದ್ರಪ್ಪ ನಾವಲಗಿ, ಮಂಜುನಾಥ ನಾವಲಗಿ, ಅರ್ಜುನ ನಾವಲಗಿ, ಶಿವಾನಂದ ನಾವಲಗಿ, ಸುರೇಶ ನಾವಲಗಿ, ಶಿವು ನಾವಲಗಿ, ರವಿ ನಾವಲಗಿ, ಬಸಲಿಂಗ ನಾವಲಗಿ, ಮಹೇಶ ನಾವಲಗಿ, ಮಲ್ಲೇಶ ನಾವಲಗಿ, ಅಶೋಕ ನಾವಲಗಿ, ಆನಂದ ನಾವಲಗಿ, ಫಕ್ಕೀರ ನಾವಲಗಿ, ಶಿವಬಸು ನಾವಲಗಿ, ರಮೇಶ ಹಂಪಣ್ಣವರ, ಕಲ್ಮೇಶ್ ನಾವಲಗಿ, ಸೇರಿದಂತೆ ಸಂಘದ ಸದಸ್ಯರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.