Drought ಮುಖ್ಯಮಂತ್ರಿ ಹುದ್ದೆಗಾಗಿ ಚರ್ಚೆಯಲ್ಲಿ ರೈತರ ಹಿತ ಮರೆತ ಕಾಂಗ್ರೆಸ್ ಸರ್ಕಾರ
ಬರ ಅಧ್ಯಯನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ
Team Udayavani, Nov 21, 2023, 5:40 PM IST
ಚಿಕ್ಕೋಡಿ: ಆಡಳಿತಾರೂಡ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಾನಾ?ನೀನಾ?ಎಂಬುದರಲ್ಲಿಯೇ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ಜನ ತತ್ತರಿಸಿ ಹೋಗುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಮಾಡುವುದನ್ನು ಬಿಟ್ಟು ತಮ್ಮ ಒಳರಾಜಕೀಯದಲ್ಲಿ ಜನರ ಸಮಸ್ಯೆ ಆಲಿಸುವುದನ್ನು ಮರೆತುಹೋಗುತ್ತಿದ್ದಾರೆ. ಯಾವುದೇ ಸರ್ಕಾರಕ್ಕೆ ಕಡಿಮೆ ಅವಧಿಯಲ್ಲಿ ಇಷ್ಟೊಂದು ಕೆಟ್ಟ ಹೆಸರು ಬಂದಿರುವ ಉದಾಹರಣೆ ಇಲ್ಲ, ತಮ್ಮ ಒಳ ರಾಜಕೀಯ ಬಿಟ್ಟು ರೈತರ ರಕ್ಷಣೆಗೆ ಬರಬೇಕು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಯಬಾಗ ವಿಧಾನಸಭೆ ಕ್ಷೇತ್ರದ ನಾಗರಮುನ್ನೊಳ್ಳಿ, ಇಟ್ನಾಳ, ಬೆಳಕೂಡ ಮತ್ತು ಚಿಕ್ಕೋಡಿ ಸದಲಗಾ ವಿಧಾನಸಭೆ ಕ್ಷೇತ್ರದ ಚಿಂಚಣಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡ ಬರ ಅಧ್ಯಯನ ತಂಡ ಮಳೆ ಇಲ್ಲದೆ ಹಾನಿಯಾಗಿರುವ ವಿವಿಧ ಬೆಳೆಗಳನ್ನು ವೀಕ್ಷಣೆ ಮಾಡಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದಡಿ ಬರ ಮತ್ತು ಪ್ರವಾಹ ಉಂಟಾದ ಸಂದರ್ಭದಲ್ಲಿ ಕೇಂದ್ರದಿಅದ ಹಣ ಬರುತ್ತದೆ. ಹಿಂದೆ ಯುಪಿಎ ಸರ್ಕಾರದ 2006 ರಿಂದ 2014ರ ಅವಧಿಯಲ್ಲಿ ರಾಜ್ಯಕ್ಕೆ 2200 ಕೋಟಿ ಬಂದಿದೆ. ಬಿಜೆಪಿ ಸರ್ಕಾರದ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ಇಲ್ಲಿಯವರಿಗೆ 13 ಸಾವಿರ ಕೋಟಿ ರೂ ಹಣ ಬಂದಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಮೇಲೆ ಗೂಭೆ ಕುಡಿಸುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಎದುರಾಗಿ ರೈತರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ರಾಯಬಾಗ ಮತ್ತು ಚಿಕ್ಕೋಡಿ ಕ್ಷೇತ್ರ ಬರಗಾಲ ಬರ ಎಂದು ಘೋಷಣೆ ಮಾಡಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕಷ್ಟ ಕೇಳಲು ಬರದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸಚಿವರು ಬರದೇ ಇದ್ದರೂ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸಹ ಒಣಗಿದ ಬೆಳೆ ವೀಕ್ಷಣೆ ಮಾಡಲಿಕ್ಕೆ ಬರದೇ ಇರುವುದು ನೋವಿನ ಸಂಗತಿಯಾಗಿದೆ. ಕೂಡಲೇ ರಾಜ್ಯ ಸರ್ಕಾರ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದರು.
ನಾಗರಮುನ್ನೊಳ್ಳಿ ಗ್ರಾಮದ ರೈತ ನಿಜಗೌಡ ಬಸಗೌಡನವರ, ಕಲ್ಲಪ್ಪ ಮಾಕನಿ, ನರಸಿಂಗ ಕವಟಗಿ ಜಮೀನಿಗೆ ಭೇಟಿ ಕೊಟ್ಟ ಬಿಜೆಪಿ ಬರ ಅಧ್ಯಯನ ತಂಡ ಒಣಗಿದ ಕಬ್ಬು, ಶೇಂಗಾ, ತೋಗರಿ, ಗೋವಿನಜೋಳದ ವೀಕ್ಷಣೆ ಮಾಡಿದರು. 1.5೦ ಲಕ್ಷ ರೂ ಖರ್ಚು ಮಾಡಿ ಮೂರು ಎಕರೆ ಕಬ್ಬಿನ ಬೆಳೆ ನಾಟಿ ಮಾಡಲಾಗಿತ್ತು. ಈಗ ಮಳೆ ಹೋಗಿದೆ. ಬಾವಿ ಮತ್ತು ಕೊಳವೆ ಬಾವಿ ಬತ್ತಿ ಹೋಗಿದೆ. ಕಬ್ಬು ಸಂಪೂರ್ಣ ನಾಶವಾಗಿದೆ. ಸಾಲ ಮಾಡಿ ಕಬ್ಬಿನ ನಾಟಿ ಮಾಡಿದರೆ ಕಬ್ಬಿನ ಬೆಳೆನು ಇಲ್ಲ ಸರ್ಕಾರದ ಸೂಕ್ತ ಪರಿಹಾರ ಕೂಡಾ ಬಂದಿಲ್ಲ ನಮ್ಮ ಗತಿ ಮುಂದೆ ಹ್ಯಾಂಗರೀ ಎಂದು ರೈತ ನಿಜಗೌಡ ಬಸಗೌಡನವರ ಬಿಜೆಪಿ ಬರ ಅಧ್ಯಯನ ತಂಡದ ಎದುರು ಅಳಲು ವ್ಯಕ್ತಪಡಿಸಿದರು. ರೈತನ ಅಳಲು ಕೇಳಿದ ಲಿಂಬಾವಳಿ ಅವರು ರೈತರ ಸಮಸ್ಯೆಗೆ ಸ್ಪಂದಿಸುವವರಿಗೂ ಸರ್ಕಾರದ ವೈಪಲ್ಯಗಳನ್ನು ಖಂಡಿಸುತ್ತೇವೆ. ರೈತರು ಧೈರ್ಯದಿಂದ ಇರಬೇಕು ಎಂದು ಸಾಂತ್ವನ ಹೇಳಿದರು.
ಬರ ಅಧ್ಯಯನ ತಂಡದ ಸದಸ್ಯ ಹಣಮಂತ ನಿರಾಣಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ. ಮಾಜಿ ಶಾಸಕ ಪಿ.ರಾಜೀವ, ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ,ರಾಜೇಶ ನೇರ್ಲಿ, ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ರಮೇಶ ಕಾಳನ್ನವರ, ದೇವರಾಜ ಪಾಶ್ಚಾಪೂರ, ಪ್ರಭು ಡಬ್ಬನ್ನವರ, ಸುರೇಶ ಬೆಲ್ಲದ, ಸಂಜೀವಗೌಡ ಪಾಟೀಲ, ಸಿದ್ದು ಖಿಂಡಿ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.