ಗುಳೆ ತಪ್ಪಿಸಲು ದುಡಿಯೋಣ ಬಾ
Team Udayavani, Mar 18, 2021, 12:29 PM IST
ಬೈಲಹೊಂಗಲ: ದುಡಿಯೋಣ ಬಾ ಅಭಿಯಾನಕ್ಕೆ ಎಲ್ಲ ಗ್ರಾಮೀಣ ಜನರುಕೈಜೋಡಿಸಬೇಕು. ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಮಕ್ಕಳ ಉಜ್ವಲಭವಿಷ್ಯಕ್ಕಾಗಿ ಉದ್ಯೋಗ ಖಾತ್ರಿಯನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾಂವಿ ತಿಳಿಸಿದರು.
ತಾಲೂಕಿನ ಮೇಕಲಮರಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ನಿರ್ದೇಶನದಂತೆ ದುಡಿಯೋಣ ಬಾ.. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬೈಲಹೊಂಗಲ ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿಗಳಲ್ಲಿಈ ಅಭಿಯಾನ ಮಾ.15 ರಿಂದ ಜೂ.15ರವರೆಗೆ 3 ತಿಂಗಳ ಕಾಲ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ತಾ.ಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಮಾತನಾಡಿ, ಗುಳೆತಪ್ಪಿಸಲು ನಿರ್ಗತಿಕರಿಗೆ ಬಡವರಿಗೆಉದ್ಯೋಗ ಖಾತ್ರಿಯಲ್ಲಿ ಉದ್ಯೋಗಕೊಡಲಾಗುವುದು. ನರೇಗಾದಡಿ ಹಲವಾರು ಕಾರ್ಯಕ್ರಮಗಳಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಕಾರ್ಯಕ್ರಮಗಳನ್ನು ವೈಯಕ್ತಕವಾಗಿ ಹಮ್ಮಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು
ಬೈಲಹೊಂಗಲ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್ ದಳವಾಯಿ, ಜಿ.ಪಂಸದಸ್ಯ ನಿಂಗಪ್ಪ ಅರಕೇರಿ, ಗ್ರಾ.ಪಂ ಅಧ್ಯಕ್ಷಚಂದ್ರಯ್ನಾ ಹಿರೇಮಠ ಮಾತನಾಡಿದರು.ಗ್ರಾ.ಪಂ ಸದಸ್ಯರಾದ ವಿಜಯಯಡಾಲ, ಕಾಶೀಮ ಜಮಾದಾರ, ರಾಜುಹಣ್ಣಿಕೇರಿ, ರಾಜು ಕಡಕೋಳ, ಭೀಮಪ್ಪಹುಲಮನಿ, ಕೃಷಿ ಇಲಾಖೆ, ಗ್ರಾ. ಪಂಸಿಬ್ಬಂದಿ, ಉದ್ಯೋಗ ಖಾತ್ರಿ ಕೂಲಿಕಾರರು, ಗ್ರಾಮಸ್ಥರು ಇದ್ದರು. ಪಿಡಿಒ ಶಶಿಕಲಾಅನಿಗೋಳ ಸ್ವಾಗತಿಸಿದರು. ಎಸ್ .ವಿ.ಹಿರೇಮಠ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.