ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ
ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಕಾರ್ಯಕರ್ತರ ಒಕ್ಕೊರಲ ಮನವಿ
Team Udayavani, Mar 28, 2021, 7:32 PM IST
ಹಿರೇಬಾಗೇವಾಡಿ: ಮನೆಯಲ್ಲಿನ ಕಾರ್ಯಕ್ರಮಗಳಲ್ಲಿ ಹೇಗೆ ನಾವು ಸ್ವಇಚ್ಛೆಯಿಂದ ಪಾಲ್ಗೊಂಡು ನಮ್ಮ ನಮ್ಮ ಪಾತ್ರ ಜವಾಬ್ದಾರಿ ನಿರ್ವಹಣೆ ಮಾಡುತ್ತೇವೆಯೋ ಹಾಗೆಯೇ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ 15 ದಿನಗಳ ಕಾಲ ಸ್ವ ಇಚ್ಛೆಯಿಂದ ಸಮಯ ನೀಡಿ ಮಂಗಲಾ ಅಂಗಡಿಯವರು ಕನಿಷ್ಠ 5 ಲಕ್ಷಕ್ಕಿಂತಲೂ ಅ ಧಿಕ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಹೇಳಿದರು.
ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಯವರ ಪರವಾಗಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ದಿ. ಸುರೇಶ ಅಂಗಡಿಯವರನ್ನು ಮೂರುವರೆ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೆವು. ಈಗ ಅದರ ಅಂತರ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು. ಮಂಗಲಾ ಅಂಗಡಿ ಮಾತನಾಡಿ, ದಿ. ಸುರೇಶ ಅಂಗಡಿಯವರಿಗೆ 4 ಬಾರಿ ಬೆಂಬಲಿಸಿ ಗೆಲ್ಲಿಸಿದ್ದೀರಿ. ಹಾಗೆಯೇ ಈಗ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯಲ್ಲಿ ನನಗೂ ಬೆಂಬಲಿಸಿ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು ನಂತರ ಮೋಹನ ಅಂಗಡಿ, ಚೇತನ ಅಂಗಡಿ, ಸಿದ್ದಪ್ಪ ಹುಕ್ಕೇರಿ ಮಾತನಾಡಿದರು.
ಹಿರೇಬಾಗೇವಾಡಿಯಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಂಗಲಾ ಅಂಗಡಿಯವರು ನಂತರ ಕೇದಾರ ಪೀಠದ ಶಾಖಾಮಠ ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅರಳಿಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ದೇವರು, ಬಡೆಕೊಳ್ಳಮಠ ಸದ್ಗುರು ನಾಗೇಂದ್ರ ಸ್ವಾಮೀಜಿ ಹಾಗೂ ಜಾಲಿ ಕರೆಮ್ಮ ದೇವಸ್ಥಾನದ ಉಳವಪ್ಪಜ್ಜನವರ ಆಶೀರ್ವಾದ ಪಡೆದುಕೊಂಡರು. ಘೂಳಪ್ಪ ಹೊಸಮನಿ, ಮೋಹನ ಅಂಗಡಿ, ಶ್ರದ್ಧಾ ಶೆಟ್ಟರ, ಚೇತನ ಅಂಗಡಿ, ಬಸನು ಸಪ್ಪಡ್ಲಿ, ಸಿದ್ದಪ್ಪ ಹುಕ್ಕೇರಿ, ರಘು ಪಾಟೀಲ, ಈರಪ್ಪ ಅರಳಿಕಟ್ಟಿ, ಫಡಿಗೌಡ ಪಾಟೀಲ, ಮಂಜುನಾಥ ಕುಂಬಾರ, ನೀಲಕಂಠ ಪಾರ್ವತಿ, ಪ್ರವೀಣ ಇಳಿಗೇರ, ಬಸಪ್ಪ ವಾಲಿಶೆಟ್ಟಿ, ನವೀನ ತೋಟಗಿ, ಚಂದ್ರು ಅಂಗಡಿ, ಚಂದ್ರು ಕಪರಿ, ರಾಜು ಕಪರಿ, ಬಾಬು ಫಡಗಲ್, ಶಂಕರಗೌಡ ಪಾಟೀಲ, ಸಾಗರ ಕೋಶಾವರ, ಉಳವಪ್ಪ ಚಚಡಿ, ಮಂಜು ಧರೆನ್ನವರ, ಆನಂದ ಪೊಲೀಶಿ, ಯಲ್ಲಪ್ಪ ಧರೆನ್ನವರ, ಮಲ್ಲಿಕಾರ್ಜುನ ಕುರಬರ, ಆನಂದ ನಂದಿ, ಮಲಗೌಡ ಹಾದಿಮನಿ, ರವಿ ಪಾರ್ವತಿ, ಸಂತೋಷ ಅಂಗಡಿ ಸೇರಿದಂತೆ ಅನೇಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.