![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 22, 2021, 4:29 PM IST
ಅಥಣಿ: ಒಕ್ಕಲುತನ ಮಾಡಬೇಕೆಂದರೆ ನೀರು ಬೇಕು. ಇಂತಹ ಒಂದು ನೀರಿನಸಮಸ್ಯೆಯನ್ನು ಮೆಟ್ಟಿ ನಿಂತು,ಕೃಷಿಹೊಂಡ ನಿರ್ಮಿಸಿಕೊಂಡು ಬೇಸಾಯದಲ್ಲಿ ಖುಷಿ ಕಾಣುತ್ತಿದ್ದಾರೆ ಅಥಣಿ ತಾಲೂಕು ಸಂಕೋನಟ್ಟಿ ಗ್ರಾಮದ ಎಂಜಿನಿಯರ್ ರಾಜಶೇಖರ ಟೋಪಗಿ.
ತಾಲೂಕಿನ ಕಾಲು ಭಾಗದಹಳ್ಳಿಗಳು ಕೃಷ್ಣಾನದಿ ತೀರದ ಫಲವತ್ತಾದಪ್ರದೇಶವಾದರೆ,ಮುಕ್ಕಾಲು ಪ್ರದೇಶದಲ್ಲಿನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ.ನೀರಿನ ಅನಿವಾರ್ಯತೆ ಇರುವ ಕಡೆರೈತರು ಅನೇಕ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಕೆಲವರುಕೆರೆ-ಕಟ್ಟೆಗಳು, ಕೊಳವೆಬಾವಿಗಳನ್ನೇಆಶ್ರಯಿಸಿದರೆ, ಇನ್ನೂ ಕೆಲವು ರೈತರು ಹೊಲಗಳಲ್ಲಿ ಕೃಷಿಹೊಂಡಗಳನ್ನುನಿರ್ಮಿಸಿಕೊಂಡು ನೀರಿನ ಕೊರತೆಯನ್ನುನೀಗಿಸಿದ್ದಾರಲ್ಲದೇ ಕಡು ಬೇಸಿಗೆಯಲ್ಲೂಸಮೃದ್ಧ ಕೃಷಿ ಕೈಗೊಂಡಿದ್ದಾರೆ.
ಆಗಾಗ ನಾಲೆಯಲ್ಲಿ ಸಿಗುವ ನೀರು ಹಾಗೂ ಕೊಳವೆಬಾವಿ ನೀರನ್ನು ಕೃಷಿಹೊಂಡಕ್ಕೆ ತುಂಬಿಕೊಂಡು ಬೇಸಿಗೆಯಲ್ಲೂ ತೊಂದರೆಯಾಗದಂತೆನೋಡಿಕೊಂಡಿದ್ದಾರೆ.ರಾಜಶೇಖರ ಅವರು ಸುಮಾರು4 ಕೋಟಿ ಲೀಟರ್ ನೀರುಸಂಗ್ರಹವಾಗುವಷ್ಟು ದೊಡ್ಡದಾದ ಕೃಷಿಹೊಂಡ ನಿರ್ಮಿಸಿದ್ದು, ಕೃಷಿಹೊಂಡದನೀರನ್ನೇ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಕೃಷಿಹೊಂಡ120 ಅಡಿ ಉದ್ದ, 180ಅಡಿ ಅಗಲ ಹಾಗೂ53ಅಡಿ ಆಳವಿದೆ. ಇದೇಹೊಂಡದ ನೀರನ್ನು ಇವರುವರ್ಷದುದ್ದಕ್ಕೂ ಬಳಸಿ 7ಎಕರೆದ್ರಾಕ್ಷಿ ಹಾಗೂ 02 ಎಕರೆಯಲ್ಲಿಇತರೆ ಹಣ್ಣು ಬೆಳೆಯುತ್ತಾರೆ. ಅದಕ್ಕೆ ಈಹೊಂಡದ ನೀರನ್ನೇ ಬಳಸುತ್ತಾರೆ.ಆಧುನಿಕ ವ್ಯವಸ್ಥೆ ಹಾಗೂ ಕೃಷಿಗೆಪೂರಕ ವಾತಾವರಣ ಅರ್ಥಮಾಡಿಕೊಂಡು ತಂತ್ರಜ್ಞಾನಯುಕ್ತ ಕೃಷಿ ಮಾಡಿದರೆ ರೈತ ಅಭಿವೃದ್ಧಿಯಾಗುತ್ತಾನೆ ಎನ್ನುತ್ತಾರೆ ರಾಜಶೇಖರ.
ಹೊಂಡವನ್ನು ಒಮ್ಮೆ ತುಂಬಿಸಿದರೆವರ್ಷದವರೆಗೂ ಕೃಷಿಗೆ ನೀರಿನ ಅಭಾವಉಂಟಾಗಲ್ಲ. ಹೊಂಡದಿಂದ ಬಹಳ ಅನುಕೂಲವಿದೆ. ನಮ್ಮ ತೋಟದಲ್ಲಿಮೂರು ಬೋರ್‌ವೆಲ್‌ಗಳಿದ್ದು ಅದರನೀರನ್ನು ಸಂಪೂರ್ಣವಾಗಿ ಕೃಷಿ ಹೊಂಡತುಂಬಿಸಲು ಬಳಸುತ್ತೇವೆ.ಮಳೆ ಬಂದಾಗಲೂ ನೀರು ಸಂಗ್ರಹಿಸಲು ಇದು ನೆರವಾಗುತ್ತದೆಎನ್ನುತ್ತಾರೆ ಎಂಜಿನಿಯರ್ ರಾಜಶೇಖರಟೊಪಗಿ.
-ಸಂತೋಷ ರಾ. ಬಡಕಂಬಿ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.