ಕರ್ನಾಟಕ – ಮಹಾರಾಷ್ಟ್ರ ನಡುವೆ ಸಮನ್ವಯತೆ ವೃದ್ಧಿಸಿ
ಕೊಲ್ಲಾಪುರದಲ್ಲಿ ಗಡಿ ಜಿಲ್ಲೆ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಉಭಯ ರಾಜ್ಯಪಾಲರ ಸಲಹೆ
Team Udayavani, Nov 5, 2022, 6:40 AM IST
ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿಯ ಸಮಸ್ಯೆಗಳು ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ಗಡಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಉಭಯ ರಾಜ್ಯಗಳ ರಾಜ್ಯಪಾಲರು ಸಲಹೆ ನೀಡಿದರು.
ಕೊಲ್ಲಾಪುರದ ರೆಸಿಡೆನ್ಸಿ ಕ್ಲಬ್‌ನಲ್ಲಿ ಶುಕ್ರವಾರ ಜರಗಿದ ಅಂತಾರಾಜ್ಯ ಗಡಿ ಜಿಲ್ಲೆಯ ಅಧಿ ಕಾರಿಗಳ ಸಮನ್ವಯ ಸಭೆಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅಭಿಪ್ರಾಯಪಟ್ಟರು.
ಗೆಹ್ಲೋಟ್ ಅವರು ರಾಜ್ಯ ಮಟ್ಟದ ಸಮನ್ವಯ ಸಭೆ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿ, ಗಡಿ ಭಾಗದ ಜಿಲ್ಲಾಡಳಿತಗಳು ಪರಸ್ಪರ ಸಮನ್ವಯತೆ ಬೆಳೆಸಿಕೊಳ್ಳಬೇಕು. ಸಾರ್ವಜನಿಕರಿಗೆ ಸರಕಾರದ ಯೋಜನೆಗಳ ಲಾಭ ಪಡೆ ಯಲು ಪ್ರೇರೇಪಿಸಬೇಕು ಎಂದರು.
ಭಗತ್ ಸಿಂಗ್ ಕೋಶ್ಯಾರಿ ಮಾತನಾಡಿ, ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳ ನಡುವೆ ಉತ್ತಮ ಸಮನ್ವಯವಿದೆ. ಉಭಯ ರಾಜ್ಯಗಳ ಅ ಧಿಕಾರಿಗಳು ಚರ್ಚಿಸಿದ ವಿಷಯವನ್ನು ಆಯಾ ರಾಜ್ಯ ಸರಕಾರಕ್ಕೆ ತಿಳಿಸಲಾಗುವುದು. ಈ ಸಭೆ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಚರ್ಚಿಸಿದ ವಿಷಯಗಳ ಪ್ರಸ್ತಾವನೆಗಳನ್ನು ಎರಡೂ ರಾಜಭವನಗಳಿಗೆ ಕಳುಹಿಸಬೇಕು. ಇದರ ಬಗ್ಗೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಲಾಗುವುದು ಎಂದು ಉಭಯ ರಾಜ್ಯಗಳ ರಾಜ್ಯಪಾಲರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.