ಎಪಿಎಲ್ ಕಾರ್ಡ್‌ಗೆ ಇಂದಿನಿಂದ ಆನ್‌ಲೈನ್ ಅರ್ಜಿ: ಖಾದರ್
Team Udayavani, Jan 9, 2017, 3:45 AM IST
ಬೆಳಗಾವಿ: ಎಪಿಎಲ್ ಕಾರ್ಡ್ ಪಡೆಯಲು ಸೋಮವಾರದಿಂದ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ತಾತ್ಕಾಲಿಕ ಕಾರ್ಡ್ ಮನೆಗೇ ಬರುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಈ ವ್ಯವಸ್ಥೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ದೊರೆಯಲಿದೆ. 15 ದಿನಗಳೊಳಗೆ ಸ್ಪೀಡ್‌ಪೋಸ್ಟ್ ಮೂಲಕ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ. ಆಗ ನೀವು 100 ರೂ. ಶುಲ್ಕ ನೀಡಬೇಕು. ತಾತ್ಕಾಲಿಕ ಕಾರ್ಡ್ ತಲುಪಿದ 15 ದಿನಗಳ ನಂತರ ದಾಖಲಾತಿ ಪರಿಶೀಲಿಸಿ ಶಾಶ್ವತ ಕಾರ್ಡ್ ನೀಡಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್ ಅರ್ಜಿ ಸಲ್ಲಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ. ನಾಗರಿಕರು www.ahara.kar.nic.in ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
15 ದಿನಗಳಲ್ಲಿ ಬಿಪಿಎಲ್ ಕಾರ್ಡ್:
ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇನ್ನು 15 ದಿನಗಳಲ್ಲಿ ಆರಂಭಗೊಳ್ಳಲಿದೆ. ಗ್ರಾಮೀಣ ಜನರು ಗ್ರಾಪಂ ಮತ್ತು ನಗರ ಪ್ರದೇಶದ ಜನರು ಸ್ಥಳೀಯ ಸಂಸ್ಥೆಗಳಲ್ಲಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಗ್ರಾಪಂಗೆ 15 ರೂ. ಹಾಗೂ ಕಾರ್ಡ್ ಪಡೆಯುವಾಗ 70 ರೂ. ಅಂಚೆ ವೆಚ್ಚ ಪಾವತಿಸಬೇಕಾಗುವುದು. ಬಿಪಿಎಲ್ ಕಾರ್ಡ್ ಅರ್ಜಿಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದರು.
ಪಡಿತರ ದುರುಪಯೋಗ ತಡೆಗಟ್ಟಲು ಕೂಪನ್ ಪದ್ಧತಿ ಜಾರಿಗೆ ತರಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ಪದ್ಧತಿ ಜಾರಿಗೆ ಬರಲಿದೆ. ಈ ವ್ಯವಸ್ಥೆ ಜಾರಿಗೆ ತಂದಾಗಿನಿಂದ ಇದುವರೆಗೆ 40 ಸಾವಿರ ಲೋಡ್ ಆಹಾರ ಧಾನ್ಯ ಉಳಿತಾಯ ಮಾಡಲಾಗಿದೆ ಎಂದು ನುಡಿದರು.
ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಬಗ್ಗೆ ಅವರು ಪ್ರಸ್ತಾಪಿಸಿ, ಇದು ಜಾರಿಗೆ ಬಂದು ಒಂದೂವರೆ ವರ್ಷವಾದರೂ ಕರ್ನಾಟಕದಲ್ಲಿ ಇದರ ಅನುಷ್ಠಾನವಾಗಿಲ್ಲ. ಕೇಂದ್ರ ಸರಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದರು.
ಮೋದಿ ಸರ್ವಾಧಿಕಾರಿ: ಅಪನಗದೀಕರಣ ಮೋದಿ ಸರ್ವಾಧಿಕಾರಿತನದ ತೀರ್ಮಾನ. ಹೊಸ ವರ್ಷದಲ್ಲಿ ಅವರು ಮಾಡಿದ ಭಾಷಣ ಕೇವಲ ಚುನಾವಣಾ ಗಿಮಿಕ್ ಎಂದು ಟೀಕಿಸಿದರು.
ದೇಶದಲ್ಲೇ ಈ ವ್ಯವಸ್ಥೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ದೊರೆಯಲಿದೆ. 15 ದಿನಗಳೊಳಗೆ ಸ್ಪೀಡ್‌ಪೋಸ್ಟ್ ಮೂಲಕ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ. ಆಗ ನೀವು 100 ರೂ. ಶುಲ್ಕ ನೀಡಬೇಕು. ತಾತ್ಕಾಲಿಕ ಕಾರ್ಡ್ ತಲುಪಿದ 15 ದಿನಗಳ ನಂತರ ದಾಖಲಾತಿ ಪರಿಶೀಲಿಸಿ ಶಾಶ್ವತ ಕಾರ್ಡ್ ನೀಡಲಾಗುವುದು.
– ಯು.ಟಿ.ಖಾದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.