ಮಲೇರಿಯಾ ಮುಕ್ತಗೊಳಿಸಲು ಪ್ರತಿಯೊಬ್ಬರು ಕೈ ಜೋಡಿಸಿ
Team Udayavani, Jun 3, 2019, 1:25 PM IST
ಬೆಳಗಾವಿ: ಮಲಪ್ರಭಾ ನಗರ ಹಾಗೂ ವಡಗಾವಿಯ ಮಾಧವಪುರದಲ್ಲಿ ಮಲೇರಿಯಾ ಮಾಸಾಚರಣೆ ನಿಮಿತ್ತ ಜಾಥಾ ನಡೆಯಿತು.
ಬೆಳಗಾವಿ: ಭಾರತವನ್ನು 2022ರೊಳಗೆ ಮಲೇರಿಯಾ ಮುಕ್ತ ಮಾಡಬೇಕಾಗಿದ್ದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಂ.ಎಸ್. ಪಲ್ಲೇದ ಹೇಳಿದರು.
ಜಿಲ್ಲಾ ಮಟ್ಟದ ಮಲೇರಿಯಾ ಮಾಸಾಚರಣೆ ನಿಮಿತ್ತ ಮಲಪ್ರಭಾ ನಗರ ಹಾಗೂ ವಡಗಾವಿಯ ಮಾಧವಪುರದಲ್ಲಿ ಶನಿವಾರ ನಡೆದ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಲೇರಿಯಾ ನಿರ್ಮೂಲನೆ ಕಾರ್ಯ ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯೊಂದಿಗೆ ಆರಂಭವಾಗಿದ್ದು, ಮಲೇರಿಯಾ ನಿರ್ಮೂಲನೆಯಲ್ಲಿ ಪ್ರಮುಖವಾಗಿ ಸೊಳ್ಳೆಗಳ ನಿಯಂತ್ರಣ, ಜೈವಿಕ ಪರಿಸರ ನಿಯಂತ್ರಣ ಕ್ರಮಗಳು ಪರಿಸರ ನೈರ್ಮಲ್ಯ, ಪತ್ತೆಗೊಂಡ ರೋಗಿಗಳಿಗೆ ಶೀಘ್ರ ಚಿಕಿತ್ಸೆ ನೀಡುವುದು. ಮುಖ್ಯವಾಗಿ ಸಮುದಾಯದ ಸಹಭಾಗಿತ್ವದಿಂದ ಮಲೇರಿಯಾ ನಿರ್ಮೂಲನೆ ಸಾಧ್ಯವಾಗುವುದು. 2018ರಲ್ಲಿ 24 ಕೇಸುಗಳಾಗಿದ್ದು, ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದರು.
ಮಾಜಿ ಸದಸ್ಯ ರತನ ಮಾಸೇಕರ ಮಲೇರಿಯಾ ಮಾಸಾಚರಣೆಯ ಆರೋಗ್ಯ ಶಿಕ್ಷಣಕ್ಕೆ ಸಂಬಂಧಪಟ್ಟ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಕೀಟ ಶಾಸ್ತ್ರತಜ್ಞ ಗಣಪತಿ ಬಾರ್ಕಿ, ಕೀಟ ಶಾಸ್ತ್ರತಜ್ಞೆ ಶಿಲ್ಪಾ ಹಳೆಮನಿ, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಯಲಿಗಾರ ಸ್ವಾಗತಿಸಿದರು. ಸಿ.ಜಿ. ಅಗ್ನಿಹೋತ್ರಿ ವಂದಿಸಿದರು. ಅಹ್ಮದ ಕಲೀಮುಲ್ಲಾ ನಿರೂಪಿಸಿದರು.
ಜಾಥಾ ಕಾರ್ಯಕ್ರಮ: ಪಾಲಿಕೆ ಮಾಜಿ ಸದಸ್ಯ ರಮೇಶ ಸೊಂಟಕ್ಕಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಂ.ಎಸ್. ಪಲ್ಲೇದ, ಐಸಿಎಂಆರ್ ಅಧಿಕಾರಿ ಡಾ| ಬನಪ್ಪಾ ಉಂಗುರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಿ.ಎನ್. ತುಕ್ಕಾರ, ತಾಲೂಕಾ ಆರೋಗ್ಯಾಧಿಕಾರಿ ಡಾ| ಎಸ್.ಆರ್. ಡುಮ್ಮಗೋಳ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ನ.14ನೇ ಶಾಲೆಯ ಶಿಕ್ಷಕ ವೃಂದದವರು, ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.