ಮುರಗೋಡ ಇನ್ಸಪೆಕ್ಟರ್ ಹೆಸರಿನಲ್ಲಿ ನಕಲಿ ವಾಟ್ಸಪ್, ಫೇಸ್ ಬುಕ್ : ದೂರು ದಾಖಲು
Team Udayavani, Aug 3, 2023, 11:48 PM IST
ಬೆಳಗಾವಿ: ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಇನ್ಸಪೆಕ್ಟರ್ ಅವರ ಹೆಸರಿನಲ್ಲಿ ನಕಲಿ ವಾಟ್ಸಪ್ ಹಾಗೂ ಪೇಸ್‌ಬುಕ್ ಸೃಷ್ಟಿಸಿ ಫರ್ನಿಚರ್ ಮಾರುವ ನೆಪದಲ್ಲಿ ಜನರಿಂದ ಹಣ ಪಡೆಯಲು ಯತ್ನಿಸುತ್ತಿದ್ದ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುರಗೋಡ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮೌನೇಶ್ವರ ಮಾಲಿ ಪಾಟೀಲ ಅವರ ಸಮವಸ್ತ್ರವಿರುವ ಭಾವಚಿತ್ರವನ್ನು ಅಪರಿಚಿತ ವ್ಯಕ್ತಿಯೊಬ್ಬ ಬಳಸಿ ನಕಲಿ ವಾಟ್ಸಪ್ ಸೃಷ್ಟಿಸಿದ್ದಾನೆ. ಜತೆಗೆ ಫೇಸ್ ಬುಕ್ ಅಕೌಂಟ್ ತೆರೆದಿದ್ದಾನೆ. ಇನ್ಸಪೆಕ್ಟರ್ ಗೆ ಇನ್ನೊಬ್ಬ ಸ್ನೇಹಿತನಂತೆ ಸಿಐಎಸ್ ಎಫ್ ಅಧಿಕಾರಿ ನವಿನ್ ಸಿಂಗ್ ತೋಮರ್ ನಂತೆ ವಾಟ್ಸಪ್ ಮಾಡಲಾಗಿದೆ.
ನವಿನ್ ಸಿಂಗ್ ಅವರಿಗೆ ಬೇರೆ ಕಡೆಗೆ ವರ್ಗಾವಣೆ ಆಗಿದೆ. ಇವರ ಮನೆಯ ಫರ್ನಿಚರ್ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಿದೆ ಎಂದು ಹೇಳಿ ಇನ್ಸಪೆಕ್ಟರ್ ಅವರ ಹೆಸರಿನಿಂದ ಸಾರ್ವಜನಿಕರಿಗೆ ಮೆಸೆಜ್ ಮಾಡಲಾಗಿದೆ. ಇದನ್ನು ನಂಬಿ ಒಬ್ಬರು ಹಣ ಕಳುಹಿಸಲು ಮುಂದಾಗಿದ್ದರು. ಆಗ ಸಂಶಯ ಬಂದು ಇನ್ಸಪೆಕ್ಟರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ವಂಚನೆ ಜಾಲ ಎಂಬುದು ಬಯಲಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ಇನ್ಸಪೆಕ್ಟರ್ ಮೌನೇಶ್ವರ ಮಾಲಿಪಾಟೀಲ ಅವರು ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.