ರೈತರ ಹಿತ ಕಾಯುವ ಜೆಡಿಎಸ್
ಜನತಾ ಜಲಧಾರೆ ಯಾತ್ರೆ
Team Udayavani, Apr 21, 2022, 3:44 PM IST
ಮೂಡಲಗಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಿರಂತರವಾಗಿ ಅನ್ನದಾತರ ಹಿತಕಾಯುವ ಆಲೋಚನೆ ನಡೆಸುತ್ತಾ ಬಂದಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್ ಪಕ್ಷ ಜನತಾ ಜಲಧಾರೆ ಯಾತ್ರೆ ಮೂಲಕ ಜನರಲ್ಲಿ ನೀರಾವರಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಅರಭಾವಿ ಮತ ಕ್ಷೇತ್ರದ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಹೇಳಿದರು.
ಪಟ್ಟಣಕ್ಕೆ ಬುಧವಾರ ಆಗಮಿಸಿದ ಜೆಡಿಎಸ್ ಜನತಾ ಜಲಧಾರೆ ರಥಕ್ಕೆ ಕಲ್ಮೇಶ್ವರ ವೃತ್ತದಲ್ಲಿ ಸ್ವಾಗತಕೋರಿ, ಪಟ್ಟಣದಲ್ಲಿ ನಡೆದ ರಥಯಾತ್ರೆಯ ನಂತರ ಬಸ್ ನಿಲ್ದಾಣ ಹತ್ತಿರ ಜರುಗಿದ ಸಮಾರಂಭದಲ್ಲಿ ಮಾತನಾಡಿದ ಅವರು, ಘಟಪ್ರಭಾದ ಹತ್ತಿರ ಇರುವ ಧೂಪದಾಳ ಜಲಾಶಯ ನಿರ್ಮಾಣವಾದ ನಂತರದಲ್ಲಿ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಗಳಾಗಲಿ ಹೂಳು ತೆಗೆಯುವ ಕೆಲಸ ಮಾಡಿಲ್ಲ. ಹೂಳು ತೆಗೆಯುವ ಕಾರ್ಯ ಮಾಡಿದರೆ ಈ ಭಾಗದ ಜನರ ನೀರಿನ ಸಮಸ್ಯೆ ತಪ್ಪಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಪರ ಚಿಂತನೆ ನಡೆಸುತ್ತಿಲ್ಲ. ಬಿಜೆಪಿ ಕಾರ್ಯಕಾರಣಿ ಹೆಸರಿನಲ್ಲಿ ಜನಪರ ಯಾವುದೇ ಚಿಂತನೆ ಮಾಡದೇ ಕೇವಲ ಅಧಿಕಾರಕ್ಕೆ ಹೇಗೆ ಬರಬೇಕು, ಚುನಾವಣೆ ಹೇಗೆ ಗೆಲ್ಲಬೇಕು ಎಂಬುದಷ್ಟೇ ಚಿಂತಿಸುತ್ತಿದೆ. ಇನ್ನೂ ಕಾಂಗ್ರೆಸ್ ನಡೆಗೆ ಕೃಷ್ಣೆಯ ಪಾದಯಾತ್ರೆ ನಡೆಸಿ, ನೀರಾವರಿಗೆ ಆದ್ಯತೆ ನೀಡಲಿಲ್ಲ. ಶಿಕ್ಷಣ, ಆರೋಗ್ಯ, ಮಹಿಳಾ ಸ್ವಾವಲಂಬನೆ, ಬೆಲೆ ಇಳಿಕೆ, ಜನಸಾಮಾನ್ಯರ ಬದುಕು ಮೇಲ್ದರ್ಜೆಗೇರಿಸುವುದು ಜೆಡಿಎಸ್ ಕಾರ್ಯ ಎಂದರು.
ಹಂದಿಗುಂದ ಶ್ರೀಗಳು, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರಾದ ಎ.ಕೆ.ತಾಂಬೋಳಿ, ಶಿವು ಸಣ್ಣಕ್ಕಿ, ಸತ್ತೇವ್ವಾ ಅರಮನಿ, ಬೆಳಗಾವಿ ಸೇವಾದಳ ಜಿಲ್ಲಾಧ್ಯಕ್ಷ ನಕುಲ ಬೋವಿ, ಜಿಲ್ಲಾ ಯುವ ಮುಖಂಡ ಸುನೀಲ, ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ ಹೊಸಕೋಟಿ, ಪ್ರಕಾಶ ಕಾಳಶೆಟ್ಟಿ, ಮಾರುತಿ ಸುಂಕದ, ಬಸವರಾಜ ಕೌಜಲಗಿ, ಸಂಗಯ್ನಾ ಹಿರೇಮಠ, ಸಂಗಪ್ಪ ಕಳ್ಳಿಗುದಿ, ಲಿಂಗರಾಜ ಅಂಗಡಿ, ಶಂಕರ ಗಿಡಗೌಡ್ರ, ಶಿವಲಿಂಗ ಹಾದಿಮನಿ, ಮೋಸಿನ ತಾಂಬೋಳಿ, ಶಂಕರ ಅಡಿಗಿನಾಳ, ಶ್ರೀಕಾಂತ ಪರುಶೆಟ್ಟಿ, ರಾಮನಗೌಡ ಪಾಟೀಲ, ದರೇಪ್ಪ ಖಾನಗೌಡ್ರ, ಮಲ್ಲಿಕ ಅರಭಾಂವಿ, ಹಸನ ನದಾಫ್ ಹಾಗೂ ಅರಭಾವಿ ಕ್ಷೇತ್ರದ ಜೆಡಿಎಸ್ ಮುಖಂಡರು, ರೈತರು, ಕಾರ್ಯಕರ್ತರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.